: ಸಾರ್ವಜನಿಕ ಶಿಕ್ಷಣ ಇಲಾಖೆಯು ಕಲಬುರಗಿ ವಿಭಾಗದ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕರ ಹುದ್ದೆಯಿಂದ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಕುರಿತು ಪ್ರೌಢ ಶಾಲಾ ಸಹ ಶಿಕ್ಷಕರ ಸೇವಾ ವಿವರದ ಜೇಷ್ಠತಾ ಪಟ್ಟಿಯನ್ನು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಕಲಬುರಗಿ ವಿಭಾಗದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರಿಂದ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಕುರಿತಂತೆ ಪ್ರೌಢ ಶಾಲಾ ಸಹ ಶಿಕ್ಷಕರ ಮತ್ತು ತತ್ಸಮಾನ ವೃಂದದ ಸೇವಾ ವಿವರದ ಜೇಷ್ಠತಾ ಪಟ್ಟಿಯನ್ನು ಆಯ್ಕೆ ಪ್ರಾಧಿಕಾರಿಗಳು/ ಕಾರ್ಯದರ್ಶಿಗಳು ಹಾಗೂ ಪದನಿಮಿತ್ತ ಸಹ ನಿರ್ದೇಶಕರು (ಹೆ.ಪ್ರ) ಅಪರ ಆಯುಕ್ತ ಕಛೇರಿ ಕಲಬುರಗಿ ಇವರು ಇಲಾಖೆಯ ವೆಬ್ಸೈಟ್ www.cpigulbarga.kar.nic.in ಇಲ್ಲಿ ಪ್ರಕಟಿಸಿದ್ದಾರೆ.
ಜೇಷ್ಠತಾ ಪಟ್ಟಿಯಲ್ಲಿರುವ ಕೊಪ್ಪಳ ಜಿಲ್ಲೆಯ ಪ್ರೌಢಶಾಲಾ ಸಹ ಶಿಕ್ಷಕರು ತಮ್ಮ ಕೆಜಿಐಡಿ ಸಂಖ್ಯೆ, ಸೇವಾವಿವರ, ಜನ್ಮದಿನಾಂಕ, ಬೋಧನಾ ವಿಷಯ, ಡಿಎಲ್ಆರ್ಸಿ ರ್ಯಾಂಕ್ ಸಂಖ್ಯೆ ಹಾಗೂ ಜೇಷ್ಠತಾ ಪಟ್ಟಿಯಲ್ಲಿರುವ ಇನ್ನಿತರೆ ಮಾಹಿತಿಯನ್ನು ಪರಿಶೀಲಿಸಿ ಯಾವುದಾದರು ಆಕ್ಷೇಪಣೆಗಳಿದ್ದಲ್ಲಿ ನ.೨೬ ರೊಳಗಾಗಿ ಸಂಬಂಧಿಸಿದ ಪೂರಕ ದಾಖಲೆಗಳೊಂದಿಗೆ ಖುದ್ದಾಗಿ ಉಪನಿರ್ದೇಶಕರ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆ,ಕೊಪ್ಪಳ ಇಲ್ಲಿಗೆ ಸಲ್ಲಿಸಬಹುದಾಗಿದೆ
ಪ್ರೌಢಶಾಲಾ ಸಹ ಶಿಕ್ಷಕರಿಂದ ಮುಖ್ಯಶಿಕ್ಷಕರ ಹುದ್ದೆಗೆ ಬಡ್ತಿ: ಜೇಷ್ಠತಾ ಪಟ್ಟಿ ಪ್ರಕಟ
Please follow and like us: