ಪ್ರಯತ್ನಕ್ಕೆ ಇನ್ನೊಂದು ಹೆಸರೇ ಭಗೀರಥ-ಕೆ.ರಾಘವೇಂದ್ರ ಹಿಟ್ನಾಳ.

ಕೊಪ್ಪಳ ಮೇ.೧೩ ಸತತ ಪ್ರಯತ್ನದಿಂದ ಗಂಗೆಯನ್ನು ಭೂಮಿಗೆ ತರುವಲ್ಲಿ ಭಗೀರಥರ ಶ್ರದ್ಧೆಯೇ ಕಾರಣ. ಸತತ ಪ್ರಯತ್ನದಿಂದ ಏನೆಲ್ಲಾ ಸಾಧನೆ ಮಾಡಬಹುದು ಎನ್ನುವುದಕ್ಕೆ ಅವರೆ ಸಾಕ್ಷಿ ಎಂದು ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಭಗೀರಥ ಅವರ ಜಯಂತಿ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದು ಉನ್ನತ ಹುದ್ದೆಗೆ ಏರಬೇಕಾದರೆ ಪ್ರತಿಯೊಬ್ಬರು ಸತತ ಪ್ರಯತ್ನ ಪಡಬೇಕು ಹಾಗೂ ಈ ಸಾಧನೆ ಮಾಡಲು ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಆಗ ಮಾತ್ರ ಸಮಾಜ ಸುಧಾರಣೆ ಸಾದ್ಯ, ಇಂದು ಸಮಾಜಿಕ ಹಾಗೂ ಆರ್ಥಿಕ ಬದಲಾವಣೆಗೆ ಶಿಕ್ಷಣ ಬಹಳ ಮುಖ್ಯವಾಗಿ ಬೇಕು, ಶಿಕ್ಷಣ ಪಡೆದಾಗ ಮಾತ್ರ ನಾವು ಸಮುದಾಯಕ್ಕೆ ಏನಾದರು ಕೊಡುಗೆ ನೀಡಲು ಸಾದ್ಯ.
ರಾಜ್ಯ ಸರಕಾರ ಎಲ್ಲ ಸಮುದಾಯಗಳ ಕೂಡಿಸುವ ಉದ್ದೇಶದಿಂದ ಭಗೀರಥರ ಜಯಂತಿಯನ್ನು ಕೆಳೆದ ವರ್ಷದಿಂದ ಸರಕಾರದಿಂದ ಆಚರಿಸುತ್ತಿದೆ ಪ್ರತಿಯೊಂದು ಸಮುದಾಯದ ಏಳಿಗೆಗಾಗಿ ಸರಕಾರ ಹಲವಾರು ಯೋಜನೆಗಳನ್ನ ತಂದಿದ್ದು ಎಲ್ಲರು ಈ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಗಿಣಿಗೇರಿಯಲ್ಲಿ ಈಗಾಗಲೇ ನಿರ್ಮಿಸಲಾಗುತ್ತಿರುವ ಉಪ್ಪಾರ ಸಮುದಾಯ ಭವನದ ಕಟ್ಟಡಕ್ಕೆ ರೂ.೧೦ ಲಕ್ಷ ನೀಡಲಾಗಿದ್ದು ಮುಂಬರುವ ದಿನಗಳಲ್ಲಿ ಜಿಲ್ಲಾ ಕೇಂದ್ರದಲ್ಲಿಯೂ ಭವನ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.  DSC_0907ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಜಿ.ಪಂ ಅಧ್ಯಕ್ಷ ಶೇಖರಪ್ಪ.ಬಿ.ನಾಗರಳ್ಳಿ ಭಗೀರಥರು ಶದ್ಧೆ ಹಾಗೂ ಸತತ ಪ್ರಯತ್ನದಿಂದ ಭೂಮಿಗೆ ನೀರು ತಂದರು. ಇದೇ ರೀತಿ ಹಿಂದುಳಿದ ಸಮುದಾಯದ ಜನ ಸತತ ಪರಿಶ್ರಮ ಹಾಗೂ ಶ್ರದ್ಧೆಯಿಂದ ಪ್ರತತ್ನಿಸಿದಾಗ ಮಾತ್ರ ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಲು ಸಾದ್ಯ ಎಂದರು.
ಉಪನ್ಯಾಸಕ ಮಲ್ಲಪ್ಪ ಹೊಸೂರ ಭಗಗೀರಥರ ಕುರಿತು ವಿಷೇಶ ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ಪ್ರವೀಣ ಕುಮಾರ ಜಿಎಲ್, ಜಿ.ಪಂ ಸದಸ್ಯ ಗೂಳಪ್ಪ ಹಲಗೇರಿ, ತಾಪಂ ಅಧ್ಯಕ್ಯ ಬಾಲಚಂದ್ರ, ತಾ.ಪಂ ಸದಸ್ಯ ವೆಂಕಟಪ್ಪ, ಜಿ.ಪಂ ಮಾಜಿ ಅಧ್ಯಕ್ಷ ಜನಾರ್ಧನ ಹಿಲಿಗಿ, ನಾಗರಾಜ ಚಂದುಳ್ಳಿ ಸಮುದಾಯದ ಮುಖಂಡರುಗಳಾದ ಲಕ್ಷ್ಮೀಕಾಂತ, ಯಂಕಪ್ಪ, ಹೆಚ್‌ಆರ್ ಪಾಟೀಲ್, ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಸ್ವಾಗತಿಸಿದರು. ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಸಿರಸಪ್ಪಯ್ಯನವರ ಮಠದಿಂದ ಭಗೀರಥ ಅವರ ಭಾವಚಿತ್ರದ ಮೆರವಣಿಗೆಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಚಾಲನೆ ನೀಡಿದರು. ಭಗೀರಥ ಅವರ ಭಾವಚಿತ್ರದ ಭವ್ಯ ಮೆರವಣಿಗೆ ಜವಾಹರ ರಸ್ತೆ ಮಾರ್ಗವಾಗಿ ಸಾಹಿತ್ಯ ಭವನದವರೆಗೆ ನೆರವೇರಿತು. ಹಲವಾರು ಜಾನಪದ ಕಲಾ ತಂಡಗಳು ಮೆರವಣಿಗೆಗೆ ಆಕರ್ಷಕಗೊಳಿಸಿದವು.

Please follow and like us:
error

Related posts

Leave a Comment