ನರೇಗಲ್‌ದಲ್ಲಿ ಕ್ರೀಡಾ ಕೂಟ

school-sports-koppalಕೊಪ್ಪಳ: ತಾಲೂಕಿನ ನರೇಗಲ್‌ದಲ್ಲಿ ದಿನಾಂಕ೨೭-೦೭-೨೦೧೬ ರಂದು ಹಲಗೇರಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟವನ್ನು ಸ.ಹಿ.ಪ್ರಾ ಶಾಲೆ ನರೇಗಲದಲ್ಲಿ ಹಮ್ಮಿಕೊಳ್ಳಲಾಯಿತು ಲೇಬಗೇರಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಗವಿಸಿದ್ದಪ್ಪ ಕರಡಿ ಯವರು ಕಾರ್ಯಕ್ರಮವನ್ನು ಉದ್ಘಾಸಿದರು.
ಚಂದ್ರಪ್ಪ ಮೀಸಿ ಎಸ್.ಡಿ.ಎಂ.ಸಿ ಅಧ್ಯಕ್ಷರು ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಸದಸ್ಯರು, ದೈಹಿಕ ಶಿಕ್ಷಣಾದಿಕಾರಿಗಳು ಶಿಕ್ಷಣ ಸಂಯೋಜಕರು ಸದಸ್ಯರು ದೈಹಿಕ ಶಿಕ್ಷಣಾದಿಕಾರಿಗಳ ಶಿಕ್ಷಣ ಸಂಯೋಜಕರು ಕೊಪ್ಪಳ, ಜಿಲ್ಲಾ ರೈತ ಸಂಗದ ಅಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಉಪಾಧ್ಯಕ್ಷರು ಪದಾದಿಕಾರಿಗಳು ಗಣ್ಯರು. ಹಿರಿಯರು ಭಾಗವಹಿಸಿದ್ದರು ಜಿಲ್ಲಾ ಪಂಚಾಯತ್ ಸದಸ್ಯರಿಗೆ ಮತ್ತು ನರೆಗಲ ಶಾಲೆಯಲ್ಲಿ ಸೇವೆಸಲ್ಲಿ ಸಿದ ಶಿಕ್ಷಕ/ಶಿಕ್ಷಕಿಯರಿಗೆ ಸನ್ಮಾನಿಸಮಾಯಿತು ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರನೀಡಿಗೌರವಿಸಲಾಯಿತು. ಗೊವಿಂದರಡ್ಡಿ ಸ,ಶಿ ಯವರು ಕಾರ್ಯಕ್ರಮ ನಿರೂಪಿಸಿದರು ಅನ್ನಪೂರ್ಣ ಸಶಿ ಯವರು ಮಕ್ಕಳೊಂದಿಗೆ ಸ್ವಾಗತ ಗೀತೆ ಹಾಡಿದರು. ಯಲ್ಲಪ್ಪ ಉಪ್ಪಾರ ಮುಖ್ಯೋಪಾಧ್ಯಯರು ವಂದಿಸಿದರು.

Please follow and like us:
error