ಪೋಲಿಸರ ಮೂಲಭೂತ ಬೇಡಿಕೆ ಈಡೇರಿಸಿಲು ಪ್ರಗತಿಪರ ಸಂಘಟನೆಗಳ ಆಗ್ರಹ

sfi-koppal-karnataka
ಕೊಪ್ಪಳ : ಪಕ್ಕದ ಆಂದ್ರ, ತೆಮಿಳ್ನಾಡು, ಮಹಾರಾಷ್ಟ್ರಗಳ ಪೋಲಿಸರಿಗೆ ಇರುವ ಕನಿಷ್ಠ ಅನುಕೂಲತೆ ಕರ್ನಾಟಕ ಪೋಲಿಸರಿಗೆ ಇಲ್ಲದಿರುವುದು ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವ ನೀತಿಗೆ ವಿರುದ್ಧವಾಗಿದೆ. ಆದ್ದರಿಂದ ಅವರು ಜೂನ್ ೪ ರಂದು ರಾಜ್ಯಾದ್ಯಂತ ರಜೆ ಘೋಷಿಸಿಕೊಂಡು ಪ್ರತಿಭಟಿಸುವುದಾಗ ನಡೆಸಿರುವ ಹೋರಾಟಕ್ಕೆ ಜಿಲ್ಲೆಯ ಪ್ರಗತಿಪರ ಸಂಘಟನೆ ಬೆಂಬಲಿಸಿದೆ.
ತಮ್ಮ ನ್ಯಾಯುತ ಬೇಡಿಕೆಗಾಗಿ ಹೋರಾಟ ಮಾಡುವುದು ಎಲ್ಲರಿಗೂ ಇರುವ ಹಕ್ಕು ಆದರೂ ಅದು ಪೋಲಿಸರಿಗೆ ಇಲ್ಲದಿರುವುದರಿಂದ ಇಲ್ಲಿಯವರಗೆ ಅವರು ಹೋರಾಟಕ್ಕಿಳಿದಿಲ್ಲ ಆದರೆ ಪಕ್ಕದ ಆಂದ್ರದ ಪೋಲಿಸಿಗೆ ಆರಂಭಿಕ ಸಂಬಳ ೩೫ ಸಾವಿರ ಇದ್ದರೆ ಕರ್ನಾಟಕದವರಿಗೆ ಕೇವಲ ೧೨ ಸಾವಿರ ಇರುವುದು ಎದ್ದುಕಾಣುವ ತಾರತಮ್ಯ ಹಾಗೆಯೇ ರಜೆ ಮತ್ತು ಕೆಲಸದ ಒತ್ತಡ ಮಾನಸಿಕ ಹಿಂಸೆಯಿಂದ ಪೋಲಿಸರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ನಡೆದಿವೆ, ಇದನ್ನೆಲ್ಲ ಕೇಳಬಾರದೆಂದರೆ ಹೇಗೆ? ಇಲ್ಲಿಯ ವರಗೆ ಈ ಹೊರಾಟ ಬೇಡಿಕೆಗಳನ್ನು ಸರ್ಕಾರ ಕಡೆಗಣಿಸುತ್ತಲೇ ಬಂದಿರುವುದರಿಂದ ಅದು ಹೊರಾಟದ ಹಂತಕ್ಕೆ ತಲುಪಿದೆ. ಇನ್ನಾದರೂ ಇದನ್ನು ಸರ್ಕಾರ ಸರಿಪಡಿಸಬೇಕೆಂದು ಜಿಲ್ಲಾ ಪ್ರಗತಿಪರ ಸಂಘಟನೆಯ ಭಾರದ್ವಾಜ, ವಿಠ್ಠಪ್ಪ ಗೋರಂಟ್ಲಿ, ಡಿ.ಎಚ್.ಪೂಜಾರ, ಮತ್ತು ಬಸವರಾಜ ಶೀಲವಂತರ  ಮೂಲಕ ಆಗ್ರಹಿಸಿದ್ದಾರರೆ.

Leave a Reply