You are here
Home > Koppal News-1 > ಫ್ಲೋರೆಡ್ ಮುಕ್ತ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ.

ಫ್ಲೋರೆಡ್ ಮುಕ್ತ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ.

ಕೊಪ್ಪಳ:೦೧, ನಗರದ ಪೋಲಿಸ್ ವಸತಿ ಗೃಹದ ಆವರಣದಲ್ಲಿ ೨೦೧೫-೧೬ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ರೂ.೧೩ ಲಕ್ಷದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಶಾಸಕೆ ಕೆ.ರಾಘವೇಂದ್ರ ಹಿಟ್ನಾಳರವರು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಫ್ಲೋರೇಡ್ ಮುಕ್ತ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಹಂತ-ಹಂತವಾಗಿ ನಿರ್ಮಾಣ ಮಾಡಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಶೇ:೬೦ ಪ್ರತಿಶತ ಶುದ್ಧ ಕುಡಿಯುವ ನೀರನ ಘಟಕಗಳು ನಿರ್ಮಾಣ ಹಂತದಲ್ಲಿವೇ ನಗರದ ಸುಮಾರು ೨೦ ವಾರ್ಡಗಳಲ್ಲಿ ಕುಡಿಯುವ ನೀರನ ಘಟಕಗಳನ್ನು ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಬರದಿಂದ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕೊಳವೆ ಭಾವಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಸರ್ಕಾರವು ರೂ.೨ ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಶೀಘ್ರವೇ ರೂ.೪ ಕೋಟಿಯ ನಗರದ ಜೆ.ಪಿ.ಮಾರುಕಟ್ಟಯ ಕಾಮಗಾರಿಯ ಭೂಮಿಪೂಜೆ ಶೀಘ್ರವೇ ನೇರವೇರಿಸಲಾಗುವುದು. ನಗರದ ಸೌಂದರ್ಯಕರಣಕ್ಕೆ ಹೆಚ್ಚುವತ್ತು ನೀಡಲಾಗುತ್ತಿದ್ದು ಬಸವೇಶ್ವರ ವೃತ್ತದಿಂದ ಸಿಂದೋಗಿ ರಸ್ತೆಯವರೆಗೆ ರೂ.೧೦ ಕೋಟಿಯ ವೆಚ್ಚದಲ್ಲಿ ರಸ್ತೆಯ ಕಾಮಗಾರಿಯನ್ನು ನಿರ್ಮಾಣ ಮಾಡಲಾಗುವುದು. ಶೇ:೯೦ ರಷ್ಟು ಒಳಚರಂಡಿ ಕಾಮಗಾರಿ ಮುಗಿದಿದ್ದು ನಗರದ ಎಲ್ಲಾ ರಸ್ತೆಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿ.ಪಂ. ನೂತನ ಅಧ್ಯಕ್ಷindexರಾದ ಎಸ್.ಬಿ.ನಾಗರಳ್ಳಿ, ಪ್ರಾಧಿಕಾರದ ಅಧ್ಯಕ್ಷರಾದ ಜುಲ್ಲು ಖಾದ್ರಿ, ನಗರಸಭೆ ಅಧ್ಯಕ್ಷರಾದ ಮಹೇಂದ್ರ ಚೋಪ್ರಾ, ಬಾಳಪ್ಪ ಬಾರಕೇರ, ಮುತ್ತುರಾಜ ಕುಷ್ಟಗಿ, ಶ್ರೀಮತಿ ಇಂದಿರಾಭಾವಿ ಕಟ್ಟಿ, ಡಿ.ವೈ.ಎಸ್.ಪಿ. ಶ್ರೀಕಾಂತ ಕಟ್ಟಿಮನಿ, ನಗರ ಸಿ.ಪಿ.ಐ.ಸತೀಶ ಪಾಟೀಲ, ಗುರುರಾಜ ಹಲಗೇರಿ, ಕಾಟನಪಾಷಾ, ಮಹೇಬುಬ ಮಚ್ಚಿ, ಶೌಕತ್ ಹುಸ್ಸೇನಿ, ಗವಿಸಿದ್ದಯ್ಯ ಹುಡೇಜಾಲಿ, ಇನ್ನೂ ಅನೇಕ ಪೋಲಿಸ್ ಅಧಿಕಾರಿಗಳು ಉಪಸ್ಥಿತರಿದ್ದು ವಕ್ತಾರ ಅಕ್ಬರಪಾಷಾ ಪಲ್ಟನ ಕಾರ್ಯಕ್ರಮವನ್ನು ನಿರೂಪಿಸಿ ಶಿವಾನಂದ ಹೂದ್ಲೂರು ಕೊನೆಗೆ ಹೊಂದಿಸಿದರು.

Leave a Reply

Top