ಪರಿಸರ ದಿನಾಚರಣೆ ನಿಮಿತ್ಯ ಸಸಿ ನೆಡುವ ಕಾರ್ಯಕ್ರಮ

koppal-parisara-dinacharane
ಕೊಪ್ಪಳ: ಭಾಗ್ಯನಗರದ ಪ್ರಗತಿ ಮಹಿಳಾ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಜೂನ್ ೫ ರಂದು ನಡೆಯುವ ಪರಿಸರ ದಿನಾಚಣೆ ನಿಮಿತ್ತ. ಇಂದು ಸಂಸ್ಥೆಯ ಪದಾಧಿಕಾರಿಗಳೆಲ್ಲ ಸೇರಿಕೊಂಡು ಸಂಸ್ಥೆಯ ಕಛೇರಿ ಆವರಣದಲ್ಲಿ ಸಸಿನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಮಂಜುಳಾ ವಿಶ್ವನಾಥ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೇಲ್ಲರ ಹೊಣೆ, ಜವಾಬ್ದಾರಿ ಕೂಡಾ, ಪರಿಸರ ಹಾನಿಯಿಂದಾಗಿ ಇಂದು ಪ್ರಕೃತಿ ವಿಕೋಪಗಳು ಮೇಲಿಂದ ಮೇಲೆ ಜರುಗುತ್ತಿವೆ. ಪ್ರತಿಬಾರಿ ಪ್ರಕೃತಿ ಮುನಿಸಿಕೊಂಡಾಗ ಲೆಕ್ಕವಿಲ್ಲದಷ್ಟು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆಲ್ಲಕಾರಣ ಪ್ರಕೃತಿ ನಾಶ, ಇನ್ನು ಹೀಗೆ ಮುಂದುವರೆದರೆ ಜೀವ ಸಂಕುಲದ ಅವನತಿ ಕಟ್ಟಿಟ್ಟ ಬುತ್ತಿ, ಇನ್ನಾದರೂ ನಾವೆಲ್ಲರು ಜಾಗೃತರಾಗೋಣ, ನಮ್ಮ ಮನೆ ಆವರಣ, ಶಾಲೆ, ಕಾಲೇಜು ಆವರಣ, ಹೊಲ, ಗಹದ್ದೆಗಳಲ್ಲಿ ಸಾಧ್ಯವಾದಷ್ಟು ಸಸಿ ಗಳನ್ನು ನೆಟ್ಟು, ಪರಿಸರ ಬೆಳೆಸೋಣ, ಉಳಿಸೋಣ ಎಂದು ಕರೆ ನೀಡಿದರು, ಈ ಸಂದರ್ಭದಲ್ಲಿ ಪವಿತ್ರಾ ಕಾಳಿ, ಲಕ್ಷ್ಮೀ ಜಗದೀಶ, ಮೀರಾ, ಪ್ರಮಿಳಾ ಮುಂತಾದವರು ಉಪಸ್ಥಿತರಿದ್ದರು.

Leave a Reply