ಪಡಿತರ ಚೀಟಿಗೆ ಆಧಾರ್ ಕಾರ್ಡ್ ಹೊಂದಾಣಿಕೆ : ಗ್ರಾಮ ಪಂಚಾಯತಿವಾರು ದಿನಾಂಕ ನಿಗದಿ

ration_card_how_to_get ಕೊಪ್ಪಳ ತಾಲೂಕಿನ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಡಿ. ೩೧ ರ ಒಳಗಾಗಿ ಹೊಂದಾಣಿಕೆ ಮಾಡಿಸಿಕೊಳ್ಳಬೇಕಿದ್ದು, ಜನರ ನೂಕು-ನುಗ್ಗಲು ನಿಯಂತ್ರಣ ಹಾಗೂ ಸಮರ್ಪಕ ಕಾರ್ಯ ನಿರ್ವಹಣೆಯ ಉದ್ದೇಶದಿಂದ ಈ ಕಾರ್ಯಕ್ಕೆ ಗ್ರಾಮ ಪಂಚಾಯತಿವಾರು ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಕೊಪ್ಪಳ ತಹಸಿಲ್ದಾರ್ ಗುರುಬಸವರಾಜ ಅವರು ತಿಳಿಸಿದ್ದಾರೆ.
ಪಡಿತರ ಚೀಟಿದಾರರು ಪಡಿತರಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಡಿ. ೩೧ ರ ಒಳಗಾಗಿ ಹೊಂದಾಣಿಕೆ ಮಾಡಿಸಬೇಕಾಗಿರುತ್ತದೆ. ಈ ಕಾರ್ಯಕ್ಕಾಗಿ ತಾಲೂಕಿನ ಎಲ್ಲ ಗ್ರಾಮಗಳಿಂದ ಜನರು ತಹಸಿಲ್ದಾರರ ಕಚೇರಿಗೆ ಒಟ್ಟಿಗೆ ಆಗಮಿಸುತ್ತಿರುವುದರಿಂದ, ಜನರ ನೂಕು ನುಗ್ಗಲು ಉಂಟಾಗಿ ಈ ಕಾರ್ಯ ಸಮರ್ಪಕವಾಗಿ ಜರುಗಲು ತೊಂದರೆಯಾಗುತ್ತಿದೆ. ಆದ್ದರಿಂದ ಗ್ರಾಮ ಪಂಚಾಯತಿವಾರು ದಿನಾಂಕವನ್ನು ನಿಗದಿಪಡಿಸಲಾಗಿದೆ.
ಸಂಬಂಧಪಟ್ಟ ಗ್ರಾಮಗಳಲ್ಲಿನ ಇದುವರೆಗೂ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಿಸದೇ ಇರುವವರು ಮಾತ್ರ, ನಿಗದಿತ ದಿನದಂದು ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಸಹಿತ ತಾಲೂಕು ಕಚೇರಿಗೆ ಬಂದು, ಕೌಂಟರ್‌ನಲ್ಲಿ ಆಧಾರ್ ಕಾರ್ಡನ್ನು ಹೊಂದಾಣಿಕೆ ಮಾಡಿಸಿಕೊಳ್ಳಬೇಕು.
ಆಧಾರ್ ಕಾರ್ಡ್ ಹೊಂದಾಣಿಕೆಗಾಗಿ ಗ್ರಾಮ ಪಂಚಾಯತಿವಾರು ನಿಗದಿಪಡಿಸಿದ ದಿನಾಂಕದ ವಿವರ ಇಂತಿದೆ. ಡಿ. ೧೬ ರಂದು ಕವಲೂರು, ಹಟ್ಟಿ, ಅಳವಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು. ಡಿ. ೧೭ ರಂದು ಬೋಚನಹಳ್ಳಿ, ಬಟಗೇರಿ, ಮತ್ತೂರು. ಡಿ. ೧೯ ರಂದು ಕಾತರಕಿ-ಗುಡ್ಲಾನೂರ, ಬಿಸರಳ್ಳಿ, ಹಿರೇಸಿಂದೋಗಿ. ೨೦ ರಂದು ಕೋಳೂರು, ಹಲಗೇರಾ, ಓಜನಹಳ್ಳಿ, ಮಾದಿನೂರು. ೨೧ ರಂದು ಕಿನ್ನಾಳ, ಲೇಬಗೇರಾ, ಇರಕಲ್ಲಗಡ, ಚಿಕ್ಕಬೊಮ್ಮನಾಳ. ೨೨ ರಂದು ಹಾಸಗಲ್, ತಾವರಗೇರಾ, ಇಂದರಗಿ. ೨೩ ರಂದು ಬೂದಗುಂಪಾ, ಬಂಡಿಹರ್ಲಾಪುರ. ೨೪ ರಂದು ಶಿವಪುರ, ಹುಲಗಿ, ಮುನಿರಾಬಾದ್ (ಯೋಜನಾ ಗ್ರಾಮ). ೨೬ ರಂದು ಹೊಸಳ್ಳಿ, ಅಗಳಕೇರಾ. ೨೭ ರಂದು ಹಿಟ್ನಾಳ, ಗುಳದಲ್ಳಿ. ೨೮ ರಂದು ಗಿಣಿಗೇರಾ, ಹಿರೇಬಗನಾಳ. ೨೯ ರಂದು ಕುಣಿಕೇರಾ, ಗೊಂಡಬಾಳ. ೩೦ ರಂದು ಬಹದ್ದೂರಬಂಡಿ, ಹಾಲವರ್ತಿ. ಡಿ. ೩೧ ರಂದು ಕಲಕೇರಾ, ಬೇವಿನಹಳ್ಳಿ, ಒಣಬಳ್ಳಾರಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಪಡಿತರ ಚೀಟಿದಾರರು ಕೊಪ್ಪಳ ತಹಸಿಲ್ದಾರರ ಕಚೇರಿಗೆ ಆಗಮಿಸಿ, ಪಡಿತರ ಚೀಟಿಯನ್ನು ಆಧಾರ್ ಕಾರ್ಡ್‌ಗೆ ಹೊಂದಾಣಿಕೆ ಮಾಡಿಸಿಕೊಳ್ಳಬೇಕು ಎಂದು ಕೊಪ್ಪಳ ತಹಸಿಲ್ದಾರ್ ಗುರು ಬಸವರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error