ನನ್ನ ಹೆಂಡತಿಯನ್ನು ಪಿಎಸ್ಐ ಸಾಹೇಬ ಓಡಿಸಿಕೊಂಡು ಹೋಗಿದ್ದಾನೆ ಹುಡುಕಿಕೊಡಿ !-ಎಸ್ಪಿಗೆ ಮೊರೆ ಹೋದ ಗಂಡ

police-love-story

ನನ್ನ ಹೆಂಡತಿಯನ್ನು ಪಿಎಸ್ಐ ಸಾಹೇಬರು ಓಡಿಸಿಕೊಂಡು ಹೋಗಿದ್ದಾನೆ ನನಗೆ ನ್ಯಾಯ ಕೊಡಿಸಿ ಎಂದು ಗಂಡನೊಬ್ಬ ಎಸ್ಪಿಯವರಿಗೆ ಮೊರೆ ಹೋದ ಘಟನೆ ಕೊಪ್ಪಳದಲ್ಲಿ ನಡೆದಿದೆ. ದೇವರ ಹಿಪ್ಪರಗಿ ಮೂಲದ ಸಲಿಂಸಾಬ ಎನ್ನುವ ವ್ಯಕ್ತಿ 2001ರಲ್ಲಿ  ಸಹರಾ ಬೇಗಂ ಎನ್ನುವವಳ ಜೊತೆ ಮದುವೆಯಾಗಿದ್ಧಾನೆ. ಮದುವೆ ಮಾಡುವಾಗ ಹೆಣ್ಣಿನ ಕಡೆಯವರು  ಗಂಡಿಗೆ ನೀನು ಮನೆ ಅಳಿಯನಾಗಬೇಕು ಎಂದು ಕಂಡಿಷನ್ ಹಾಕಿದ್ದರು ಎನ್ನಲಾಗಿದೆ. ಅದರಂತೆ ಅವನೂ ಸಹ ಜೇವರ್ಗಿಯ ಹೆಂಡತಿಯ ಮನೆಯಲ್ಲಿಯೇ ಇದ್ದಾನೆ. ಎರಡು ಗಂಡು ಮಕ್ಕಳೂ ಹುಟ್ಟಿದ್ದಾರೆ.ಸ್ವಲ್ಪ ವರ್ಷ ಸರಿಯಾಗಿದ್ದ ಸಂಸಾರ ನಂತರ ಹಳಿ ತಪ್ಪಿದೆ. ಗಂಡ ಕಿರಿ ಕಿರಿಮಾಡುತ್ತಿದ್ಧಾನೆ ಎಂದು ಆರೋಪಿಸಿ ಹೆಂಡತಿ ಸಹಾರಾ ಬೇಗಂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಆ ಜಗಳ ಬಹಳ ದಿನಗಳವರೆಗೆ ನಡೆದಿದೆ. ಜೇವರ್ಗಿ ಪೊಲೀಸ್ ಠಾಣೇಯಲ್ಲಿ ಪ್ರಕರಣ ಸಂಬಂಧ ಹಲವಾರು ಬಾರಿ ಬರುವುದು ಹೋಗುದನ್ನು ಮಾಡಿದ್ದಾಳೆ ಈ ಸಹಾರಾ ಬೇಗಂ ಅಲ್ಲಿಯೇ ಪಿಎಸ್ಐ ಸಂಗಮೇಶ ಶಿವಯೋಗಿ ಪರಿಚಯವಾಗಿದೆ. ಅದುಪ್ರೀತಿ ಪ್ರಣಯದ ತನಕವೂ ಹೋಗಿದೆ. ನಂತರ ಸಲಿಂಸಾಬನ ಹೆಂಡತಿ ತನ್ನ ತವರು ಮನೆಯನ್ನು ತೊರೆದು ಸಂಗಮೇಶ ಶಿವಯೋಗಿ ಜೊತೆಗೆ ಬಂದಿದ್ದಾಳೆ.  ಜೇವರ್ಗಿಯಿಂದ ಟ್ರಾನ್ಸ ಪರ್ ಆಗಿ ಹನುಮಸಾಗರಕ್ಕೆ ಬಂದ ಸಂಗಮೇಶ ತನ್ನ ಜೊತೆ ಅವಳನ್ನು ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. ಅಲ್ಲದೇ ಇತ್ತೀಚಿಗೆ ಅವಳ ಸೀಮಂತ ಕಾರ್ಯಕ್ರಮದ ಫೋಟೋವನ್ನು ಪೇಸ್ ಬುಕ್ ನಲ್ಲಿ ಅಪಲೋಡ್ ಸಹ ಮಾಡಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಸಲಿಂಸಾಬನ ಸ್ನೇಹಿತರು ಪೇಸ್ ಬುಕ್ ಪೋಟೋ ಬಗ್ಗೆ ಹೇಳಿದ್ಧಾರೆ. ತನ್ನಿಬ್ಬರು ಮಕ್ಕಳನ್ನು ತಾಯಿಯ ಬಳಿಯೇ ಬಿಟ್ಟು ಸಹಾರಾಬೇಗಂ ಹನುಮಸಾಗರದಲ್ಲಿಯೇ ಇದ್ದಾಳೆ ಎನ್ನಲಾಗಿದೆ. ವಿಷಯವನ್ನು ತಿಳಿದ ಗಂಡ ನನಗೆ ನ್ಯಾಯಕೊಡಿಸಿ ಎಂದು ಪೊಲಿಸ್ ವರಿಷ್ಠಾಧಿಕಾರಿಗಳ ಮೊರೆ ಹೋಗಿದ್ದಾನೆ.

ಆದರೆ ಸಹಾರ ಬೇಗಂ ಹೇಳುವುದೇ ಬೇರೆ ಈಗಾಗಲೇ ಈ ಗಂಡನಿಂದ ದೂರಾಗಿ 12 ವರ್ಷವಾಗಿದೆ. ದುಡ್ಡಿಗಾಗಿ ವಿಪರೀತ ಪೀಡಿಸಿ ಕಾಡಿಸುತ್ತಿದ್ದ. ನನಗೂ ಪಿಎಸ್ಐ ಗೂ ಯಾವುದೇ ಸಂಬಂಧವಿಲ್ಲ. ವಿನಾಕಾರಣ  ಇಷ್ಟೆಲ್ಲಾ ರಾದ್ದಾಂತ ಮಾಡುತ್ತಿದ್ದಾನೆ. ಈಗಾಗಲೇ ಸಲಿಂ ಮತ್ತೊಂದು ಮದುವೆಯಾಗಿದ್ದಾನೆ. ಮತ್ತು ನನಗೆ ತಲಾಖ್ ನೀಡಿದ್ಧಾನೆ ಎಂದಿದ್ದಾರೆ.

ಇನ್ನು ಪಿಎಸ್ಐ ಸಂಗಮೇಶ ಶಿವಯೋಗಿ ಸಹ  ಅನಾವಶ್ಯಕವಾಗಿ ಈ ಆರೋಪ ಮಾಡುತ್ತಿದ್ದಾರೆ. ನನಗೂ ಅವಳಿಗೂ ಸಂಬಂಧವಿಲ್ಲ. ದುರುದ್ದೇಶದಿಂದ ಈ ಆರೋಪ ಮಾಡಲಾಗಿದೆ. ಶೀಘ್ರವೇ ನನ್ನ ಪ್ರಮೋಷನ್ನಾಗುವುದಿದೆ ಈ ಸಂದರ್ಭದಲ್ಲಿ ಬೇಕೆಂದೆ ಈ ರೀತಿಯ ಆರೋಪ ಮಾಡಲಾಗಿದೆ ಈ ಪ್ರಕರಣದ ಸಮಗ್ರ ತನಿಖೆಯಾಗಲಿ ನಾನು ಸಿದ್ದನಿದ್ದೇನೆ ಎನ್ನುತ್ತಾರೆ.

Leave a Reply