ಪೋಸ್ಟ್ ಆಫೀಸ್ ನಲ್ಲಿಟ್ಟ ದುಡ್ಡನ್ನು ಲಪಟಾಯಿಸಿ ಪರಾರಿಯಾದ ಪೋಸ್ಟಮಾಸ್ಟರ್ !

 

ಪೋಸ್ಟ್ ಆಫೀಸ್ ನಲ್ಲಿಟ್ಟ ದುಡ್ಡನ್ನು ಪೋಸ್ಟ್ ಮಾಸ್ಟರ್ ನೇ ಲಪಟಾಯಿಸಿ ಪರಾರಿಯಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಗಿಣಗೇರಿ ಗ್ರಾಮದ ಪೋಸ್ಟ್ ಆಫೀಸಿandappa-totadನ ಫೋಸ್ಟ್ ಮಾಸ್ಟರ್ ಅಂದಪ್ಪ ತೋಟದ ದುಡ್ಡಿನೊಂದಿಗೆ ಪರಾರಿಯಾಗಿರುವ ವ್ಯಕ್ತಿ. ಅಂದಾಜು 50 ರಿಂದ 60 ಲಕ್ಷ ರೂಪಾಯಿಗಳನ್ನು ಲಪಟಾಯಿಸಿಕೊಂಡು ಪರಾರಿಯಾಗಿದ್ಧಾನೆ ಎನ್ನಲಾಗುತ್ತಿದೆ. ಕಳೆದ ತಿಂಗಳ 25ರಿಂದ ಸತತವಾಗಿ ಪೋಸ್ಟ್ ಬ್ಯಾಗ್ ಗಳು ಬರದೇ ಇದ್ದರಿಂದ ಕೊಪ್ಪಳದ ಹೆಡ್ ಪೋಸ್ಟ್ ಆಫೀಸಿನವರು ವಿಚಾರಿಸಿದಾಗ  ಪ್ರಕರಣ ಬಯಲಿಗೆ ಬಂದಿದೆ. ಫೋಸ್ಟ್ ಆಫೀಸಿಗೆ ಬಂದು ದುಡ್ಡು ಕಟ್ಟುತ್ತಿದ್ದವರಿಗೆ ನೆಟ್ ಪ್ರಾಬ್ಲಂ ಇದೆ ಹೀಗಾಗಿ ಪ್ರಿಂಟ್ ಬರುತ್ತಿಲ್ಲ ಎಂದು ಕೈಯಿಂದಲೇ ಪಾಸ್ ಬುಕ್ ನಲ್ಲಿ  ಬರೆದುಕೊಟ್ಟು ಸೀಲ್ ಹಾಕಿ ಕಳಿಸಿದ್ದಾನೆ. ಅಲ್ಲಿಗೆ ಬರುತ್ತಿದ್ದವರೂ ಸಹ ಇದನ್ನು ನಂಬಿದ್ದಾರೆ. ಕಳೆದ ತಿಂಗಳ ಕೊನೆಯಲ್ಲಿ ದುಡ್ಡಿಗಾಗಿ ಜನ ಬಂದು ಕೇಳಿದ್ದಾರೆ, ಪಾಸ್ ಬುಕ್ ನಲ್ಲಿ ಎಂಟ್ರಿ ಮಾಡಲು ಕೇಳಿಕೊಂಡಾಗ ಅವರಿಗೇ ಏನೇನೋ ಸಬೂಬು ಹೇಳಿ ಸಾಗ ಹಾಕಿದ್ಧಾನೆ ಈ ಅಂದಪ್ಪ ತೋಟದ. ಕೊಪ್ಪಳ ತಾಲೂಕಿನ ಕವಲೂರು ಗ್ರಾಮದ ಅಂದಪ್ಪ ತೋಟದ ಕಳೆದ 11 ತಿಂಗಳಿಂದ ಈ ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಬಹಳಷ್ಟು ಜನರಿಗೆ ಬಿಳೆ ಹಾಳೆಯ ಮೇಲೆ ಬರೆದುಕೊಟ್ಟು ಸೀಲ್ ಹಾಕಿ ಕಳಿಸಿದ್ದಾನೆ. ಅಮಾಯಕ ಜನ ಅದನ್ನೇ ನಂಬಿದ್ದಾರೆ. ಸಾವಿರಾರು ಜನರ ಪಾಸ್ ಬುಕ್ ನಲ್ಲಿ ಎಂಟ್ರಿ ಮಾಡಿಕೊಟ್ಟಿದ್ಧಾನೆ. ಆದರೆ ಅವೆಲ್ಲವೂ ಕಂಪ್ಯೂಟರ್ ನಲ್ಲಿ ಎಂಟ್ರಿಯೇ ಆಗಿಲ್ಲ. ಸುಮಾರು 9ಕ್ಕೂ ಹೆಚ್ಚು ಹಳ್ಳಿಯ ಜನ ಇಲ್ಲಿ ದುಡ್ಡಿನ ವ್ಯವಹಾರ ಮಾಡುತ್ತಾರೆ.ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರಿದ್ದಾರೆ.

 

ಕೈಯಲ್ಲಿಯ ಹಣ ಕಳೆದುಕೊಂಡು ಕಂಗಾಲಾಗಿರುವ ಜನತೆ ದಿನನಿತ್ಯ ಪೋಸ್ಟ್ ಆಫೀಸಿಗೆ  ಬಂದು ಕೇಳುತ್ತಿದ್ದಾರೆ. ಅಂದಪ್ಪ ತೋಟದ ಪರಾರಿಯಾಗಿ 20 ದಿನಗಳಾದರೂ ಸಹ ಇದುವರೆಗೆ ಯಾವುದೇ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿಲ್ಲ ಗ್ರಾಹಕರನ್ನು ಭೇಟಿ ಮಾಡಿಲ್ಲ ಎನ್ನಲಾಗುತ್ತಿದೆ. ಇದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.  ಕೆಲವೊಬ್ಬರಂತೂ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ಧಾರೆ. ಮಗಳ ಮದುವೆಗಾಗಿ ಇಟ್ಟಿದ್ದ  ಒಂದೂವರೆ ಲಕ್ಷ ಮಂಗಮಾಯವಾಗಿದೆ. ಇಷ್ಟಾದರೂ ಇನ್ನೂ ಯಾವುದೇ ಪೊಲೀಸ್ ಕಂಪ್ಲೇಟ್ ಆಗಿಲ್ಲ. ಇಲಾಖೆಯವರು ಸಹ ತನಿಖೆ ಆರಂಭಿಸಿಲ್ಲ. ಅಧಿಕೃತವಾಗಿ ಎಂಟ್ರಿ ಆಗಿರುವ ಪ್ರಕಾರವೇ ಕನಿಷ್ಠ 5 ಲಕ್ಷಕ್ಕೂ ಹೆಚ್ಚು ದುಡ್ಡಿನ ವ್ಯತ್ಯಾಸ ಕಂಡು ಬರುತ್ತಿದೆ ಎಂದು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಅಂದರೆ ಲೆಕ್ಕಕ್ಕೆ ಸಿಗದ ದುಡ್ಡು ಎಷ್ಟಿರಬಹುದು ?  ದುಡ್ಡು ಕಳೆದುಕೊಂಡವರಿಗೆ ನ್ಯಾಯ ಸಿಗುವುದು ಯಾವಾಗ? ದುಡ್ಡಿನೊಂದಿಗೆ ಪರಾರಿಯಾಗಿರುವ ಜೂಜಾಟದ ದಾಸ ಎಂದೇಳಲಾಗುವ ಅಂದಪ್ಪ ತೋಟದ ಬಂದಿಸುವುದು ಯಾವಾಗಾ?  ಈ ವಿಡಿಯೋ ನೋಡಿ….

Please follow and like us:
error

Related posts

Leave a Comment