ನೂತನ ಜಿಲ್ಲಾ ಪಂಚಾಯತ್ ನ ಸಾಮಾನ್ಯಸಭೆ

koppal-zp-meeting koppal-zp-meetings koppal-zp-members

ನೂತನ ಜಿಲ್ಲಾ ಪಂಚಾಯತ್ ನ ಸಾಮಾನ್ಯಸಭೆ  ಜರುಗಿತು.  ನೂತನವಾಗಿ ಆಯ್ಕೆಯಾಗಿರುವ ಸದಸ್ಯರು ಬಹಳ ಉತ್ಸಾಹದಿಂದಲೇ ಭಾಗವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಬಿ.ನಾಗರಳ್ಳಿ  ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಅಧಿಕಾರಿಗಳು ತಮ್ಮ ಇಲಾಖೆಗಳ ಕುರಿತು ಮಾಹಿತಿ ನೀಡುತ್ತಿದ್ದರೆ ಸದಸ್ಯರು ಆಸಕ್ತಿಯಿಂದ ಕೇಳಿದ್ದಲ್ಲದೇ ತಮ್ಮ ಪ್ರಶ್ನೆಗಳಿಗೆ ಉತ್ತರವನ್ನೂ ಪಡೆದುಕೊಂಡರು. ನವಲಿ ಕ್ಷೇತ್ರದ ಜಿ.ಪಂ.ಸದಸ್ಯೆ ತಮ್ಮ ಭಾಗದ ನೀರಿನ ಸಮಸ್ಯೆಯನ್ನು ತೋರ್ಪಡಿಸಲು ಬಾಟಲಿಯಲ್ಲಿಯೇ ನೀರನ್ನು ತಂದಿದ್ದರು. ಅದನ್ನು ಅಧ್ಯಕ್ಷರ ಗಮನಕ್ಕೆ ತಂದ ಅವರು ಕುಡಿಯಲು ಯೋಗ್ಯವಲ್ಲದೇ ಇಂತಹ ನೀರನ್ನು ಕ್ಷೇತ್ರದ ಜನ ಕುಡಿಯುತ್ತಿದ್ದಾರೆ ಶೀಘ್ರದಲ್ಲಿಯೇ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಮಾಡಿದ್ದು ಎಲ್ಲರ ಗಮನಸೆಳೆಯಿತು. ಕೆಲವು ಅನುಭವಿ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಢರು. ಸಭೆಯಲ್ಲಿ ಕುಡಿಯುವ ನೀರು ಮತ್ತು ಬರ ಪರಸ್ಥಿತಿಯ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು. ಹೊಸದಾಗಿ ಆಯ್ಕಯಾದವರು ಹುಮ್ಮಸ್ಸಿನಿಂದಲೇ ಭಾಗಿಯಾದದರು. ಆದರೆ ಇದ್ಯಾವುದರತ್ತವೂ ಗಮನ ಹರಿಸದೇ ಕೆಲವೊಂದು ಅಧಿಕಾರಿಗಳು ಮೊಬೈಲ್ ನಲ್ಲಿ ಆಟವಾಡುತ್ತಿದ್ದದ್ದು ಕಂಡು ಬಂತು. ಸಭೆಯ ಬಗ್ಗೆ ಯಾವುದೇ ಗೌರವವಿಲ್ಲದಂತೆ ನಡೆದುಕೊಳ್ಳುವುದು ಇಂತಹ ಅಧಿಕಾರಿಗಳಿಗೆ ಸಾಮಾನ್ಯ ಎನ್ನುವಂತಾಗಿದೆ.

Please follow and like us:
error

Related posts

Leave a Comment