ನಗರದಲ್ಲಿ ಶಾಸಕರಿಂದ ರೂ.೧.೨೦ ಕೋಟಿಯ ಕಾಮಗಾರಿಗಳಿಗೆ ಭೂಮಿಪೂಜೆ

koppal_mla_hitnal
ಕೊಪ್ಪಳ:೧೦, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಹೆಚ್.ಕೆ.ಡಿ.ಬಿ ಅನುದಾನದಡಿಯಲ್ಲಿ ನಗರದ ವಿವಿಧ ವಾರ್ಡಗಳಲ್ಲಿ ಸಿಸಿ ರಸ್ತೆ, ಶಾಲಾ ಕೊಠಡಿ, ಅಂಗನವಾಡಿ ಕೇಂದ್ರ, ಚರಂಡಿ ಕಾಮಗಾರಿಗಳಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದ ಜನಪ್ರಿಯ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ತೀವೃಗತಿಯಲ್ಲಿ ಬೆಳೆಯುತ್ತಿರುವ ಕೊಪ್ಪಳ ನಗರಕ್ಕೆ ಹೆಚ್ಚು ಅನುದಾನವನ್ನು ನೀಡಿ ನಗರದ ಸೌಂದರ್ಯಿಕರಣಕ್ಕೆ ಆಧ್ಯತೆ ನೀಡಲಾಗುವುದು. ಕೊಳಚೆ ಪ್ರದೇಶಗಳಿಗೆ ಒಳಪಟ್ಟಿರುವ ವಾರ್ಡಗಳ ಸರ್ವಾಂಗೀಣ ಅಭಿವೃದ್ಧಿ ಕೈಗೊಂಡು ಪ್ರತಿವಾರ್ಡಗಳನ್ನು ಮಾದರಿ ವಾರ್ಡಗಳನ್ನಾಗಿ ಮಾಡಲಾಗುವುದು. ನಗರದ ಜನರ ದೈನಂದಿಕ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡಿ ನಗರದ ಸಭೆ ಹಾಗೂ ಶಾಸಕರ ಅನುದಾನದಲ್ಲಿ ಕೊಪ್ಪಳ ನಗರದ ಜನತೆಗೆ ಶ್ರೇಷ್ಠ ಉದ್ಯಾನವನವನ್ನು ನಿರ್ಮಾಣ ಮಾಡುವೇನೆಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಮಹೇಂದ್ರ ಚೋಪ್ರಾ, ಸದಸ್ಯರುಗಳಾದ ಅಮ್ಜದ್ ಪಟೇಲ, ಮೌಲಾಹುಸ್ಸೇನ ಜಮೇದಾರ, ರಾಮಣ್ಣ ಹದ್ದಿನ, ಅನಿಕೇತ ಅಗಡಿ, ಪ್ರಾಣೇಶ ಮಾದಿನೂರು, ಸಲೀಂ ಸಾಬ್, ಖಾಜಾವಲಿ ಬನ್ನಿಕೊಪ್ಪ, ಪಕ್ಷದ ಮುಖಂಡರಾದ ಬಾಷುಸಾಬ್ ಕತೀಬ್, ಸಾಬೀರ ಹುಸ್ಸೇನಿ, ಅಪ್ಸರಾಸಾಬ್‌ಅತ್ತಾರ, ಅರ‍್ಜುನಸಾ ಖಾಟ್ವಾ, ನಾಗರಾಜ ಬಳ್ಳಾರಿ, ವೀರಣ್ಣ ಸಂಡೂರು, ಅಜ್ಜಪ್ಪ ಸ್ವಾಮಿ, ಶಿವಾನಂದ ಹೂದ್ಲೂರು, ರಾಮಣ್ಣ ಮುಲಿಮನಿ, ಅಕ್ತರ ಫಾರೂಖಿ, ನವಾಜ್ ಹುಸ್ಸೇನಿ, ರೇಹಮತ್ ಹಸ್ಸೇನಿ, ಆರೂನ್ ಖಾನ್, ನಗರಸಭೆ ಆಯುಕ್ತರು ಕೊಳಚೆ ನಿರ್ಮೂಲನ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು, ಗುತ್ತಿಗೆದಾರರು, ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.

Leave a Reply