ಬಡವರ ಫ್ರಿಡ್ಜ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು.

ಕೊಪ್ಪಳದಲ್ಲಿ ಕುಂಬಾರನ ಕೈಯಲ್ಲಿ ರೆಡಿಯಾಗುತ್ತಿದೆ ಬಡವರ ಫ್ರಿಡ್ಜ್… ಕೊಪ್ಪಳನಲ್ಲಿ 40 ಡಿಗ್ರಿಗೆ ಏರಿದ ಉಷ್ಣಾಂಶ.. ಮಧ್ಯಾಹ್ನ ರಸ್ತೆಗಿಳಿಯಲು ಹೆದರುತ್ತಿರುವ ಜನಜಿಲ್ಲೆಯಾದ್ಯಂತ ರಣ ಬಿಸಿಲು ಹೆಚ್ಚತೊಡಗಿದೆ.  ಕಳೆದ ವರ್ಷ ಈ ವೇಳೆಗೆ ಸರಾಸರಿ 38 ಡಿಗ್ರಿ ಸೆಲ್ಸಿಯಸ್ ಇದ್ದ ಉಷ್ಣಾಂಶ ಈ ಬಾರಿ 40ಡಿಗ್ರಿ ಸೆಲ್ಸಿಯಸ್​ಗೆ ಏರಿಕೆಯಾಗಿದೆ. ಜೊತೆಗೆ ರಾತ್ರಿ ತಾಪಮಾನವೂ ಕಡಿಮೆಯಾಗುತ್ತಿಲ್ಲ. ಮಧ್ಯಾಹ್ನ 1 ಗಂಟೆ ನಂತ್ರ ಜಿಲ್ಲೆಯ ರಸ್ತೆಗಳಲ್ಲಿ ಜನರ ಓಡಾಟ ಗಣನೀಯವಾಗಿ ಕಡಿಮೆಯಾಗಿದೆ. ಮನೆಯಲ್ಲಿ ಕುಳಿತುಕೊಳ್ಳೋಣವೆಂದರೆ ಮಿತಿ ಮೀರಿದ ವಿದ್ಯುತ್ ಲೋಡ್ ಶೆಟ್ಟಿಂಗ್ ನಿಂದಾಗಿ ದೇಹ ದಾಹ ತೀರಿಸಿಕೊಳ್ಳಲು ತಂಪು ಪಾನೀಯಕ್ಕೂ ಕೊರತೆ ಉಂಟಾಗಿದೆ. ಇ13051741_818571021583002_4900789597255516159_nನ್ನು ಬಿಸಿಲಿನ ಬೇಗೆಗೆ  ಬಡವರ ಪಾಲಿನ ಫ್ರಿಡ್ಜ್​ಎಂದೇ ಕರೆಯಲ್ಪಡುವ ಮಣ್ಣಿನ ಮಡಿಕೆಗಳಿಗಂತೂ ಭಾರೀ ಬೇಡಿಕೆ ಬಂದಿದೆ.  ಆಧುನಿಕ ಫ್ರಿಡ್ಜ್‌ಗಳು ಬಂದ್ರು ಕೂಡ ಮಣ್ಣಿನ ಮಡಿಕೆಗಳ ಡಿಮ್ಯಾಂಡ್‌ ಬೇಸಿಗೆಯಲ್ಲಿ ಸಾಮಾನ್ಯ. ಬಡವರಷ್ಟೇ ಅಲ್ಲ ಶ್ರೀಮಂತರೂ ಈ ಮಡಿಕೆಗಳ ಮೊರೆ ಹೋಗಿದ್ದಾರೆ. ಬೇಸಿಗೆಯಲ್ಲಿ ತಣ್ಣಗಿರುವ ನೀರಿಗಾಗಿ ಕರೆಂಟ್ ಎಳೆಯೋ ಫ್ರಿಡ್ಜ್ ಗಿಂತ ಈ ಮಣ್ಣಿನ ಮಡಿಕೆಯೇ ವಾಸಿ ಎನ್ನುತ್ತಿರುವ ಜನ. ಬೇಸಿಗೆ ಕಾಲ ಆರಂಭವಾಗಿ ಎಲ್ಲೆಡೆ ಬೇಸಿಗೆ ತಾಪ ಹೆಚ್ಚಿದ್ದರೆ ಈ ವೇಳೆ ಎಲ್ಲರೂ ಫ್ರಿಡ್ಜ್ ಕೂಲ್ ಡ್ರಿಂಕ್ಸ್ ನೀರಿನತ್ತ ಮೊರೆ ಹೋಗುವುದು ಸಾಮಾನ್ಯ. ಆದರೆ ಬೇಸಿಗೆಯಲ್ಲಿ ಕರೆಂಟ್ ಸಹ ಇರುವುದಿಲ್ಲ ಇನ್ನೂ ಮನೆಗೆ ದುಬಾರಿ ತಂತ್ರಜ್ಞಾನದ ಫ್ರೀಡ್ಜ್ ತಂದು ಏನೂ ಮಾಡೋದು ಅಂತಾ ಹೇಳೊ ಮಂದಿನೇ ಹೆಚ್ಚು. ಆದರೆ ಇವೆಲ್ಲದಕ್ಕೂ ಪರಿಹಾರವಾಗಿ ಮಾರುಕಟ್ಟೆಗೆ ಬಂದಿರುವುದೇ ಪುರಾತನ ಕಾಲದಲ್ಲಿ ಬಳಸುತ್ತಿದ್ದ ಮಡಿಕೆಗಳೇ ಈಗ ಬಡವರ ಫ್ರಿಡ್ಜ್ ಎನಿಸಿಕೊಂಡಿವೆ. ವಿಪರ್ಯಾಸವೆಂದರೆ ಶ್ರೀಮಂತರ ಈಗ ಮನೆ ಅಂದ ಹೆಚ್ಚಿಸಿಕೊಳ್ಳಲು ಹಾಗೂ ಆರೋಗ್ಯದ ದೃಷ್ಟಿಯಿಂದ ಮಡಿಕೆಗಳ ಮೊರೆ ಹೋಗಿದ್ದರೆ, ಸಾಮಾನ್ಯವರ್ಗದವರು ಬೇಸಿಗೆಯಲ್ಲಿ ಬಾಯಿ ತಣಿಸಲು ನಲ್ಲಿ ಮಡಿಕೆಗಳ ಮೊರೆ ಹೋಗಿದ್ದಾರೆ.

Please follow and like us:
error