ಪುಟ್‌ಪಾತ್‌ನಲ್ಲಿ ಎಗ್‌ರೈಸ್ ಮಾರುವವನ ಮಗಳು ಜಿಲ್ಲೆಗೆ ಟಾಪರ್

ಪ್ರತಿಭೆಗಳು ಅರಳುವುದೇ ಗುಡಿಸಲಿನಲ್ಲಿ ಎನ್ನುವ ಮಾತಿದೆ ಅದು ಸತ್ಯ ಎನ್ನುವಂತೆ ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಶೇ.95.16 ಅಂಕಗಳನ್ನು ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ ಇಡೀ ಜಿಲ್ಲೆಗೆ ಪ್ರಥಮ ಸ್ಥಾನ ಪkoppal-district-topper-puc-resultsಡೆದಿದ್ದಾಳೆ ಶಬಾನಬೇಗಂ. .   ಕನಕಗಿರಿಯ  ಈ ಪ್ರತಿಭೆ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಮೊದಲಿಗಳಾಗಿದ್ದಾಳೆ. ಕನಕಗಿರಿಯ ಬೀದಿಯಲ್ಲಿ ಎಗ್ ರೈಸ್ ಮಾರಾಟ ಮಾಡುವ ಕಾಸಿಂಸಾಬ್ ನ ಪುತ್ರಿ ಈ ಶಬಾನಾ ಬೇಗಂ. ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿಯಲ್ಲಿ ಎಗ್ ರೈಸ್ ಮಾರಾಟ ಮಾಡುತ್ತಾ ಜೀವನಸಾಗಿಸುತ್ತಿದ್ದಾರೆ. ತಾಯಿ ಹುಸೇನಬಿ ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ದಂಪತಿಗಳಿಗೆ ಐವರ ಪುತ್ರಿಯರು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಸಹ ಹಿರಿಯ ಪುತ್ರಿಯನ್ನು ಓದಿಸಬೇಕೆನ್ನುವ ಛಲತೊಟ್ಟರು.  ಎಸ್ ಎಸ್ ಎಲ್ ಸಿಯಲ್ಲೂ 90% ಅಂಕ ಪಡೆದಿದ್ದ ಪ್ರತಿಭಾವಂತೆ ಶಭಾನಾಗೆ ಗಂಗಾವತಿಯ ಶ್ರೀರಾಮನ ನಗರದ ಎ.ಕೆ.ಆರ್.ದೇವಿ ಕಾಲೇಜಿನಲ್ಲಿ ಉಚಿತ ಶಿಕ್ಷಣ ಹಾಗೂ ವಸತಿ ಸೌಲಭ್ಯವೂ ದೊರೆಯಿತು. ಛಲಬಿದೇ ಅಧ್ಯಯನ ಮಾಡಿದ ಶಬಾನಾ 571 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಬೌತಶಾಸ್ತ್ರ 100, ಜೀವಶಾಸ್ತ್ರ 100, ರಸಾಯನಶಾಸ್ತ್ರ 98, ಗಣಿತ 88, ಕನ್ನಡ 97, ಇಂಗ್ಲೀಷ್ 88 ಅಂಕಗಳನ್ನು ಪಡೆದಿದ್ದಾಳೆ. ನಾವಂತೂ ಸರಿಯಾಗಿ ಕಲಿಯಲಾಗಲಿಲ್ಲ. ಮಕ್ಕಳಾದರೂ ಕಲಿಯಲಿ ಎಂದೇ ಶಾಲೆಗೆ ಸೇರಿಸಿದ್ದೇವೆ. ಅವರ ಸಾಧನೆ ಬಗ್ಗೆ ಕೇಳಿ ಸಂತಸವಾಗಿದೆ ಎನ್ನುತ್ತಾರೆ ತಂದೆ ಕಾಸಿಂಸಾಬ.

Leave a Reply