ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ.

ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯ, ಕೊಪ್ಪಳದಲ್ಲಿ ೨೦೧೫-೧೬ನೇ ಸಾಲಿನ ಪದವಿ ಅಂತಿಮ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದ ಮುಖ್ಯ ಅತಿಥಿಗಳಾದ ಥಿಯೋಸೋಫಿಕಲ್ ಮಹಿಳಾ ಪದವಿ ಮಹಾವಿದ್ಯಾಲಯ, ಹೊಸಪೇಟೆಯ ಪ್ರಾಚಾರ್ಯರಾದ ಡಾ.ಮಂಜುಳಾ .ಬಿ ರವರು ಮಾತನಾಡುತ್ತ ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನವನ್ನು ಮಹಾವಿದ್ಯಾಲಯ ನೀಡುತ್ತದೆ ಆದರೆ ಜೀವನದ ಅಧ್ಯಯನ ಮುಗಿಯುವದಿಲ್ಲ. ಶೈDSC05688ಕಣಿಕ ಅರ್ಹತೆಯೊಂದಿಗೆ ಸತತ ಪರಿಶ್ರಮ, ಆತ್ಮಶ್ರದ್ಧೆ, ಕಠಿಣ ಪ್ರಯತ್ನ, ಸಂವಹನ ಕಲೆಯನ್ನು ರೂಢಿಸಿಕೊಂಡರೆ ಮಾತ್ರ ಜೀವನದಲ್ಲಿ ಯಶಸ್ವಿಯಾಗುತ್ತೀರಿ. ಜೀವನ ಎಂದೂ ಮುಗಿಯದ ಪಯಣವಾಗಿದ್ದು ಸದಾ ಕಲಿಯುವಿಕೆಯಿಂದ ಮಾತ್ರ ಜೀವನದ ನಿಜವಾದ ಅರ್ಥಗೊತ್ತಾಗುತ್ತದೆ. ಅನುಭವಿಗಳು, ವಿಜ್ಞಾನಿಗಳು, ತತ್ವಜ್ಞಾನಿಗಳು, ಜೀವನದ ಕುರಿತಾಗಿ ಆಳವಾಗಿ ಅಧ್ಯಯನ ಕೈಗೊಂಡು ಸ್ಪಷ್ಟವಾದ ಜೀವನದ ಸಂದೇಶ ನೀಡಿದ್ದಾರೆ. ಅಂತಹ ಜೀವನದ ಸಂದೇಶ ಪಾಲಿಸಿದರೆ ಜೀವನ ಉಜ್ವಲವಾಗುತ್ತದೆ ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

Related posts

Leave a Comment