ನೆಲದ ಋಣವನ್ನು ಎತ್ತಿ ಹಿಡಿಯುವಂತಾ ಕೆಲಸವನ್ನು ಪ್ರತಿಯೊಬ್ಬ ಕನ್ನಡಿಗನೂ ಮಾಡಬೇಕು-ಶಂಕರ ಬಿದರಿ

karave-yuvasainya-kodatageri ks_kodatageriಯಲಬುರ್ಗಾ,ನ,೨೧;ನೆಲ ಜಲ,ಭಾಷೆಗಾಗಿ ನಾವು ಹೋರಾಡುವಂತಾ ಪ್ರವೃತಿ ಬೆಳೆಸಿಕೊಳ್ಳುವಂತಾ ಕೆಲಸ ಆಗಬೇಕಿದೆ.ಇತಿಹಾಸವನ್ನೆ ಹೊಂದಿರುವ ನಮ್ಮ ಕನ್ನಡ ಭಾಷೆ ಬಹು ಪ್ರಾಚೀನವಾದದು,ಈ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ನಾವು ಪುಣ್ಯವಂತರು,ನೆಲದ ಋಣವನ್ನು ಎತ್ತಿ ಹಿಡಿಯುವಂತಾ ಕೆಲಸವನ್ನು ಪ್ರತಿಯೊಬ್ಬ ಕನ್ನಡಿಗನ್ನು ಹೋರಾಡಬೇಕೆಂದು ನಿವೃತ್ತ ಪೋಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಸಲಹೆ ನೀಡಿದರು.ತಾಲೂಕಿನ ರ‍್ಯಾವಣಕಿ ಗ್ರಾಮದಲ್ಲಿ ಕರವೇ ಯುವ ಸೈನ್ಯ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,ಅಂದು ಏಕೀರಕರಣ ಕರ್ನಾಟಕಕ್ಕಾಗಿ ಭಾಷೆ,ನೆಲ ಜಲ ಹೋರಾಡಿ ತಮ್ಮ ಜೀವನವನ್ನೆ ಮುಡುಪಾಗಿ ಇಟ್ಟಿದ್ದಾರೆ.ನಮ್ಮ ಭಾಷೆ,ನೆಲ,ಜಲಕ್ಕಾಗಿ ಹೋರಾಡಿ ನಮ್ಮ ನಾಡನ್ನು ಉಳಿಸೋಣ.ಕನ್ನಡ ಭಾಷೆ ನೆಲ,ಜಲ ವಿಷಯ ಬಂದಾಗ ನಾವೇಲ್ಲೂರು ಒಗ್ಗಟ್ಟಿನಿಂದ ಹೋರಾಡಿ,ಪ್ರತಿಯೊಬ್ಬರಲ್ಲಿ ನಮ್ಮ ಭಾಷೆ,ನಾಡು ನುಡಿ,ನೆಲ ಜನ ರಕ್ಷಣೆಗಾಗಿ ಪ್ರತಿಯೊಬ್ಬರು ಹೋರಾಡುವಂತಾ ಪ್ರವೃತ್ತಿ ಬೆಳೆಸಿಕೊಂಡಾಗ ಮಾತ್ರ ನಮ್ಮ ಕನ್ನಡನಾಡು ಗಂಧದನಾಡಾಗಿ ಬೆಳೆಸಲು ಸಾಧ್ಯ ಎಂದರು.
ಬಿಜೆಪಿ ಪಕ್ಷದ ಯುವ ಮುಖಂಡ ನವೀನಕುಮಾರ ಗುಳಗಣ್ಣನವರ್ ಮಾತನಾಡಿ,ಕನ್ನಡ ನಾಡು ನುಡಿಗಾಗಿ ಪ್ರತಿಯೊಬ್ಬರು ತಮ್ಮ ಸೇವೆ ಮಾಡುವಂತಾ ಪ್ರವೃತ್ತಿ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದ ಅವರು,ಸಾವಿರಾರು ವರ್ಷದಿಂದಲೂ ಕನ್ನಡ ಭಾಷೆ,ಸಂಸ್ಕ್ರತಿಕ,ಸಾಹಿತ್ಯಕ್ಕೆ ಇತಿಹಾಸವಿದೆ.ಈ ಕ್ಷೇತದಲ್ಲಿ ನಾಡಿನ ೮ ಜನ ಸಾಹಿತಿಗಳಿಗೆ ಜ್ಞಾನ ಪೀಠ ಪ್ರಶಸ್ತಿ ಲಭಿಸಿದೆ.ಕರ್ನಾಟಕವು ವಿಭಿನ್ನ ಕಲೆ,ಸಾಹಿತ್ಯ,ಸಂಸ್ಕೃತಿಗಳ ಬೀಡು,ಇಂಥಹ ಚೆಲುವ ಕನ್ನಡ ನಾಡಿಗೆ ಹಾಗೂ ಕನ್ನಡ ಭಾಷೆಗೆ ಪ್ರಾಶಸ್ತ್ಯ ನೀಡುವ ಮೂಲಕ ಕನ್ನಡ ನಾಡಿಗೆ ಪ್ರತಿಯೊಬ್ಬರು ಹೋರಾಡುವ ಮೂಲಕ ನಾಡಿನ ಕೀರ್ತಿ ಹೆಚ್ಚಸಬೇಕೆಂದರು.
ಕರವೇ ಯುವ ಸೈನ್ಯದ ರಾಜ್ಯದ್ಯಕ್ಷ ಕೆ.ಎಸ್.ಕೊಡತಗೇರಿ ಮಾತನಾಡಿ,ಕರ್ನಾಟಕ ಏಕೀಕರಣಕ್ಕಾಗಿ ರಾಜ್ಯದ ಅನೇಕ ಮಹನೀಯರು ಶ್ರಮಿಸಿದ್ದಾರೆ.ಅವರ ತ್ಯಾಗ ಹೋರಾಟದ ಫಲವಾಗಿ ಇವತ್ತು ಅಖಂಡ ಕರ್ನಾಟಕ ರಾಜ್ಯವಾಗಿರುವ ನಮ್ಮ ಕನ್ನಡ ನಾಡು ನುಡಿಗಾಗಿ ನೆಲ ಜಲ,ಭಾಷೆ,ಸಾಂಸ್ಕೃತಿಕ ಪರಂಪರೆಯನ್ನು ಅರಿತು ಸಂಸಕ್ಷಣೆ ಮಾಡಲು ಪ್ರತಿಯೊಬ್ಬರು ಮುಂದಾಗಬೇಕಿದೆ ಎಂದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು.ಸಮಾರಂಭದಲ್ಲಿ ನಾಗರಾಜ ಹಾಲಳ್ಳಿ,ಆದೇಶ ರೋಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

Please follow and like us:
error