ಪ್ರತಿಯೊಬ್ಬರು ದುಶ್ಚಟಗಳನ್ನು ತ್ಯಜಿಸಲು ಮುಂದಾಗಿ: ಶ್ರೀಗಳ ಕರೆ

ಪಟ್ಟಣದಲ್ಲಿ ಉಭಯ ಮಠದ ಪೀಠಾಧಿಪತಿಗಳ ನೇತೃತ್ವದಲ್ಲಿ ಪಾದಯಾತ್ರೆ
yelburaga-swamiji yelburaga-swamiji-basavaraj-rayaraddy
ಯಲಬುರ್ಗಾ : ಪ್ರತಿಯೊಬ್ಬರು ಆರೋಗ್ಯವಾಗಿ ಸದೃಡತೆ ದೇಹವನ್ನು ಕಾಪಾಡಿಕೊಳ್ಳಬೇಕಾದರೆ ದುಶ್ವಟಗಳನ್ನು ದೂರವಿಟ್ಟಾಗ ಮಾತ್ರ ಸಮೃದ್ದ ಬದುಕನ್ನು ನಿರ್ಮಿಸಿಕೊಳ್ಳಲು ಸಾಧ್ಯ ಎಂದು ಪಟ್ಟಣದ ಉಭಯ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಅವರು ಹೇಳಿದರು.
ಪಟ್ಟಣದ ಶ್ರೀ ಮೋಗ್ಗಿಬಸವೇಶ್ವರ ಜಾತ್ರಾ ನಿಮಿತ್ಯ ದೇವಸ್ಥಾನದಿಂದ ದುಶ್ಚಟಗಳನ್ನು ನಮ್ಮ ಜೋಳಿಗೆ ಹಾಕಿ ಎಂದು ಪಾದಯಾತ್ರೆ ಮಾಡಿ ನಂತರ ಮಾತನಾಡಿದರು ಇಂದಿನ ಯುವ ಜನಾಂಗ ಅನೇಕ ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಹೀಗಾಗಿ ಯುವಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಪಾದೆಯಾತ್ರೆ ಹಮ್ಮಿಕೊಳ್ಳಲಾಗಿದೆ.ಆಧುನಿಕ ಯುಗದಲ್ಲಿ ಯುವ ಜನಾಂಗವು ಹಲವಾರು ಚಟಕ್ಕೆ ದಾಸರಾಗಿ ತಮ್ಮ ಅಮೂಲ್ಯವಾದ ಜೀವನವನ್ನು ವ್ಯರ್ಥ ಮಾಡಿಕೊಂಡು ಕೊನೆಗೆ ಬಲಿಯಾಗುತ್ತಾರೆ. ಎಲ್ಲರೂ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು ಚಟಗಳನ್ನು ತ್ಯಜಿಸುವ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು, ಯುವ ಸಮುದಾಯ ಆಧ್ಯಾತ್ಮಿಕದ ಕಡೆಗೆ ಆಸಕ್ತಿ ನೀಡಬೇಕು, ಪಾಲಕರು ತಮ್ಮ ಮಕ್ಕಳ ಕಡೆ ಗಮನ ಹರಿಸಬೇಕು ಎಂದು ಶ್ರೀಗಳು ಹೇಳಿದರು.
ಪಟ್ಟಣದ ಶ್ರೀಮೋಗ್ಗಿಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಪಾದಯಾತ್ರೆ ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸಿತು ಈ ಸಂಧರ್ಭದಲ್ಲಿ ಮಹಿಳೆಯರು, ಯುವಕರು, ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಜಾತ್ರಾ ಸಮಿತಿ ಅಧ್ಯಕ್ಷ ವೀರನಗೌಡ ಮೇಟಿ, ಕಾರ್ಯದರ್ಶಿ ಸಂಗಣ್ಣ ಟೆಂಗಿನಕಾಯಿ, ಮುಖಂಡರಾದ ಅಮರಪ್ಪ ಕಲಬುರ್ಗಿ, ಶರಣಪ್ಪ ಅರಕೇರಿ, ಬಸಪ್ಪ ಕಮ್ಮಾರ, ಅಶೋಕ ಎಲಿಗಾರ, ಶರಣಬಸಪ್ಪ ದಾನಕೈ, ಮಲ್ಲನಗೌಡ ಹೊಸಮನಿ, ಸುರೇಶಗೌಡ ಶಿವನಗೌಡ್ರ, ಮಲ್ಲಿಕಾರ್ಜುನ ಟೆಂಗಿನಕಾಯಿ, ಅಮರೇಶ ಹುಬ್ಬಳ್ಳಿ, ಹರೀಶ್.ಆರ್.ಎಸ್, ಮಲ್ಲೇಶಗೌಡ ಮಾಲಿ ಪಾಟೀಲ್, ವಸಂತ ಕುಲಕರ್ಣಿ, ವಿರುಪಾಕ್ಷಯ್ಯ ಗಂಧದ, ಅಪ್ಪಣ ಬನ್ನಿಮರದ, ಬಸಲಿಂಗಪ್ಪ ಕೊತ್ತಲ್, ಈಶಪ್ಪ ಬನ್ನಿಕೊಪ್ಪ, ಮೈಲಾರಗೌಡ ಕೊಡಗಲಿ ಸೇರಿದಂತೆ ಮತ್ತತರರು ಪಾಲ್ಗೋಂಡಿದ್ದರು.

Related posts

Leave a Comment