ಕೊಪ್ಪಳ, ೦೨- ಜಿಲ್ಲಾ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ವತಿಯಿಂದ ಇಂದು ದಿ ೦೩ರಂದು ಗುರುವಾರ ಸಂಜೆ ೪: ೩೦ಕ್ಕೆ ಸಾಹಿತ್ಯ ಪರಿಷತ್ತು ಕಛೇರಿ, ಸಾಹಿತ್ಯ ಭವನ ಕೊಪ್ಪಳದಲ್ಲಿ ಚಿಂತನ ಚಾವಡಿ ನಮ್ಮವರೊಂದಿಗೆ ನಮ್ಮವರ ಮನದಾಳದ ಮಾತು ಕಾರ್ಯಕ್ರಮದ ಉದ್ಘಾಟನೆ ಜರುಗಲಿದೆ.
ಕಾರ್ಯಕ್ರಮವನ್ನು ಸಾಹಿತಿ ಡಾ|| ವಿ.ಬಿ. ರಡ್ಡೇರ್ ಉದ್ಘಾಟಿ ಸಲಿದ್ದು, ನಮ್ಮೊಡನೆ : ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹಾಗೂ ಯುವ ಸಾಹಿತಿ ಮೌನೆ ಶ ಬಡಿಗೇರ ಭಾಗವಹಿ ಸಲಿ ದ್ದರೆ. ಕಾರ್ಯಕ್ರಮದ ಅಧ್ಯ ಕ್ಷತೆ ಯನ್ನು ಜಿಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜ ಶೇಖರ ಅಂಗಡಿ ವಹಿಸಲಿದ್ದು.
ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಸಂತೋಷ ದೇಶಪಾಂಡೆ ಆಶಯನುಡಿ ಆಡಲಿದ್ದು, ಕೊಪ್ಪಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಗಿರೀಶ ಪಾನಘಂಟಿ ಸ್ವಾಗತಿ ಸಲಿದ್ದು, ನಿರೂಪಣೆಯನ್ನು ಕವಿತಾ ಶ್ರೀನಿವಾಸ ಹ್ಯಾಟಿ ಮಾಡಲಿದ್ದು ಸರ್ವರು ಆಗಮಿ ಸಿ ಯಶಸ್ವಿಗೊಳಿಸುವಂತೆ ಗೌರ ವ ಕಾರ್ಯದರ್ಶಿ ರಮೇಶ ತು ಪ್ಪದ ಪ್ರಕಟಣೆಯಲ್ಲಿ ಕೋರಿದ್ದಾರೆ.
ನಮ್ಮವರೊಂದಿಗೆ ನಮ್ಮವರ ಮನದಾಳದ ಮಾತು
Leave a Reply
You must be logged in to post a comment.