ಪೋಲಿಸ್ ದೌರ್ಜನ್ಯ : ಪಿಯೂಸಿಎಲ್ ಸತ್ಯಶೋಧನಾ ಸಮಿತಿ

pucl-koppal-mahadayi (1) pucl-koppal-mahadayi (2)ಕೊಪ್ಪಳ: ನ್ಯಾಯಾಂಗತನಿಖೆಗೆ ಆಗ್ರಹ ರಾಜ್ಯ ಪಿಯೂಸಿಎಲ್ ಮತ್ತು ಕೊಪ್ಪಳ, ರಾಯಚೂರು ಘಡಕಗಳ ಪದಾದಿಕಾರಿಗಳು ಇಂದು ನವಲಗುಂದಕ್ಕೆ ಬಂದು ರೈತಮುಖಂಡರನ್ನು ಮತ್ತು ಪೋಲಿಸ್ ದೌರ್ಜನ್ಯಕ್ಕೆ ಒಳಗಾದವರನ್ನು ನವಲಗುಂದ ಹಾಗೂ ಯಮನೂರಲ್ಲಿ ಸಂಚರಿಸಿ ಮಾಹಿತಿ ಸಂಗ್ರಹಿಸಲಾಯಿತು, ಇದರಲ್ಲಿ ಮನೆ ಮನೆಗಳಲ್ಲಿ ಹೊಕ್ಕು ನಿರ್ದಿಷ್ಟ ಸಮುದಾಯವನ್ನೆ ಗುರಿಯಾಗಿಸಿಕೊಂಡು ಅಮನುಷವಾಗಿ ಹಲ್ಲೆ ಮಾಡಿರುವದನ್ನು ಗಮನಿಸಿದರೆ ಇದರಲ್ಲಿ ರಾಜಕೀಯ ಪಿತೂರಿ ದುರುದ್ದೇಶ ಇರುವುದು ಸ್ಪಷ್ಟ ಇದು ಉನ್ನತ ಮಟ್ಟದ ತನಖೆಯಾಗಿ ಸತ್ಯಾಂಶವನ್ನು ಬಯಲುಗೊಳಿಸಬೇಕು, ೮೦ ವರ್ಷದ ವೃದ್ದ ಮತ್ತು ಬಸುರಿ ಹೆಣ್ಣು ಮಕ್ಕಳಲ್ಲದೆ ಮನೆಯಲ್ಲಿದ ಮಹಿಳೆಯರ ಮೇಲೆ ಲಾಠಿಯಿಂದ ಸಿಕ್ಕಂತೆ ಬಡಿದಿರುವದು ನಾವು ಯಾವಕಾಲದಲ್ಲಿದ್ದೇವೆ ಎನ್ನುವ ಸಂಶಯ ಮಾಡುವಂತೆ ಮಾಡಿದೆ. ಪೋಲಿಸರು ತಮ್ಮ ಮನೆಯ ಹೆಣ್ಣು ಮಕ್ಕಳಾದರೆ ಈ ರೀತಿ ವರ್ತಿಸಲು ಸಾಧ್ಯವೇ? ನಾಳೆ ಮತ್ತೆ ಹೋರಾಟ ತೀವ್ರವಾಗಲಿದೆ, ಏನಾದರೂ ಸಂಭವಿಸಿದರೆ ಅದಕ್ಕೂ ಪೋಲಿಸರೆ ಹೊಣೆಯಾಗುತ್ತಾರೆ.
ಇದನ್ನು ಸಮಿತಿಯು ಬಲವಾಗಿ ಖಂಡಿಸುತ್ತದೆ ಮತ್ತು ಮಾನವ ಹಕ್ಕು ಆಯೋಗ್ಯಕ್ಕೆ ನ್ಯಾಯಕ್ಕಾಗಿ ಆಗ್ರಹಿಸುತ್ತದೆ. ಸಮಿತಿಯಲ್ಲಿ ಪಾಲ್ಗೊಂಡವರು ವಿಠ್ಠಪ್ಪಗೋರಂಟ್ಲಿ ಉಪಾಧ್ಯಕ್ಷ ರಾಜ್ಯ ಪಿಯೂಸಿಎಲ್,ಭಾರದ್ವಲ ರಾಜ್ಯಕಾರ್ಯದರ್ಶಿ ಪಿಯೂಸಿಎಲ್, ಡಿ.ಎಚ್ ಪೂಚಾರ ಕರ್ನಾಟಕ ರೈತ ಸಂಘ ರಾಜ್ಯಧ್ಯಕ್ಷರು, ಬಸವರಾಜ ಶೀಲವಂತರ ಂIಖಿUಅ, ಎಚ್.ಎನ್ ಬಡಿಗೇರ, ಸಿ.ದಾನಪ್ಪ, ಪ್ರಮೋದತುರ್ವಿಹಾಳ, ರಾಜಬಕ್ಷಿ, ಅಮರೇಶ, ನಾಗಪ್ಪ, ಎಮ್. ಗೋವಿಂದ ಇವರು ಉಪಸ್ಥಿತರಿದ್ದರು.

Please follow and like us:
error