ನ್ಯಾ. ಸದಾಶಿವ ಆಯೋಗ ಜಾರಿಯಾಗಬೇಕು- ಗೂಳಪ್ಪ ಹಲಗೇರಿ

sadhashiva_ayoga_varadiಕೊಪ್ಪಳ:೨೬, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಜನಸಂಖ್ಯಾವಾರು ಮೀಸಲಾತಿ ಹಂಚಿಕೆಯಾಗುವುದು ಬಹುಮುಖ್ಯವಾಗಿದೆ. ಪರಿಶಿಷ್ಟ ಜಾತಿಯಲ್ಲಿ ಬಹುಸಂಖ್ಯಾತರಾದ ಮಾದಿಗರು ಹೆಚ್ಚು ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಮೀಸಲಾತಿ ಪರಿಶಿಷ್ಟ ಜಾತಿಯಲ್ಲಿ ಸರಿಯಾಗಿ ಹಂಚಿಕೆಯಾಗಿಲ್ಲ. ಪರಿಶಿಷ್ಟ ಜಾತಿಯಲ್ಲಿಯ ಪ್ರಬಲ ಕೋಮುಗಳ ಪಾಲಾಗಿದ್ದು ಅತೀ ಶೋಚನೀಯ ವಿಷಯ. ಪಕ್ಷಾತೀತವಾಗಿ ಎಲ್ಲಾ ವಿಧಾನಸಭಾ ಸದಸ್ಯರುಗಳು ಹಾಗೂ ವಿಧಾನಪರಿಷತ್ ಸದಸ್ಯರುಗಳು ಸದಾಶಿವ ಆಯೋಗದ ಜಾರಿಗೆ ಬೆಂಬಲಿಸಬೇಕೆಂದು ಜಿಲ್ಲಾ ಪಂಚಾಯತ ಸದಸ್ಯರಾದ ಗೂಳಪ್ಪ ಹಲಗೇರಿ ೨೬- ರಂದು ಅಶೋಕ ಸರ್ಕಲ್ಲಿನಲ್ಲಿ ನಡೆದ ಸದಾಶಿವ ಆಯೋಗದ ವರದಿ ಮಂಡನೆಯಾಗಲಿ, ಸ್ವಾಭಿಮಾನಿ ಮಾದಿಗ ಸಮಾವೇಶಕ್ಕೆ ವಿರೋದಿಸುವವರ ವಿರುದ್ಧ ಪ್ರತಿಭಟನೆಯಲ್ಲಿ ಮಾತನಾಡಿದರು.ಮುಖಂಡರಾದ ಶುಕ್ರರಾಜ ತಾಳಕೇರಿ ಮಾತನಾಡಿ  ಮಾಧ್ಯಮದ ಮುಖಾಂತರ ಎ.ಜೆ.ಸದಾಶಿವ ಆಯೋಗದ ವರದಿಗೆ ಅಪಸ್ವರ ಎತ್ತಿರುವ ಪಿ.ರಾಜೀವ್, ನರೇಂದ್ರಸ್ವಾಮಿ, ಶಿವರಾಜ ತಂಗಡಗಿ, ಮಾನಪ್ಪ ವಜ್ಜಲ್, ಪ್ರಭು ಚವ್ಹಾನ ಇವರು ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬಾರದೆಂದು ವಿರೋಧಿಸಿದ್ದಾರೆ ಇದು ಖಂಡನಾರ್ಹ ಎಂದು ಹೇಳಿದರು.

ಡಾ|| ಬಿ.ಜ್ಞಾನಸುಂದರ  ಸಿದ್ದರಾಮಯ್ಯನವರು ಮಂತ್ರಿಮಂಡಲದಲ್ಲಿ ಸಮಾಜ ಕಲ್ಯಾಣ ಸಚಿವರಾದ ಹೆಚ್.ಆಂಜನೇಯರವರು ಏಕೈಕ ವ್ಯಕ್ತಿಯಾಗಿರುತ್ತಾರೆ. ಮತ್ತು ಪ್ರಬುದ್ಧ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮತ್ತು ಸರ್ವ ಜನಾಂಗದ ಶ್ರೇಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲಾ ಜಾತಿ ಜನಾಂಗದವರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇತ್ತೀಚಿಗೆ ನಮ್ಮವರು ಸಂಘಟಿತರಾಗಿ ನಮ್ಮ ಹಕ್ಕುಗಳಿಗಾಗಿ ಬೇಡಿಕೆ ಇಟ್ಟಾಗ ಅವುಗಳನ್ನು ದಮನ ಮಾಡುವ ಉದ್ದೇಶದಿಂದ ನಮ್ಮ ಸಮಾಜ ಹೊಂದಿದ ಏಕೈಕ ಸಚಿವಸ್ಥಾನವನ್ನು ಕಸಿದುಕೊಳ್ಳುವ್ವ ಹುನ್ನಾರ ನಡೆಸಿರುವುದು ವಿಷಾದನೀಯ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ಯೋಜನೆಗಳನ್ನು ಇತಿಹಾಸದಲ್ಲಿಯೇ ಪರಿಶಿಷ್ಟ ಜಾತಿಗೆ ಅತೀ ಹೆಚ್ಚು ಅನುದಾನ ತಂದಿದ್ದು ಹಾಗೂ ಪರಿಶಿಷ್ಟ ಜಾತಿಯವರಿಗಾಗಿ ನಾನಾ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸಮಾಜದ ಏಕೈಕ ಸಚಿವ ಹೆ.ಆಂಜನೇಯ ಅವರ ಕೊಡುಗೆ ಅಪಾರವಾಗಿದೆ ಎಂದರು.
ಯುವ ಮುಖಂಡ ಹಾಲೇಶ ಕಂದಾರಿ ಮಾತನಾಡಿ ಪರಿಶಿಷ್ಟ ಜಾತಿಯ ಕೆಲ ಶಾಸಕರು ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಯವರ ವಿರುದ್ಧ ಹೇಳಿಕೆ ನೀಡಿರುವುದು ಖಡಂನೀಯ. ಈ ರೀತಿ ಹೇಳಿಕೆ ನೀಡಿರುವ ಶಾಸಕರ ವಿರುದ್ಧ ಕೊಪ್ಪಳ ಜಿಲ್ಲಾ ಅಖಿಲ ಕರ್ನಾಟಕ ಜಿಲ್ಲಾ ಮಾದಿಗರ ಮಹಾಸಭಾ ಕೊಪ್ಪಳ ಇದನ್ನು ತೀವ್ರವಾಗಿ ಖಂಡಿಸುತ್ತಾ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಹಿರಿಯರಾದ ಮಾರುತೆಪ್ಪ ಹಲಗೇರಿ, ಗವಿಸಿದ್ದಪ್ಪ ಕಂದಾರಿ, ಸಿದ್ದೇಶ ಪೂಜಾರ, ವೆಂಕಟೇಶ ಹಾಲವರ್ತಿ, ಚಂದುಸ್ವಾಮಿ, ಹನುಮಂತಪ್ಪ ಸಿಂದೋಗಿ, ಮರಿಯಪ್ಪ ಯತ್ನಟ್ಟಿ, ಮರಿಯಪ್ಪ ದದೇಗಲ್, ದ್ಯಾಮಣ್ಣ ಚಾಮಲಾಪೂರ, ರಾಮಣ್ಣ ಚೌಡ್ಕಿ, ಹನುಮಂತಪ್ಪ ಮ್ಯಾಗಳಮನಿ, ಸಂಜೀವಪ್ಪ ಕಡೇಮನಿ, ಪ್ರಭುರಾಜ ಕಿಡದಾಳ, ಗಣೇಶ ಹೊರತಟ್ನಾಳ, ಜುಂಜಪ್ಪ ಮೆಳ್ಳಿಕೇರಿ, ಮುದಕಪ್ಪ ನರೇಗಲ್, ಮುದಿಯಪ್ಪ ಬೇಳೂರ, ಜಗದೀಶ ಮಾಲಗಿತ್ತಿ, ಲಕ್ಷ್ಮಣ ಕುಣಿಕೇರಿ, ಓಬಳೇಶ ಸಿಂದೋಗಿ ಇನ್ನಿತರರು ಉಪಸ್ಥಿತರಿದ್ದರು.

Leave a Reply