ನಾಳೆ ಗಂಗಾವತಿ ಬಂದ್ ಗೆ ಕರೆ ನೀಡಿದ ಶಿವರಾಜ್ ತಂಗಡಗಿ ಬೆಂಬಲಿಗರು

t 13501653_934113980031084_8875706194196594150_n 13501653_934113980031084_8875706194196594150_n 13501605_934107096698439_6981540427952318655_n

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿಯವರನ್ನು ಸಂಪುಟದಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ಕೊಪ್ಪಳ ಅಶೋಕ ಸರ್ಕಲ್ ಮತ್ತು ಗಂಜ್ ಸರ್ಕಲ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು , ಅಭಿಮಾನಿಗಳು ಮತ್ತು ಬೆಂಬಲಿಗರು ಪ್ರತಿಭಟನೆ ನಡೆಸಿದರು. ಸುಮಾರು 2 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ನಂತರ ಮಳೆ ಆರಂಭವಾಗಿದ್ದರಿಂದ ಪ್ರತಿಭಟನೆ ನಿಲ್ಲಿಸಲಾಯಿತಾದರೂ ಗಂಜ್ ಸರ್ಕಲ್ ನಲ್ಲಿ ಸುರಿವ ಮಳೆಯಲ್ಲಿಯೇ ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭದಲ್ಲಿ ಸಂಗಪ್ಪ ಸಜ್ಜನ ಎನ್ನುವ ಬೆಂಬಲಿಗ ಸೀಮೆಎಣ್ಣಿ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆಯೂ ನಡೆಯಿತು. ಟೈರ್ ಗಳನ್ನು ಸುಟ್ಟು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು ಸಾಮಾಜಿಕ ನ್ಯಾಯದಡಿಯಲ್ಲಿ ಶಿವರಾಜ್ ತಂಗಡಗಿಯವರಿಗೆ ಅವಕಾಶ ನೀಡಬೇಕು. ಅಧುನಿಕ ಭಗಿರಥ ಎಂದೇ ಹೆಸರಾಗಿರುವ ಅವರನ್ನು ಸಂಪುಟದಿಂದಕೈಬಿಡಬಾರದು ಎಂದು ಆಗ್ರಹಿಸಿದರು. ಶಿವರಾಜ್ ತಂಗಡಗಿಯವರನ್ನು ಸಂಪುಟಕ್ಕೆ ಸೇರಿಸದಿದ್ದರೆ ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್, ಪುರಸಭೆ ಮತ್ತು ನಗರಸಭೆಯ ಸದಸ್ಯರು ರಾಜೀನಾಮೆ ನೀಡುತ್ತೇವೆ ಎಂದು ಹೇಳಿದರು.ಅಲ್ಲದೇ ನಾಳೆ ಗಂಗಾವತಿ ಬಂದ್ ಗೆ ಕರೆ ನೀಡಿದ್ದಾರೆ.

Please follow and like us:
error