ಪಠ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳು ಮುಖ್ಯ – ಗಣೇಶ ಎಸ್.ಎಸ್.

ಕೊಪ್ಪಳ-13- ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಉತ್ತಮ ಭವಿಷ್ಯ ಸಿಗುತ್ತದೆ ಎಂದು ಮೀಸಲು ಪಡೆಯ ಪೊಲೀಸ ಇನ್ಸ್‌ಸ್ಪೆಕ್ಟ್‌ರ ಆದಂತಹ  ಗಣೇಶ ಎಸ್.ಎಸ್ ರವರು ನುಡಿದರು. ಅವರು ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದಿಂದ ನಡೆದ ಕ್ರೀಡಾ ವಾರ್ಷಿಕೋತ್ಸವದಲ್ಲಿ 13-04-2016ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮುಂದುವರೆದು ವಿದ್ಯಾರ್ಥಿಗಳು ಉತ್ತಮ ನಡತೆ ಹೊಂದಿ ವಿದ್ಯಾರ್ಥಿ ಜೀವನವನ್ನು ಸದ್ಭಳಕೆ ಮಾಡಿಕೊಂಡಾಗ ತಕ್ಕ ಪ್ರತಿಫಲ ದೊರೆಯುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಎಂ.ಎಸ್ ದಾದ್ಮಿ ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ಆಡಳಿತಾಧಿಕಾರಿಗಳಾದ ಡಾ.ಆರ್ ಮರೇಗೌಡ, ಕ್ರೀಡಾ ಅಧಿಕಾರಿಗಳಾದ ಶ್ರೀ ಈಶಪ್ಪ ದೊಡ್ಡಮನಿ ಉಪಸ್ಥಿತರಿದ್ದರು.

Related posts

Leave a Comment