ನಗರಸಭೆ ಹೆಲ್ತ್ ಇನ್ಸ್ ಪೆಕ್ಟರ್ ಆತ್ಮಹತ್ಯೆ : ಕೈಯಲ್ಲಿ ಡೆತ್ ನೋಟ್ ಇತ್ತಾ?

koppal_suicide

ವಿಡಿಯೋದಲ್ಲಿ ಏನಿದೆ?

ನಗರಸಭೆ ಹೆಲ್ತ್ ಇನ್ಸ್ ಪೆಕ್ಟರ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.  ಕೊಪ್ಪಳ ನಗರದ ಪದಕಿ ಲೇಔಟ್ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೆಲ್ತ್ ಇನ್ಸ್‌ಪೆಕ್ಟರ್. ಮಂಜುಳಾ (26) . ಕೊಪ್ಪಳದ ನಗರಸಭೆಯಲ್ಲಿ ಹೆಲ್ತ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಳು .

ಮಂಜುಳಾ ಮೂಲತಃ ತುಮಕೂರ ಜಿಲ್ಲೆಯವರಾಗಿದ್ದು,ಕಳೆದ ಮೂರು ವರ್ಷಗಳಿಂದ ನಗರಸಭೆಯಲ್ಲಿ ಹೆಲ್ತ ಇನ್ಸಪೆಕ್ಟರ್ ಆಗಿ ಸೇವೆಸಲ್ಲಿ ವರ್ಗಾವಣೆ ಗೊಂಡಿದ್ದರು,ನಂತರ ಮೂರು ತಿಂಗಳ ಹಿಂದೇ ಪುನಃ ಇಲ್ಲಿಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸುತ್ತಿದ್ದರು

ಇನ್ನೂ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದ ಮಂಜುಳ,ಕೊಪ್ಪಳ ನಗರದ ಪದಕಿ ಲೇಔಟ್ ನಲ್ಲಿ ಮನೆ ಮಾಡಿಕೊಂಡಿದ್ದರು,ನಿತ್ಯ ಬೆಳಿಗ್ಗೆ ಎದ್ದು ಕೆಲಸಕ್ಕೆ ಹಾಜರಾಗುತ್ತಿದ್ದ ಮಂಜುಳ,ಇಂದು 11 ಗಂಟೆ ಕಳೆದ್ರು ಕೆಲಸಕ್ಕೆ ಬಾರದಿದ್ದಾಗ,ನಗರಸಭೆ ಸಿಬ್ಬಂಧಿ ಫೋನ್ ಮೂಲಕ ಸಂಪರ್ಕಿಸಿದ್ರು ಫೋನ್ ರಿಸಿವ್ ಮಾಡದಿದ್ದಾಗ ಮನೆಗೆ ಹೋಗಿ ನೋಡಿದಾಗ ಮನೆ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಸಿಬ್ಬಂಧಿ ಮನೆ ಮಾಲೀಕರಿಗೆ ವಿಷಯ ತಿಳಿಸಿದಾಗ ಬೆಟ್ ಮೇಲೆ ಮಲಗಿರುವನ್ನು ಕಂಡು ಕೂಡಲೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.ಕೊಪ್ಪಳ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮನೆ ಬಾಗಿಲು ಮುರಿದು ಮೃತ ದೇಹ ಹೊರತೆಗದಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಮಂಜುಳಾ ಕೈಯಲ್ಲಿ ಡೆತ್ ನೋಟ್ ಇತ್ತು ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ ಪೋಲಿಸರು ಅದನ್ನು ನಿರಾಕರಿಸುತ್ತಿದ್ದಾರೆ. ಯಾವುದೇ ರೀತಿಯ ಡೆತ್ ನೋಟ್ ಸಿಕ್ಕಿಲ್ಲ ಎನ್ನುತ್ತಿದ್ಧಾರೆ. ಒಟ್ಟಿನಲ್ಲಿ ಮಂಜುಳ ಸಾವು ನಿಗೂಡವಾಗಿದ್ದು,ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡರು ಎಂದು ಪೊಲೀಸರು ತನಿಖೆ ಮೂಲಕವೆ ಬಹಿರಂಗ ಪಡಿಸಬೇಕಿದೆ. ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply