ನಗರ ಸ್ಥಳೀಯ ಸಂಸ್ಥೆ ಚುನಾವಣೆ : ಕಾಂಗ್ರೆಸ್ ಜಯಭೇರಿ

ಕೊಪ್ಪಳ ಏ. : ಕಾರಟಗಿ, ಕನಕಗಿರಿ, ಕುಕನೂರು ಮತ್ತು ತಾವರಗೇರಾ ನಗರ ಸ್ಥಳೀಯ ಸಂಸ್ಥೆಗಳಿಗೆ ಏ. 24 ರಂದು ಜರುಗಿದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ.
ಬುಧವಾರದಂದು ಆಯಾ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಜರುಗಿದ ಮತ ಎಣಿಕೆ ನಂತರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ.  ಕಾರಟಗಿ ಪುರಸಭೆಗೆ ಸಂಬಂಧಿಸಿದಂತೆ ಒಟ್ಟು 23 ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್-12 ಸ್ಥಾನ ಗಳಿಸಿದ್ದು, ಬಿಜೆಪಿ-10 ಹಾಗೂ ಪಕ್ಷೇತರ-01 ಸ್ಥಾನ ಗಳಿಸಿದ್ದಾರೆ.  ಕನಕಗಿರಿ ಪಟ್ಟಣ ಪಂಚಾಯತಿಯ 17 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-09, ಬಿಜೆಪಿ-05 ಹಾಗೂ ಪಕ್ಷೇತರ-03 ಅಭ್ಯರ್ಥಿಗಳು ವಿಜೇತರಾಗಿದ್ದಾರೆ.  ಕುಕನೂರು ಪಟ್ಟಣ ಪಂಚಾಯತಿಯ 19 ಸದಸ್ಯ ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್-11, ಬಿಜೆಪಿ-08 ಸ್ಥಾನಗಳನ್ನು ಗಳಿಸಿವೆ.  ತಾವರಗೇರಾ ಪಟ್ಟಣ ಪಂಚಾಯತಿಯ 18 ಸದಸ್ಯ ಸ್ಥಾನಗಳ ಪೈಕಿ ಓರ್ವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದರು.  ಇಲ್ಲಿನ ಅಂತಿಮ ಫಲಿತಾಂಶ ಕಾಂಗ್ರೆಸ್-10, ಬಿಜೆಪಿ-07, ಪಕ್ಷೇತರ-01 ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.  ಒಟ್ಟಾರೆಯಾಗಿ 04 ನಗರ ಸ್ಥಳೀಯ ಸಂಸ್ಥೆಗಳ 77 ಸ್ಥಾನಗಳಿಗೆ ಜರುಗಿದ ಪ್ರಸಕ್ತ ಚುನಾವಣೆಯಲ್ಲಿ  ಕಾಂಗ್ರೆಸ್-42, ಬಿಜೆಪಿ-30 ಹಾಗೂ ಪಕ್ಷೇತರ-05 ಅಭ್ಯರ್ಥಿಗಳು ವಿಜೇತರಾಗಿದ್ದಾರೆ .

Leave a Reply