ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ: ಕೊಪ್ಪಳ ನಗರಸಭೆಯಿಂದ ಬಹುಮಾನ

ಕೊಪ್ಪಳ ನಗರದಲ್ಲಿ ಗಣೇಶೋತ್ಸವ ಅಂಗವಾಗಿ ಪ್ರತಿಷ್ಠಾಪಿಸಿರುವ ಗಣೇಶಮೂರ್ತಿ ಹಾಗೂ ವಿವಿಧ ಕಾರ್ಯಕ್ರಮಗಳ ಆಯೋಜನೆಯ ಪ್ರಾರಂಭದ ದಿನದಿಂದ ವಿಸರ್ಜನೆಯ ದಿನದವರೆಗೆ ಪರಿಸರ ಸ್ನೇಹಿ ಗಣೇಶ ಪ್ರತಿಸ್ಥಾಪನೆ ಮಾಡುವ ಮೂರು ಸಂಸ್ಥೆಗಳಿಗೆ ಕೊಪ್ಪಳ ನಗರಭೆಯಿಂದ ಬಹುಮಾನ ನೀಡಲಾಗುವುದು.
ವಿಶಿಷ್ಟ ಗಣೇಶ ಮೂರ್ತಿ, ಅಲಂಕಾರ, ಮೆರವಣಿಗೆ, ಪರಿಸರ ಸಂರಕ್ಷಣೆ, ಜಲಮೂಲಗಳ ರಕ್ಷಣೆ, ಶಬ್ದ/ವಾಯು ಮಾಲಿನ್ಯ ರಹಿತ, ಮತ್ತು ಶಾಂತಿಯುತ ಮರವಣಿಗೆ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮ, ಸೌಹಾರ್ದತೆ ಮೂಡಿಸುವ ಹಾಗೂ ಅಚ್ಚುಕಟ್ಟು ನಿರ್ವಹಣೆ ಅಳವಡಿಸಿಕೊಂಡು ಪ್ರತಿಷ್ಠಾಪನೆ ಮಾಡಿದವರಿಗೆ ಪ್ರಥಮ ಬಹುಮಾನ ರೂ-೧೫,೦೦೦ ದ್ವಿತೀಯ ಬಹುಮಾನ ರೂ-೭,೦೦೦ ಹಾಗೂ ತೃತೀಯ ಬಹುಮಾನ ರೂ-೩,೦೦೦ ಗಳ ನಗದು ಬಹುಮಾನ ನೀಡಲಾಗುವುದು. ಬಹುಮಾನಕ್ಕೆ ಆಯ್ಕೆ ಮಾಡಲು ಮೌಲ್ಯಮಾಪನ ಸಮಿತಿ ರಚಿಸಲಾಗಿದ್ದು, ನಗರದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ವಿಗ್ರಹಗಳನ್ನು ಪರಿಶೀಲಿಸಿ ಹಾಗೂ ಗಣೇಶ ವಿಸರ್ಜನೆಯ ವಿವಿಧ ಕಾರ್ಯಕ್ರಮಗಳನ್ನು ಪರಿಶೀಲಿಸಿ, ಉತ್ತಮ ಸಂಸ್ಥೆ/ಮಂಡಳಿಗಳನ್ನು ಗುರುತಿಸಿ ಬಹುಮಾನ ನೀಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error