ಪಾಕ್ ಉಗ್ರರ ನೆಲೆಗಳ ಮೇಲೆ ದಾಳಿ -ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್

attack_on_pakಮಧ್ಯಾಹ್ನ 1:20 ಸೇನಾ ಕಾರ್ಯಾಚರಣೆ ಸ್ವಾಗತಿಸಿದ ಪ್ರತಿಪಕ್ಷ ಕಾಂಗ್ರೆಸ್

ಸಂಜೆ 4 ಗಂಟೆಗೆ ಸರ್ವ ಪಕ್ಷ ಸಭೆ ಕರೆದ ಪ್ರಧಾನಿ ನರೇಂದ್ರ ಮೋದಿ.

ಸಮಯ: ಮಧ್ಯಾಹ್ನ 12:40

ದಾಳಿ ಖಂಡಿಸಿದ ಪಾಕ್ ಪ್ರಧಾನಿ ನವಾಝ್ ಶರೀಫ್

‘ನಮ್ಮ ನೆಲವನ್ನು ಕಾಪಾಡಿಕೊಳ್ಳುವ ಶಕ್ತಿ ನಮಗಿದೆ’: ಶರೀಫ್

ಹೊಸದಿಲ್ಲಿ, ಸೆ. 29: ದೇಶದ ಸುರಕ್ಷತೆಯ ದೃಷ್ಟಿಯಿಂದ ಕಳೆದ ರಾತ್ರಿ ಪಾಕಿಸ್ತಾನದ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗಿದ್ದು, ನಾವು ಪಾಕಿಸ್ತಾನದ ವಿರುದ್ಧ ಮತ್ತಷ್ಟು ದಾಳಿಯ ಯೋಜನೆ ಹಾಕಿಕೊಂಡಿಲ್ಲ ಎಂದು ಸೇನಾ ಕಾರ್ಯಾಚರಣೆಯ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘‘20 ಬಾರಿ ಉಗ್ರರ ಒಳ ನುಸುಳುವಿಕೆಯನ್ನು ತಡೆಯಲಾಗಿದೆ. ಭಾರತ-ಪಾಕ್ ಗಡಿಯಲ್ಲಿ ಒಳ ನುಸುಳುವಿಕೆ ಯತ್ನ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಕಮಾಂಡೋಗಳು ಪಿಒಕೆಗೆ ಪ್ರವೇಶಿಸಿ ದಾಳಿ ನಡೆಸಿದ್ದು, ದಾಳಿಯಿಂದ ಉಗ್ರರು, ಉಗ್ರರ ಬೆಂಬಲಿಗರು, ಉಗ್ರರ ಮೂಲ ಸೌಕರ್ಯದ ಮೇಲೆ ಭಾರೀ ಹಾನಿಯಾಗಿದೆ. ಜಮ್ಮು-ಕಾಶ್ಮೀರದಲ್ಲಿ ಸೇನೆ ತೀವ್ರ ಕಟ್ಟೆಚ್ಚರವಹಿಸಿದೆ. ದಾಳಿ ನಡೆಸಿರುವ ಬಗ್ಗೆ ಪಾಕಿಸ್ತಾನದ ಸೇನೆಗೂ ಮಾಹಿತಿ ರವಾನಿಸಲಾಗಿದೆ’’ ಎಂದು ರಣಬೀರ್ ಸಿಂಗ್ ತಿಳಿಸಿದ್ದಾರೆ.

ಭಾರತದ ಈ ಕ್ರಮ ಇತ್ತೀಚೆಗೆ ಪಾಕ್ ಉಗ್ರರು ನಡೆಸಿದ ಉರಿ ದಾಳಿಗೆ ಪ್ರತ್ಯುತ್ತರವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಶರೀಫ್ ಖಂಡನೆ: ಪಾಕ್ ಉಗ್ರರ ನೆಲೆಗಳ ಮೇಲೆ ಭಾರತ ದಾಳಿ ನಡೆಸಿರುವುದನ್ನು ಪಾಕ್ ಪ್ರಧಾನಿ ನವಾಝ್ ಶರೀಫ್ ತೀವ್ರವಾಗಿ ಖಂಡಿಸಿದ್ದಾರೆ.

ನಮ್ಮ ನೆಲವನ್ನು ರಕ್ಷಿಸಿಕೊಳ್ಳಲು ನಮಗೆ ಗೊತ್ತಿದೆ. ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ತಿಳಿಯಬೇಡಿ ಎಂದು ಶರೀಫ್ ಗುಡುಗಿದ್ದಾರೆ.

Please follow and like us:
error