ಪ್ರೀತಿಸಿ ಮದುವೆಯಾದಳು-ಸರಕಾರಿ ನೌಕರಿ ಇಲ್ಲವೆಂದು ಗಂಡನನ್ನೆ ಬಿಟ್ಟಳು

gangavati-love-story

ಪರಸ್ಪರ ಪ್ರೀತಿಸಿ ಕುಟುಂಬದವರ ವಿರೋಧದ ನಡುವೆಯೂ ಮದುವೆಯಾಗಿ ಎರಡು ವರ್ಷ ಜೀವನ ನಡೆಸಿದ ನಂತರ ಪತಿಗೆ ಸರಕಾರಿ ನೌಕರಿಯಿಲ್ಲ ಎಂದು ಪ್ರೇಯಸಿಯು ಪ್ರೀತಿಸಿದ ಪತಿಯನ್ನೇ ದೂರ ಮಾಡಲು ಮುಂದಾಗಿದ್ದಾಳೆ.. ಪ್ರೀತಿಗಾಗಿ ಎಲ್ಲರನ್ನು ಬಿಟ್ಟ ಪತ್ನಿ ಸರಕಾರಿ ನೌಕರಿಗಾಗಿ ಗಂಡನನ್ನು ಬಿಡಲು ಸಿದ್ದಳಾಗಿರುವ ವಿಚಿತ್ರ ಘಟನೆಯೊಂದು ನಡೆದಿದೆ . ಗಂಗಾವತಿಯ ಮದನ್ ಮತ್ತು ನಂದಿನಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇವರ ಅಂತರ್ಜಾತಿಯ ಮದುವೆಗೆ ಮನೆಯವರೆಲ್ಲಾ ವಿರೋಧ ಮಾಡಿದ್ದರು. ಅವರ ವಿರೋ‘ದ ನಡುವೆಯೂ ಸಹ ಇಬ್ಬರು ಪ್ರೇಮಿಗಳು ಸಮೀಪದ ಆನೆಗೊಂದಿಯ ಪಂಪಾ ಸರೋವರದ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಜೂನ್ ೬,೨೦೧೪ರಂದು ಗೆಳೆಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ವಿವಾಹದ ನಂತರ ಕೆಲ ತಿಂಗಳು ಊರು ಬಿಟ್ಟಿದ್ದ  ಪ್ರೇಮಿಗಳು ಪುನಃ ಗಂಗಾವತಿಗೆ ಬಂದು ಹುಡುಗನ ಮನೆಯಲ್ಲಿಯೇ ಜೀವನ ನಡೆಸಿದ್ದಾರೆ. ಒಂದು ವರ್ಷದ ಹಿಂದೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಅಕೊಂಟೆಟ್‌ಗಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಷ್ಟರಲ್ಲಿಯೇ ಹೆಣ್ಣು ಮಗು ಜನನವಾಗಿದೆ. ಮಗುವಿನೊಂದಿಗೆ ಮೂರು ತಿಂಗಳಗಳ ಕಾಲ ತಂದೆ,ತಾಯಿ ಇಬ್ಬರು ಸಂತೋಷವಾಗಿದ್ದರು. ನಂತರ ನಂದಿನಿಯ ತವರಿನವರು ಮಗಳನ್ನು ಮನೆಗೆ ಕಳಿಸಲು ಕೇಳಿಕೊಂಡಿದ್ದಾರೆ. ನಂದಿನಿಯನ್ನು ತವರು ಮನೆಗೆ ಬಿಟ್ಟು ಬಂದಿರುವ ಪತಿಯು ಮರಳಿ ಕರೆದುಕೊಂಡು ಬರುಲು ಹೋದರೆ ಕುಟುಂಬದವರು ಹೆಂಡತಿ,ಮಗುವನ್ನು ತೋರಿಸುತ್ತಿಲ್ಲ.  ನೀನ್ಯಾರೋ ಗೊತ್ತಿಲ್ಲ ಎನ್ನುತ್ತಿದ್ದಾರೆ. ಹೆಂಡತಿಯ ಆಸೆಯಂತೆ ತಾಯಿ ಹಾಗೂ ಮಗುವನ್ನು ಕೆಲ ದಿನಗಳ ಕಾಲ ತವರು ಮನೆಗೆ ಕಳುಹಿಸಿ, ಪುನಃ ಬೆಂಗಳೂರಿಗೆ ಹೋಗಿದ್ದಾನೆ. ಆಗಾಗೇ ಬಂದು ಹೆಂಡತಿ, ಮಗುವಿನ ಯೋಗಕ್ಷೇಮ ವಿಚಾರಿ ಕೊಂಡು ಹೋಗಿದ್ದಾನೆ. ಹೆಂಡತಿಯೂ ಸಹ ಪೋನ್‌ನಲ್ಲಿ ಚೆನ್ನಾಗಿಯೇ ಮಾತನಾಡಿದ್ದಾಳೆ. ತವರು ಮನೆಯಲ್ಲಿಯೇ ಮೂರು ತಿಂಗಳು ಕಳೆದ ನಂತರ ಪತಿ ಕರೆದುಕೊಂಡು ಬರಲು ಹೋದರೆ  ಪ್ರೀತಿಸಿ ಮದುವೆಯಾದ ಪತ್ನಿ ತನ್ನ ಪತಿಯನ್ನೇ ನಿರಾಕರಿಸುತ್ತಿದ್ದಾಳೆ. ಯಾವುದೇ ಕೌಟುಂಬಿಕ ಕಲಹಗಳು ನಡೆಯದೆ ಪ್ರೀತಿಸಿದ ಜೀವವನ್ನೇ ದೂರ ಮಾಡುತ್ತಿರುವುದರಿಂದ ಮನನೊಂದ ಪತಿಯು ಅಂಗಲಾಚಿ ಬೇಡಿಕೊಂಡು ನಂದಿನಿಯವರ ಮನೆ ಬಾಗಿಲಿಗೆ ಹೋದರೆ ಕುಟುಂಬಸ್ಥರು ಪತ್ನಿ, ಮಗುವನ್ನು ತೋರಿಸುತ್ತಿಲ್ಲ. ಮೊಬೈಲ್ ಮೇಸೇಜ್‌ಗಳಲ್ಲಿ ನಂದಿನಿ ತನ್ನ  ಪತಿ ಮದನ್ ಗೆ ಸರಕಾರಿ ನೌಕರಿ ಸೇರಿದರೆ ಮಾತ್ರ ನಾನು ನಿನ್ನ ಜೊತೆ ಬರುತ್ತೆನೆ  , ಇಲ್ಲದಿದ್ದರೆ ನೀನು ಇನ್ನೊಂದು ಮದುವೆಯಾಗಿ ಸುಖವಾಗಿರು ಎಂದು ತಿಳಿಸಿದ್ದಾಳೆ. ದಿಕ್ಕು ಕಾಣದೆ ನೊಂದ ಪತಿಯು ಪೊಲೀಸ್ ಠಾಣೆಯು ಮೆಟ್ಟಿಲು ಏರಿದರೂ ಸಹ ಪ್ರಯೋಜನವಾಗಿಲ್ಲ. ೬ ತಿಂಗಳಿಂದ ಹೆಂಡತಿ ಮಗುವನ್ನು ಕಾಣದೆ ಕಂಗಲಾಗಿದ್ದಾರೆ.  ಹೆಣ್ಣು ಮಕ್ಕಳಿಗೆ ಅನ್ಯಾಯವಾದರೆ ಮಹಿಳಾ ಆಯೋಗಗಳಿವೆ, ಸಮಾಜವೆಲ್ಲಾ ಒಂದಾಗಿ ಬರುತ್ತೆ. ಆದರೆ ಪುರುಷನಿಗೆ ಅನ್ಯಾಯವಾದರೆ ಯಾರು ಬರುವವರು ಸಹಾಯಕ್ಕೆ ಇದು ಮದನ್ ತಂದೆಯ ಮಾತಾಗಿದೆ. ಅಲ್ಲದೆ ನಂದಿನಿಯು ಕುಟುಂಬಸ್ಥರು ಮಾತು ಕೇಳಿ ಗಂಗಾವತಿ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ, ಪತಿಗೆ ನೋಟಿಸ್ ಸಹ ನೀಡಿದ್ದಾರೆ. ಪತ್ನಿ ಹಾಗೂ ಮಗು ಬೇಕು ಎಂದು ಹಠ ಹಿಡಿದಿರುವ ಮಧನ್ ಮುಂದೇನು ಎಂದು ದಿಕ್ಕು ತೋಚದಂತಾಗಿದ್ದಾರೆ.

https://youtu.be/fLSJLJGzZf0

courtesy : PRAJAATVKANNADA  www.prajaatvkannada.com

Please follow and like us:
error