ನಮ್ಮೂರ ನಾನ್ ವೆಜ್ ಗಣೇಶ

non-veg-ganesha-koppal non-veg-ganesha-koppal-1 non-veg-ganesha-koppal-celeberation

ಗಣೇಶ ಚತುರ್ಥಿಯಲ್ಲಿ ಗಣೇಶನಿಗೆ ನಿವೇನು ನೈವೇದ್ಯ ಮಾಡ್ತಿರಿ ? ಮೋದಕ ಪ್ರಿಯನಿಗೆ ಮೋದಕ, ಕಡುಬು ಹೋಳಿಗೆ ಅಲ್ಲವೇ. ಅದು ಸಾಮಾನ್ಯವಾಗಿ  ವಿನಾಯಕನಿಗೆ ನೀಡುವ ನೈವೇದ್ಯ  . ಆದರೆ ಕೊಪ್ಪಳ ಜಿಲ್ಲೆಯ ಭಾಗ್ಯನಗರದಲ್ಲಿ ಗಣೇಶ ಮೋದಕ ಪ್ರಿಯ ಮಾತ್ರವಲ್ಲ ಮಟನ್ ಪ್ರಿಯನೂ ಹೌದು. ಭಾಗ್ಯನಗರದಲ್ಲಿ   ಗಣೇಶನಿಗೆ ಸಿಹಿಯ ಜೊತೆ ಖಾರವೂ ನೈವೇದ್ಯ ಮಾಡುತ್ತಾರೆ. ಹೌದು ಮಾಂಸಹಾರವನ್ನು ನೈವೇದ್ಯ ನೀಡುವುದು ಇವರ ಸಂಪ್ರದಾಯವೂ ಹೌದು. ಗಣೇಶ ಚತುರ್ಥಿಯ ಮೊದಲೆರಡು  ದಿನ ಸಿಹಿ ನೈವೇದ್ಯ ಮಾಡಿದರೆ ಮೂರು ಅಥವಾ ನಾಲ್ಕನೇ ದಿನ ನಾನ್ ವೆಜ್ ನ್ನು ನೈವೇದ್ಯ ಮಾಡುತ್ತಾರೆ. ಮಟನ್,ಕೀಮಾ, ಚಿಕನ್, ಬೋಟಿ ಹೀಗೆ ವಿವಿಧ ವೆರೈಟಿಯಲ್ಲಿ ನೈವೇದ್ಯಕ್ಕೆ ಅಡುಗೆ ಸಿದ್ದ ಮಾಡಲಾಗುತ್ತದೆ.  ಮೈದಾ-ಗೋದಿ ಹಿಟ್ಟಿನಲ್ಲಿ ಮಾಡಿದ ಆರತಿಗಳಲ್ಲಿ ಮಟನ್ ಪೀಸ್ ನ್ನು, ಗ್ರೇವಿಯನ್ನು ಹಾಕುತ್ತಾರೆ.   ನಂತರ  ಗಣೇಶನಿಗೆ ಆರತಿ ಬೆಳಗಲಾಗುತ್ತದೆ.   ಇಷ್ಟು ಮಾತ್ರವಲ್ಲ  ಗಣೇಶನಿಗೆ ಕೆಲವೆಡೆ ಮದ್ಯವನ್ನೂ ನೈವೇದ್ಯಕ್ಕೆ ಇಡಲಾಗುತ್ತದೆ. ವಿಸ್ಕಿ,ಬ್ರಾಂಡಿ,ಬೀರ್ ನ್ನು ಮಾಂಸಹಾರದ ಜೊತೆ ನೈವೇದ್ಯಕ್ಕೆ ಅರ್ಪಿಸಲಾಗುತ್ತದೆ. ಇದು ಹಿಂದಿನಿಂದಲೇ  ನಡೆದುಕೊಂಡು ಬಂದ ಪದ್ದತಿ ಹೀಗಾಗಿ ನಾವೂ ಸಹ ಮುಂದುವರೆಸುತ್ತಿದ್ದೇವೆ ಎನ್ನುತ್ತಾರೆ  ಭಕ್ತರು

Related posts

Leave a Comment