ಪಾಲಸಿಯ ಹಣ ನೀಡಲು ವಿಮಾ ಕಂಪನಿಗೆ ಆದೇಶ

insurance-claim-order-consumer-court
ಕೊಪ್ಪಳ : ಶ್ರೀಮತಿ ಶರಣಮ್ಮ ಗಂಡ ದಿ|| ನಾಗನಗೌಡ ಪಾಟೀಲ್ ೩ನೇ ವಾರ್ಡ ಯರಡೋಣಿ ತಾ.ಗಂಗಾವತಿ ಜಿ.ಕೊಪ್ಪಳ ಇವರ ಗಂಡನಾದ ದಿ|| ನಾಗನಗೌಡ ತಂದೆ ನಾಗನಗೌಡ ಪಾಟೀಲ್ ಇವರುAEGON, Religare Life Insurance Co.Ltd   ಇವರ ಬಳಿಯಲ್ಲಿ ರೂ.೭.೫೦.೦೦೦/- ಗಳ ಪಾಲಿಸಿಯನ್ನು ಮಾಡಿಸಿದ್ದನು ನಂತರ ದಿನಾಂಕ: ೧೨-೦೮-೨೦೧೪ ರಂದು ಆತನು ಹೃದಯಘಾತದಿಂದ ಮರಣವನ್ನು ಹೊಂದಿದನು. ನಂತರ ತನ ಪತ್ನಿಯು ಸದರಿ ಪಾಲಿಸಿಯಲ್ಲಿ ನಾಮೀನುದಾರಳಿದ್ದು ಮತ್ತು ಕ್ಲೇಮಿಗಾಗಿ ಅರ್ಜಿಯನ್ನು ಸಲ್ಲಿಸಿದಳು. ದಿನಾಂಕ : ೩೧-೦೭-೨೦೧೫ ರಂದು ವಿಮಾ ಕಂಪನಿಯವರು ಸದರಿ ಪಾಲಿಸಿ ಕ್ಲೇಮಿನ ಹಣವನ್ನು ನೀಡಲು ಬರುವುದಿಲ್ಲ. ಕಾರಣ ನಿಮ್ಮ ಗಂಡನು ಪಾಲಿಸಿಯನ್ನು ಮಾಡಿಸುವ ಮುಂಚೆ ಸಕ್ಕರೆ ಕಾಯಿಲೆ ಮತ್ತು ರಕ್ತದ ಒತ್ತಡದ ಕಾಯಿಲೆಯಿಂದ ಬಳಲುತ್ತಿರುವುದರಿಂದ ಕ್ಲೇಮನ್ನು ತಿರಸ್ಕಾರ ಮಾಡಿದರು. ನಂತರ ಫಿರ್ಯಾದಿದಾರಳಾದ ಶರಣಮ್ಮ ಇವರು ಗ್ರಾಹಕರ ವೇದಿಕೆ ದಿ: ೨೮-೦೩-೨೦೧೬ ರಂದು ಪ್ರಕರಣ ದಾಖಲು ಮಾಡಿದಳು ವಿಮಾ ಕಂಪನಿಯವರ ವಿರುದ್ಧ.
ನಂತರ ಮಾನ್ಯ ಗ್ರಾಹಕರ ವೇದಿಕೆಯು ದಿ: ೩೧-೦೫-೨೦೧೬ ರಂದು ವಿಮಾ ಕಂಪನಿಯವರು ಫಿರ್ಯಾದಿದಾರಳ ಗಂಡನು ಕಾಯಿಲಯಿಂದ ಬಳಲುತ್ತಿದ್ದಳು ಎನ್ನುವ ಬಗ್ಗೆ ಯಾವುದೇ ದಖಲೆಗಳು ಇಲ್ಲದೇ ಇರುವುದರಿಂದ ವಿಮಾ ಕಂಪನಿಯವರು ಫಿರ್ಯದಿದಾರಳಿಗೆ ಪಾಲಿಸಿಯ ಮೊತ್ತ ರೂ.೭.೫೦.೦೦೦/- ಮತ್ತು ಪರಿಹಾರ ಮೊತ್ತ ರೂ.೩.೦೦೦/- ಸೇವಾ ನ್ಯೂನತೆಗೆ ರೂ.೧.೫೦೦/- ಹಾಗೂ ದೈಹಿಕ ಮತ್ತು ಮಾನಸಿಕ ಹಿಂಸೆಗೆ ರೂ.೨.೦೦೦/- ಇವೆಲ್ಲವನ್ನು ೧ ತಿಂಗಳ ಒಳಗಾಗಿ ಫಿರ್ಯಾದಿದಾರಳಿಗೆ ನೀಡಬೇಕು ಇದಕ್ಕೆ ತಪ್ಪಿದಲ್ಲಿ ಶೇ.೧೨% ರಂತೆ ಬಡ್ಡಿ ಹಾಕಿ ಪಾವತಿ ಮಾಡಬೇಕೆಂಬ ಆದೇಶ ಮಡಿರುತ್ತಾರೆ.
ವಿವರ : ಪ್ರಕರಣದ ಸಂಖ್ಯೆ: ೧೫/೨೦೧೬, ಪ್ರಕರಣ ದಾಖಲಾದ ದಿನಾಂಕ : ೨೮-೦೩-೨೦೧೬ ಮತ್ತು ಪ್ರಕರಣ ಮುಕ್ತಾಯವಾದ ದಿ: ೩೧-೦೫-೨೦೧೬ ಇರುವುದು ಎಂದು ಫಿರ್ಯಾದಿದಾರಳ ಪರ ವಕೀಲರಾದ ಎಮ್.ವಿ.ಮುದಗಲ್ ಪ್ರಕರಣ ನಡೆಸಿದ್ದರು.

Please follow and like us:
error