ಬರ ನಿರ್ವಹಣೆಗೆ ಸಕಲ ಸಿದ್ದತೆ – ಶಾಸಕ ಕೆ.ರಾಘವೇಂದ್ರ ಹಿಟ್ನಾಳ

koppal_mla
ಕೊಪ್ಪಳ-೧೪ ಕ್ಷೇತ್ರದ ನೀರಲಗಿ, ಮತ್ತೂರು, ಹನಕುಂಟಿ, ತಿಗರಿ, ಬೋಚನಹಳ್ಳಿ, ಹಲವಾಗಲಿ, ನಿಲೋಗಿಪುರ ಗ್ರಾಮಗಳಲ್ಲಿ ರೂ ೧ ಕೋಟಿಯ ಸಿಸಿ ರಸ್ತೆ ಶಾಲಾ ಕೊಠಡಿ ಹಾಗೂ ಶುಧ್ದ ಕುಡಿಯುವ ನೀರನ ಘಟಕ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಕೊಪ್ಪಳ ಕ್ಷೇತ್ರವು ಈ ಸಲದ ವಾಡಿಕೆಗಿಂತ ಮುಂಗಾರು ಹಾಗು ಹಿಂಗಾರು ಮಳೆಯ ಆಭಾವದಿಂದ ಬರದ ಕರಿನೆರಳಿಗೆ ತುತ್ತಾಗಿದ್ದು, ಅಧಿಕಾರಿಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನಗರ ಹಾಗೂ ಗ್ರಾಮ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗಳು ತುರ್ತಾಗಿ ಕೈಗೊಳಲ್ಲು ಸೂಚಿಸಲಾಗಿದೆ, ರೈತರಿಗೆ ಇನಪುಟ ಸಬ್ಸಿಡಿಗೆ ಸರ್ವೆಕಾರ್ಯ ಮಾಡಲು ಕೃಷಿ ಅಧಿಕಾರಿಗಳಿಗೆ ಆದೇಶಿಸಲಾಗಿದೆ ಪ್ರತಯೊಬ ರೈತರು ಬೆಳೆ ವಿಮೆ ಮಾಡಿಸಿ ಬೆಳೆ ಪರಿಹಾರಕ್ಕಾಗಿ ಸಂಬಂದ ಪಟ್ಟ ಅದಿಕಾರಿಗಳಿಗೆ ಸೂಚಿಸಲಾಗಿದೆ. ಈಗಗಾಲೆ ಸರ್ವರಿಗೂ ಆರೋಗ್ಯದ ದೃಷ್ಠಿಯಿಂದ ೧೩೫ ಶುಧ್ದ ಕುಡಿಯುವ ನೀರನ ಘಟಕಗಳನ್ನು ಪ್ರಾರಂಭಸಿಲಾಗಿದ್ದೆ. ಅವಶ್ಯವಿರುವ ಗ್ರಾಮಗಳ ಕೆರೆಗಳನ್ನು ಸಿಂಗಟಾಲೂರು ಏತ ನೀರಾವರಿ ಯೋಜನೆ ಮುಖಾಂತರ ತುಂಬಿಸಲಾಗುವುದು, ಮತ್ತು ನಗರದ ಹುಲಿಕೇರಿಗೆ ಮುಂದಿನ ವಾರದಲ್ಲಿ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಕಾರ್ಯಕೈಗೊಳಲಾಗುವುದು, ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಬರ ನಿರ್ವಹಣೆಗೆ ಸರಕಾರಕ್ಕೆ ಹೆಚ್ಚು ಅನುದಾನ ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ಜಿ ಪಂ ಅಧ್ಯಕ್ಷರಾದ ಎಸ. ಬಿ ನಾಗರಳ್ಳಿ, ತಾ ಪಂ ಬಾಲಚಂದ್ರ, ಪಕ್ಷದ ಮುಖಂಡರಾದ ವೆಂಕನ ಗೌಡ್ರು ಹಿರೇಗೌಡ್ರು, ಭರಮಪ್ಪ ನಗರ, ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮವ್ವ ಚೌಟಗಿ, ಗುರುಬಸವರಾಜ ಹಳ್ಳಿಕೇರಿ, ಶರಣಯ್ಯ ಗುರುವಿನ, ಹನುಮಂತಪ್ಪ ಸತ್ಯಪನವರ, ಬಸವರಾಜ ಕತ್ತಿ, ನಜೀರ ಅಳವಂಡಿ, ಶಂಕರಗೌಡ್ರು ಹಿರೇಗೌಡ್ರು, ದೇವಪ್ಪ ಚೌಟಗಿ, ಯಲ್ಲಪ್ಪ ಕೌಟಲ್ಯಾ, ವಕ್ತಾರ ಅಕ್ಬರ ಪಾಷ ಪಲ್ಟನ ಇದ್ದರು.

Please follow and like us:
error