ಪೈಗಂಬರರ ಜನ್ಮದಿನಾಚರಣೆ : ಯಶಸ್ವಿ ರಕ್ತದಾನ ಶಿಬಿರ

km_sayyed_kms_brigade
ಕೊಪ್ಪಳ-೧೦ ನಗರದ ಪಲ್ಟನ್ ಮಸೀಜ್ದ ಆವರಣದಲ್ಲಿ ಪ್ರವಾದಿ ಮಹ್ಮದ್‌ಪೈಗಂಬರರವರ(ಸ,ಅ) ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ  ರಕ್ತದಾನ ಶಿಬಿರವನ್ನು ಉದ್ಘಾಟೀಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಮನುಕುಲದ ಏಳ್ಗಿಗಾಗಿ ಇಂದು ಯುವಕರು ಸೌಹರ್ದತೆ ಹಾಗೂ ಶಾಂತಿ ಬದುಕಿಗೆ ಅಧ್ಯತೆ ನೀಡಬೇಕು ನಿಸರ್ಗದತ್ತ ಈ ಭೂಮಿಯಲ್ಲಿ ಮನುಷ್ಯನಿಗೆ ಏಲ್ಲಾ ಸಿರಿ ಸಂಪತ್ತುಗಳು, ಸಿಗುತ್ತವೆ ಆದರೆ ರಕ್ತವೆಂಬ ಶ್ರೆಷ್ಠ ವಸ್ತು ಅದು ಮನುಷ್ಯನ ದೇಹದಿಂದ ಮತ್ತೂಬ್ಬ ಮನುಷ್ಯನಗೆ ಮಾತ್ರ ಸಿಗುತ್ತದೆ, ಆದರಿಂದ ನೀವು ಕೊಡವ ರಕ್ತವು ಯಾವ ಜಾತಿಯ ರಕ್ತವೆಂದು ಪರಿಗಣಿಸಾಲಾಗುವುದಿಲ್ಲ ಆದರಿಂದ ರಕ್ತದಾನ ಶ್ರೆಷ್ಠ ದಾನವಾಗಿದೆ, ಯುವುಕರು ಇಂತಹ ನಿಸ್ವಾರ್ಥ ಸೇವೆಯು ಸಾರ್ಥಕ ಬದುಕಿಗೆ ಮಾದರಿಯಾಗಿದೆಂದು ಯುವಕರ ಈ ಕಾರ್ಯಸಾದನೆಗೆ ಹರ್ಷವ್ಯಕ್ತಪಡಿಸಿ ಸಮಾಜದ ಏಲ್ಲಾ ವರ್ಗದ ಯುವಕರು ಇಂತಹ ನಿಸ್ವಾರ್ಥ ಸೇವೆಯನ್ನು ಕೈಗೊಳ ಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಧರ್ಮ ಗುರುಗಳಾದ ಹಾಫೀಜ್ ನಸೀರ ಸಾಬ, ಜಿ ಪಂ ಸದಸ್ಯ ಕೆ.ರಾಜಶೇಖರ ಹಿಟ್ನಾಳ, ಮುಖಂಡರುಗಳಾದ ಕೆ,ಎಮ, ಸೈಯದ್ದ, ಅಮ್ಜದ ಪಟೇಲ್, ಖಾಜಾವಲಿ ಬನ್ನಿಕೊಪ್ಪ, ಡಾ|| ಅಜಯ ಬಚಲಾಪುರ, ಕಾಟನ ಪಾಷ, ಮಾನ್ವಿ ಪಾಷ,ಎಂ ಡಿ ಇಸ್ಮಾಯಿಲ ಸಾಬ, ಅಬ್ದುಲ್ ಅಜೀಜ್, ಸೈಯದ ಖಾದ್ರಿ ಸಾಬ, ಅಜ್ಜು ಖಾದ್ರಿ, ಆಯೋಬ್ ಅಡ್ಡಿ ವಾಲೆ, ಅಕ್ಬರಪಾಷ ಪಲ್ಟನ್ ಹಾಗೂ ಇನ್ನು ಅನೇಕ ಯುವಕರು ಉಪಸ್ತಿತರಿದರು

Please follow and like us:
error