ಪಾಶ್ಚಿಮಾತ್ಯಸಂಗೀತದಿಂದ ಸಂಸ್ಕೃತಿ ನಾಶ – ವಿರುಪಾಕ್ಷಗೌಡ ಪೋ.ಪಾ

janapada-gayana-koppalಕೊಪ್ಪಳ : ಗ್ರಾಮೀಣ ಸೊಗಡಿನ ಜಾನಪದ ಕಲೆ ಪಾಶ್ಚಿಮಾತ್ಯ ಸಂಗೀತದ ಹೊಡೆತಕ್ಕೆ ನಾಶಗೊಳ್ಳುತಿದೆ ನಮ್ಮ ಭಾರತೀಯ ಸಂಸ್ಕೃಂತಿ ಪರಂಪರೆ ಜನಪದಗಳಲ್ಲಿ ತುಂಬಿ ಶ್ರೀಮಂತವಾಗಿದೆ ಆಧುನಿಕ ಯುಗದಲ್ಲಿ ಧಾರಾವಾಯಿಗಳಿಂದ ದೊಡ್ಡಾಟ, ಸಣ್ಣಾಟ ಯಂತ್ರಗಳ ಬರಾಟೆಯಿಂದ ಹಂತಿ ಪದ ಬಿಸುವ ಕಲ್ಲಿನ ಪದ, ಮೂಬೈಲ ಮತ್ತು ಕ್ಯಾಸೇಟನ್ ಆಶ್ಲೀಲ ಜನಪದ ಹಾಡುಗಳಿಂದ ಜನಪದಗಳಂತಹ ಮಹತ್ವದ ಕಲೆಗಳು ಬಲಿಯಾಗುತ್ತಿವೆ ಆದ್ದರಿಂದ ನಮ್ಮ ಯುವಪೀಳಿಗೆ ಜನಪದ ಸೊಗಡುಗಳನ್ನು ಅನುಸರಿಸಿ ಜನಪದ ಕಲೆ ಉಳಿಸುವ ಅಗತ್ಯವಿದೆ ಎಂದು ತಾ.ಪಂ ನಿವೃತ್ತ ಸಹಾಯಕ ವಿರುಪಾಕ್ಷಗೌಡ ಪೋ.ಪಾ ಹೇಳಿದರು.
ಅವರು ಕೊಪ್ಪಳ ತಾಲೂಕಿನ ಗುಡ್ಲಾನೂರ ಗ್ರಾಮದಲ್ಲಿ ಶ್ರೀ ಗೋಣಿಬಸವೇಶ್ವರ ಯುವಕ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಸ್ಥಳೀಯ ಪ್ರಾಯೋಜಿತ ಕಾರ್ಯಕ್ರಮ ಜಾನಪದ ಗಾಯನ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿದರು ನಂತರ ಗ್ರಾ,ಪಂ ಉಪಾಧ್ಯಕ್ಷ ಬಸವರಾಜ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ಜನಪದ ಪ್ರಕಾರಗಳ ಹಾಡುಗಳಿಂದ ಮನೋರಂಜನೆ ದೊರೆಯುವುದಲ್ಲದೇ ಭಕ್ತಿ, ನ್ಯಾಯ, ನೀತಿ, ಧರ್ಮ ಉಳಿಯುತ್ತದೆ ಅಲ್ಲದೇ ಬದುಕನ್ನು ಎತ್ತರ ಮಟ್ಟಕ್ಕೆ ತರುವಲ್ಲಿ ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳುವಲ್ಲಿ ಜನಪದಗಳು ಅವಶ್ಯ ಎಂದರು ಮಂಜುನಾಥ ವಿ ಹಿರೇಗೌಡ್ರು ಮುಖ್ಯ ಅತಿಥಿಯಾಗಿ ಮಾತನಾಡಿ ಹಿಂದಿನ ತಲೆಮಾರಿನ ವೈಭವದ ದಿನಗಳನ್ನು ನೆನಪಿಸುವಲ್ಲಿ ಹೊಸ ಬದುಕು, ಹೊಸಬೆಳಕು ಮೂಡಿಸುವಲ್ಲಿ ಜನಪದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಮಾಜ ಸೇವೆಯಲ್ಲಿ ಕ್ರೀಯಾಶೀಲರಾಗಿ ಜಗದಯ್ಯ ಸಾಲಿಮಠ ರವರು ಹಳ್ಳಿ ಹಳ್ಳಿಗಳಲ್ಲಿ ಉತ್ಸುಕತೆಯಿಂದ ಜನಪದ ಬೆಳೆಸುವಲ್ಲಿ ಯಶಸ್ವಿಯಾಗಿ ಯುವಕರಿಗೆ ಸ್ಪೂರ್ತಿ ತುಂಬುತ್ತಿದ್ದಾರೆ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಜಗದಯ್ಯ ಸಾಲಿಮಠ ರವರಿಗೆ ಜನಪದ ಕಲಾ ಕೇಸರಿ ಪ್ರಶಸ್ತಿಯನ್ನು ನೀಡಿ ಶ್ರೀ ಗೋಣಿಬಸವೇಶ್ವರ ಯುವಕ ಸಂಘದವರು ಸನ್ಮಾನಿಸಿ ಗೌರವಿಸಿದರು.
ಜಗದಯ್ಯ ಸಾಲಿಮಠ ಜನಪದ ಗೀತೆಗಳಿಂದ ಜನಮನ ಸೂರೆಗೊಂಡರು, ನೀರಲಗಿಯ ದ್ಯಾಮಣ್ಣ ತಳವಾರ ಸಂಗೀತ ಮತ್ತು ನಾಗಯ್ಯ ಹಿರೇಮಠ ತಬಲಾ ಸಾಥ ನೀಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯ ಭರಮಪ್ಪ ಹುರಿಜೋಳ, ಹಿರಿಯರಾದ ಶಿವಪುತ್ರಪ್ಪ ಬಡಿಗೇರ, ಶಿವಪ್ಪ ಉಳಾಗಡ್ಡಿ, ಫಕೀರೇಶ ಕಮ್ಮಾರ, ಶಿವಪುತ್ರಪ್ಪ ಮಾಸ್ತರ ತಳವಾರ, ಯುವ ಪ್ರಶಸ್ತಿ ವಿಜೇತ ಬಸಯ್ಯ ಅಬ್ಬಿಗೇರಿ ಮಠ, ಮಹೇಶ ತಳವಾರ ಯುವಕ ಸಂಘದ ಅಧ್ಯಕ್ಷ ಪ್ರಕಾಶ ಉಳಾಗಡ್ಡಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಪ್ರಶಾಂತ ಉಳಾಗಡ್ಡಿ ಸ್ವಾಗತಿಸಿದರು, ಗಿರೀಶ ನಿರೂಪಿಸಿದರು, ಪತ್ರೇಶಗೌಡ ಮಾ.ಪಾ ವಂದಿಸಿದರು.

Please follow and like us:
error