ಪೌರತ್ವ ತರಬೇತಿ ಶಿಬಿರ

rajeevgandhi_bed_college_koppalನಗರದ ಹೊರವಲಯದಲ್ಲಿರುವ ರಾಜೀವಗಾಂಧಿ ಗ್ರಾಮೀಣ ಶಿಕ್ಷಣ ಮಹಾವಿದ್ಯಾಲಯ (ಬಿ.ಈಡಿ.) ದಲ್ಲಿ ಇಂದು ಪೌರತ್ವ ತರಬೇತಿ ಶಿಬಿರ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕರಿಯಣ್ಣ ಎಚ್. ಸಂಗಟಿ, ಉದ್ಘಾಟಕರಾಗಿ ಶ್ರೀಮತಿ ಗಂಗಮ್ಮ ಈಶಣ್ಣ ಗುಳಗಣ್ಣವರು ಜಿಲ್ಲಾ ಪಂಚಾಯತಿ ಸದಸ್ಯರು ಕೊಪ್ಪಳ, ಮುಖ್ಯ ಅತಿಥಿಗಳಾಗಿ ಡಾ|| ಮನೋಜ್ ಡೊಳ್ಳಿ ವಿಶೇಷಾಧಿಕಾರಿಗಳು ಸ್ನಾತಕೋತ್ತರ ಕೇಂದ್ರ ಕೊಪ್ಪಳ, ವಿ.ಎಸ್.ಕೆ.ಯು. ಬಳ್ಳಾರಿ, ಅತಿಥಿಗಳಾಗಿ ಪ್ರಾಚಾರ್ಯರಾದ ಶ್ರೀ ವಿನೋದ ಹೂಲಿ, ಸಂಸ್ಥೆಯ ಸಂಯೋಜಕರಾದ ಶ್ರೀ ಬಾಳಪ್ಪ ಸಂಗಟಿ, ಶಿಬಿರದ ಸಂಚಾಲಕರಾದ ಶ್ರೀ ಮಹೇಶ ಪೂಜಾರ, ಶಿಬಿರದ ಕಾರ್ಯದರ್ಶಿಯಾದ ಪ್ರಶಿಕ್ಷಣಾರ್ಥಿ ಕು|| ಚಿದಾನಂದಪ್ಪ ಕುಂಬಾರ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಪ್ರಶಿಕ್ಷಣಾರ್ಥಿ ಕು|| ಪಿಡ್ಡನಗೌಡ ವಹಿಸಿಕೊಂಡಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಗಂಗಮ್ಮ ಈಶಣ್ಣ ಗುಳಗಣ್ಣವರ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಕ್ಕಳಲ್ಲಿ ವಿವಿಧ ಕಾರ್ಯ ಚಟುವಟಿಕೆಗಳ ಮೂಲಕ ನಾಯಕತ್ವದ ಗುಣವನ್ನು ಬೆಳೆಸುವಲ್ಲಿ ಪೌರತ್ವ ತರಬೇತಿ ಶಿಬಿರ ಅತ್ಯಂತ ಮಹತ್ವದ್ದು, ಸಮಾಜ ಸುಧಾರಣೆ ಮಾಡುವಂತಹ ಯುವಜನತೆ ಇವರಾಗಲಿದ್ದಾರೆ. ಕೇವಲ ಪಠ್ಯ ಪುಸ್ತಕ ಬೋಧಿಸಿದರಷ್ಟೇ ಸಾಲದು ಸಮಾಜ ಸುಧಾರಣೆಯನ್ನು ಹೆಚ್ಚಿಸಬಲ್ಲ ಇಂತಹ ಪಠ್ಯೇತರ ವಟುವಟಿಕೆಗಳನ್ನು ಹಮ್ಮಿಕೊಂಡು ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿಯೂ ಇಂತಹ ಶಿಬಿರಗಳು ಪ್ರಯೋಜನಕಾರಿ ಎಂದು ಹೇಳಿದರು.

ಮುಖ್ಯ ಅತಿಥಿಗಳ ಸ್ಥಾನ ವಹಿಸಿದ್ದ ಡಾ|| ಮನೋಜ್ ಡೊಳ್ಳಿಯವರು ಅನೇಕ ಆದರ್ಶ ವಿಚಾರ ಅಭಿವ್ಯಕ್ತಪಡಿಸುವುದರ ಮೂಲಕ ಶಿಬಿರಾರ್ಥಿಗಳಿಗೆ ಮಾನವೀಯ ಮೌಲ್ಯಗಳ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರೂ ಆದ ಶ್ರೀ ಕರಿಯಣ್ಣ ಎಚ್. ಸಂಗಟಿಯವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ನೈತಿಕ ಪ್ರಜ್ಞೆಯನ್ನ ಬೆಳೆಸಿಕೊಂಡು ಸುಶಿಕ್ಷಿತ ಸಮಾಜವನ್ನು ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಅತೀ ದೊಡ್ಡದು, ಅಂತಹ ಜವಾಬ್ದಾರಿಯನ್ನು ಪಡೆಯಲು ಸನ್ನದ್ಧರಾಗಿ ಬಂದಿರುವ ಪ್ರಶಿಕ್ಷಣಾರ್ಥಿಗಳು ತಾವಿದ್ದು, ಮುಂದೆ ಸುಶಿಕ್ಷಿತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ತಮ್ಮ ಪಾತ್ರ ಅತ್ಯಮೂಲ್ಯವಾದದ್ದು ಅದನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕೆಂದು ಕರೆ ಕೊಟ್ಟರು.

ಕಾರ್ಯಕ್ರಮವನ್ನು ಶಿಬಿರಾರ್ಥಿಗಳಾದ ಬಸವರಾಜ ಚಿನಿ ನಿರೂಪಿಸಿದರು, ಸವಿತಾ ಬೋರಣ್ಣವರು ಸ್ವಾಗತಿಸಿದರು, ಎ ನಾಗರತ್ನ ವಂದಿಸಿದರು.

Related posts

Leave a Comment