ನಾಳೆ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ

yuva-brigade-koppal yuva-brigade-koppal-chakravarti-sulibeli

ಕೊಪ್ಪಳ: ನಗರದ ಯುವ ಬ್ರಿಗೇಡ್ ಸಂಘಟನೆ ಸೋಮವಾರ ಹಮ್ಮಿಕೊಂಡಿರುವ ವಿಶ್ವಗುರು ಭಾರತ ಹೆಸರಿನ ರಾಷ್ಟ್ರಜಾಗೃತಿ ಕಾರ್ಯಕ್ರಮದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡಲಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಸೈನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ನಗರದ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪಕ್ಕದ ಸಾರ್ವಜನಿಕ ಮೈದಾನದಲ್ಲಿ ಜು. ೨೫ರ (ಸೋಮವಾರ) ಬೆಳಗ್ಗೆ ೯ ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕ ಮಂಜುನಾಥ ಶೆಟ್ಟರ್ ತಿಳಿಸಿದ್ದಾರೆ.

Please follow and like us:
error