ಪೌರ ಕಾರ್ಮಿಕರಿಗೆ ಮುಖ್ಯಮಂತ್ರಿಗಳ ಭರವಸೆ.

ಬರಗಾಲ ವೀಕ್ಷಣೆಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಂಗಾವತಿ ನಗರಸಭೆಯ ೧೪೧ ಜನ ಪೌರಕಾರ್ಮಿಕರ ಮನವಿಯನ್ನು ಸ್ವೀಕರಿಸಿ ಅವರನ್ನು ಪುನರ್ ನೇಮಿಸಿಕೊಳ್ಳಲು ಮತ್ತು ಅವರ ಬಾಕಿ ವೇತನವನ್ನು ಪಾವತಿಸುವಂತೆ ಡಿ.ಕೆ.ಅನೀಲಕುಮಾರ್ ಪೌರಾಡಳಿತ ಕಾರ್ಯದರ್ಶಿಗಳಿಗೆ ಆದೇಶ ನೀಡಿ, ಪೌರ ಕಾರ್ಮಿಕರ ಬೆಂಬಲಕ್ಕೆ ನಿಂತಿದ್ದಾರೆಂದು ಭಾರಧ್ವಾಜ್ ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಜಿಲ್ಲಾಡಳಿತ ಮುಂಭಾಗದಲ್ಲಿ ಪೌರ ಕಾರ್ಮಿಕರಿಂದ ಮನವಿ ಸ್ವೀಕರಿಸಿ ಮಹಿಳಾ ಪೌರ ಕಾರ್ಮಿಕರನ್ನು ಮಾತನಾಡಿಸಿ ಅವರ ಕಷ್ಟಗಳನ್ನು ತಿಳಿದುಕೊಂಡು ನಂDSC00994ತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡು ೨-೩ ದಿನಗಳೊಳಗಾಗಿ ೧೪೧ ಜನ ಪೌರ ಕಾರ್ಮಿಕರನ್ನು ಪುನರ್ ನೇಮಿಸಿಕೊಳ್ಳಬೇಕು. ಅವರಿಗೆ ಬರಬೇಕಾದ ಬಾಕಿ ವೇತನವನ್ನು ಶೀಘ್ರದಲ್ಲಿಯೇ ಕೊಡಬೇಕೆಂದು ಆದೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ಮಾಡಲು ಡಿ.ಕೆ.ಅನಿಲ್‌ಕುಮಾರ್ ಪೌರಾಡಳಿತ ಕಾರ್ಯದರ್ಶಿಗಳು, ಶಿವರಾಜ್ ತಂಗಡಿಗಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ಕನಗವಲ್ಲಿ ಕೂಡಲೇ ಕಾನೂನು ತೊಡಕುಗಳನ್ನು ಸರಿಪಡಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆದೇಶಸಿದ್ದಾರೆ. ಮುಖ್ಯಮಂತ್ರಿಗಳ ಆದೇಶ ಪಾಲಿಸದೇ ಪೌರಾಯುಕ್ತ ರಂಗಸ್ವಾಮಿ ರಜಾ ಹಾಕಿ ಬೆಂಗಳೂರು ಸೇರಿದ್ದು, ಇದು ಪೌರ ಕಾರ್ಮಿಕರ ವಿರೋಧಿ ನೀತಿಯಾಗಿದೆ ಎಂದು ಸಿಪಿಐಎಂಎಲ್ ಪಕ್ಷ ಕಟುವಾಗಿ ಟೀಕಿಸುತ್ತದೆ.

Please follow and like us:
error