ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್ ಸರಕಾರ – ಶಾಸಕ ಕೆ.ರಾಘವೇಂದ್ರ ಹಿಟ್ನಾಳ

koppal-mla1 koppal-mla ಕ್ಷೇತ್ರದ ಅಳವಂಡಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಗ್ರಾಮಗಳಾದ ಗುಡಿಗೇರಿ, ಕವಲೂರು, ಹಟ್ಟಿ, ಅಳವಂಡಿ, ರಘುನಾಥನಹಳ್ಳಿ, ಹೈದರನಗರ, ಕಂಪ್ಲಿ ಗ್ರಾಮಗಳಲ್ಲಿ ರೂ.೧.೫೦ ಕೋಟಿಯ ಸಿ.ಸಿ.ರಸ್ತೆ, ಶುದ್ಧ ಕುಡಿಯುವ ನೀರಿನ ಘಟಕ, ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ತನ್ನ ಚುನಾವಣಾ ಪ್ರನಾಳಿಕೆಯಲ್ಲಿ ಜನರಿಗೆ ನೀಡಿದ ಆಶ್ವಾಸನೆಗಳಂತೆ ರಾಜ್ಯದ ಕಾಂಗ್ರೆಸ್ ಸರಕಾರವು ೧೬೦ ಕಾರ್ಯಗಳಲ್ಲಿ ಈಗಾಗಲೆ ೧೧೦ ಆಶ್ವಾಸನೆಗಳನ್ನು ಪೂರೈಸಲಾಗಿದೆ. ರಾಜ್ಯದ ಎಲ್ಲಾ ವರ್ಗಗಳ ಜನರಿಗೆ ತಲುಪುವ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಸಮಾಜದ ಕೆಳಹಂತದ ವರ್ಗದವರ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಲು ಅನ್ನ ಭಾಗ್ಯ, ವಿದ್ಯಾಸಿರಿ, ಕ್ಷೀರ ಭಾಗ್ಯ, ಶೂ ಭಾಗ್ಯ, ಶಾದಿ ಭಾಗ್ಯ ಯೋಜನೆಗಳನ್ನು ಅನುಷ್ಟಾನಕ್ಕೆ ತಂದು ದೀನದಲಿತರಿಗೆ ನೈತಿಕ ಹಕ್ಕನ್ನು ನೀಡಿದ ಸಿದ್ರಾಮಯ್ಯನವರ ಸರಕಾರ. ಸುವರ್ಣ ಗ್ರಾಮದ ಯೋಜನೆಯಡಿಯಲ್ಲಿ ೮ ಕೋಟಿ ಅನುದಾನ ಮಂಜೂರು, ಬಹದ್ದೂರಬಂಡಿ-ನವಲಕಲ್ ಏತ ನೀರಾವರಿಗೆ ರೂ.೧೦೦ ಕೋಟಿ ಮಂಜೂರಾಗಿದ್ದು ಬೆಟಗೇರಿ ಮತ್ತು ಅಳವಂಡಿ ಏತ ನೀರಾವರಿ ಯೋಜನೆಗೆ ೮೮ ಕೋಟಿ, ಸಿಂಗಟಾಲೂರ ಏತ ನೀರಾವರಿಯ ಕವಲೂರ ಕಾಲುವೆಗೆ ೪೭ ಕೋಟಿ ಹಣ ಬಿಡುಗಡೆಯಾಗಿದ್ದು ಇನ್ನೂ ೧ ಕಿ.ಮೀ. ಕಾಲುವೆ ನಿರ್ಮಾಣವಾದರೆ ಈ ಭಾಗದ ರೈತರಿಗೆ ಶೀಗ್ರವೆ ಬರುವ ದಿನಗಳಲ್ಲಿ ನೀರಿನ ಸೌಭಾಗ್ಯ ದೊರೆಯಲಿದ್ದು ಈ ಭಾಗವು ಹಸಿರಿನಿಂದ ಕಂಗೊಳಿಸಲಿದೆ ಎಂದು ಹೇಳಿದರು.

Please follow and like us:
error