ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ಯೋಜನೆ ಪ್ರಾರಂಭ.

Tifin image 3ಕೊಪ್ಪಳ ಏ. ೧೫ ನಗರಸಭೆಯಲ್ಲಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡುವ ಯೋಜನೆಯನ್ನು ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ ಅವರು ಪೌರಕಾರ್ಮಿಕ ಮಹಿಳೆಯರಿಗೆ ಉಪಹಾರ ನೀಡುವ ಮೂಲಕ ಇತ್ತೀಚೆಗೆ ಚಾಲನೆ ನೀಡಿದರು. ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರಿಗೆ ಶೇ. ೨೪.೧೦% ಯೋಜನೆಯಡಿಯಲ್ಲಿ ಬೆಳಗಿನ ಉಪಹಾರ ನೀಡುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ನಗರ ಸ್ಥಳೀಯ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರಿಗೆ ಬೆಳಗ್ಗಿನ ಉಪಾಹಾರವನ್ನು ನೀಡುವ ಯೋಜನೆಯನ್ನು ಇದೀಗ ಜಾರಿ ಮಾಡಲಾಗಿದೆ. ಶೇ. ೨೪.೧೦% ರ ಅನುದಾನದಲ್ಲಿ ನಿರಂತರ ಸೇವೆ ಒದಗಿಸುವ ಪೌರಕಾರ್ಮಿಕರಿಗೆ ಬೆಳಗಿನ ಜಾವದ ಉಪಾಹಾರವನ್ನು ಒದಗಿಸುವ ಯೋಜನೆಗೆ ನಗರಸಭೆ ಅಧ್ಯಕ್ಷ ಮಹೇಂದ್ರಕುಮಾರ ಮೀಠಾಲಾಲ್ ಛೋಪ್ರಾ ಅವರು ಪೌರಕಾರ್ಮಿಕ ಮಹಿಳೆಯರಿಗೆ ಉಪಹಾರ ನೀಡುವ ಮೂಲಕ ಏ. ೧೩ ರಂದು ವಿದ್ಯುಕ್ತವಾಗಿ ಚಾಲನೆ ನೀಡಿ, ಎಲ್ಲಾ ಪೌರಾಕಾರ್ಮಿಕರಿಗೆ ಬೆಳಗಿನ ಉಪಾಹಾರವನ್ನು ವಿತರಿಸಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಹಾಗು ನಗರಸಭೆಯ ಸದಸ್ಯರು, ಪೌರಾಯುಕ್ತರು, ವ್ಯವಸ್ಥಾಪಕರು, ಹಿರಿಯ ಆರೋಗ್ಯ ನಿರೀಕ್ಷಕರು, ಸೀನಿಯರ್ ಪ್ರೋಗ್ರಾಮರ್, ಕಾರ್ಯಾಲಯದ ಸಿಬ್ಬಂದಿಗಳು, ಉಪಸ್ಥಿತರಿದ್ದರು.

Related posts

Leave a Comment