ನಾಚಿಕೆಯಾಗ್ಬೇಕು ….. ಮತ್ತೆ ನಾಲ್ವರು ಬಾಲಕಾರ್ಮಿಕರು ಸಿಕ್ಕಿದ್ದಾರೆ !

ಅಧಿಕಾರಿಗಳು ಕಥೆ ಹೇಳ್ತಾರೆ…  ಮಕ್ಕಳಿಗಾಗಿ ಇರುವ ಯೋಜನೆಗಳು ಹಳ್ಳ ಹಿಡಿದಿವೆ… ಯಾವ ಯೋಜನೆಗಳೂ ಸಹ ಮಕ್ಕಳು ದುಡಿಯುವದನ್ನು ತಪ್ಪಿಸಲಿಕ್ಕಾಗುತ್ತಿಲ್ಲ.. ಅನ್ನಕ್ಕಾಗಿ ದುಡಿಯಲೇ ಬೇಕಿದೆ.. ಯಾವಾಗಲೋ ಒಮ್ಮೆ ಅಧಿಕಾರಿಗಳು ಈ ರೀತಿಯ ನಾಟಕವಾಡ್ತಾರೆ

ಜಿಲ್ಲಾ ಬಾಲಕಾರ್ಮಿಕರ ಯೋಜನಾ ಸಂಘದ ತಂಡದಿಂದ ಕೊಪ್ಪಳ ತಾಲೂಕಿನ ರುದ್ರಾಪೂರ ಗ್ರಾಮದ ಶ್ರೀಕೃಷ್ಣದೇವರಾಯ ಹ್ಯಾಚರಿಸ್ ಪ್ರೈ.ಲಿ. ಕೋಳಿ ಫಾರಂವೊಂದರಲ್ಲಿ ನಾಲ್ವರು ಬಾಲಕಾರ್ಮಿಕರನ್ನು ಪತ್ತೆ ಮಾಡಿ ರಕ್ಷಿಸಲಾಗಿದೆ.
ಕೋಳಿ ಫಾರಂನಲ್ಲಿ ಕೆಲಸದಲ್ಲಿ ತೊಡಗಿದ್ದ ನಾಲ್ವರು ಮಕ್ಕಳನ್ನು ಪತ್ತೆ ಮಾಡಿ ರಕ್ಷಿಸಲಾಗಿದೆ. ಆರೈಕೆ ಮತ್ತು ಪುನರ್ವಸತಿಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ, ನಂತರ ಪಾಲಕರಿಗೆ ಮಕ್ಕಳನ್ನು ಕೆಲಕ್ಕೆ ಕಳುಹಿಸಬಾರದು ಎಂದು ತಿಳುವಳಿಕೆ ನೀಡಿ ಅವರ ಮನೆಗೆ ಕಳುಹಿಸಲಾಯಿತು.
ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಸಿಬ್ಬಂದಿ, ಕ್ಷೇತ್ರಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಸಿಬ್ಬಂದಿ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಬಾಲಕಾರ್ಮಿಕರ ರಕ್ಷಣಾ ದಾಳಿಯಲ್ಲಿ ಭಾಗವಹಿಸಿದ್ದರು .child-labours-koppal

Leave a Reply