ನಕಲಿ ಅಂಕಪಟ್ಟಿ ಹೊಂದಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲುಅನುಮತಿ ಎಸ್.ಎಫ್.ಐ ಪ್ರತಿಭಟನೆ

sfi_protestಇತ್ತಿಚಿಗೆ ಕೊಪ್ಪಳ ಬಳ್ಳಾರಿ ಜಿಲ್ಲೆಗಳಲ್ಲಿ ಪಿ.ಯು.ಸಿ ನಕಲಿ ಅಂಕಪಟ್ಟಿಗಳ ಮೇಲೆ ಪದವಿ ದಾಖಲಾತಿ ಮಾಡಸಿ ವಿದ್ಯಾಭ್ಯಾಸ ಮಾಡುತ್ತಿರುವವರನ್ನು ವಿ.ವಿ.ಯಏಕಸಮಿತಿಯುಅಂಕಪಟ್ಟಿಯನ್ನು ಪರೀಶಿಲನೆ ಮಾಡಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿತ್ತು.ಅದರಂತೆ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ನಕಲಿ ಅಂಕಪಟ್ಟಿಆಧಾರದಅಡಿಯಲ್ಲಿದಾಖಲಾತಿ ಮಾಡಿರುವುವರನ್ನುರದ್ದು ಮಾಡಬೇಕೆಂದುತೀರ್ಮಾನಿಸಲಾಗಿತ್ತು.ಈ ತೀರ್ಮಾನದಂತೆರದ್ದು ಮಾಡಲಾಯಿತು ನಂತರ ವಿವಿಧ ರಾಜ್ಯಗಳ ಹೆಸರಿನಲ್ಲಿ (ಪಿ.ಯು.ಸಿ) ಅಂಕಪಟ್ಟಿಗಳನ್ನು ನಕಲಿ/ಅಸಲಿ ಎಂದು ತಿಳಿದುಕೊಳ್ಳಲು ಎಸ್.ಎಫ್.ಐ ಒತ್ತಾಯಿಸಿತ್ತು. ಈ ಒತ್ತಾಯಕ್ಕೆಮಣಿದುಮಹಾರಾಷ್ಟ್ರರಾಜ್ಯಕ್ಕೆ ಹೋದ ಸಂದರ್ಭದಲ್ಲಿ ಮಹರಾಷ್ಟ್ರಆಫ್ ಬೋರ್ಡ ಹೊಂದಿರುವ ಪಿ.ಯುಅಂಕಪಟ್ಟಿ ನಕಲಿ ಎಂದು ವಿ.ವಿ ಘೋಷಿಸಿತು,
ಇದೇ ತಿಂಗಳ ೧೧.೧೧.೨೦೧೬ರಂದು ವಿವಿ ಕುಲಪತಿಯು ವಿದ್ಯಾರ್ಥಿ ಸಂಘಟನೆಗಳ ಸಭೆಕರೆದು ಚರ್ಚಿಸಿ ಕೊನೆಗೆ ನಕಲಿ ಅಂಕಪಟ್ಟಿ ಹೊಂದಿದ ವಿದ್ಯಾರ್ಥಿಗಳಿಗೆ ದಾಖಲಾತಿರದ್ದು ಪಡಿಸಿ ಪರೀಕ್ಷೆ ಬರೆಯಲುಅನುಮತಿಇಲ್ಲಎಂದು ತಿರ್ಮಾನಿಸಿ ವಿವಿ.ಯ ಕುಲಪತಿಗಳು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.ಆದರೆ ಈಗ ಅದೇಕುಲಪತಿಗಳು ತಾವುತೆಗೆದುಕೊಂಡತೀರ್ಮಾನವನ್ನುತಾವೇ ಉಲ್ಲಂಘಿಸಿ ಪರೀಕ್ಷೆ ಬರೆಯಲುಅನುಮತಿ ನೀಡಿರುವುದನ್ನುಎಸ್.ಎಫ್.ಐ ಸಂಘಟನೆ ಖಂಡಿಸುತ್ತದೆ. ಕುಲಪತಿಗಳು ರಾಜಕಾರಣಿಗಳ ಒತ್ತಡಕ್ಕೆ ಮಣಿದರೋ?ಅಥವಾ ಹಣದಾಹಕ್ಕೆಬಲಿಯಾದರೊ?ನಕಲಿ ಅಂತಘೋಷಣೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲುಅವಕಾಶ ಕೊಟ್ಟಿದ್ದೇಕೆ?ಈ ಬಗ್ಗೆ ರಾಜ್ಯದಉನ್ನತ ಶಿಕ್ಷಣ ಸಚಿವರು ಮದ್ಯೆ ಪ್ರವೇಶಿಸಿ ಎಸ್.ಎಫ್.ಐ ಸಂಘಟನೆ ಮತ್ತು ವಿ.ವಿ ಕುಲಪತಿಗಳು ಹಾಗೂ ಪ್ರಾಚಾರ್ಯರ ಸೇರಿ ಸಭೆಕರೆದುತೀರ್ಮಾನಿಸಬೇಕು
ರಾಜ್ಯದಲ್ಲಿರುವ ನಕಲಿ ಅಂಕಪಟ್ಟಿಗಳನ್ನು ತಡೆಗಟ್ಟಲುರಾಜ್ಯಸರ್ಕಾರ ಹೈಕೋರ್ಟ ನ್ಯಾಯಾಧೀಶರ ಮುಖಾಂತರತನಿಖೆಗೆ ಒಳಪಡಿಸಬೇಕೆಂದು ಎಸ್.ಎಫ್.ಐಕೊಪ್ಪಳ ಜಿಲ್ಲಾಸಮಿತಿಯು ಪ್ರತಿಭಟನೆ ಮುಖಾಂತರಒತ್ತಾಯಿಸಿದೆ. ಪ್ರತಿಭಟನೆಯಲ್ಲಿ ಅಮರೇಶಕಡಗದ ಜಿಲ್ಲಾಧ್ಯಕ್ಷರು, ಹನುಮಂತ ಮುಕ್ಕುಂಪಿ, ಸಿದ್ದರಾಮ, ನಂದೀಶ್, ನಾಗಲಿಂಗ, ರಾಜು, ಅಮರೇಶ, ಶರಣಪ್ಪ, ಕರಿಯಪ್ಪ, ಶಿವು, ಹನುಮಂತ , ಮುಸ್ತಾಫ್, ಕಳಕಪ್ಪ, ಪ್ರಕಾಶ್, ಅಣ್ಣಪ್ಪ ಮತ್ತಿತರರುಇಂದು ಸಂಜೆಗಂಜ್ ಸರ್ಕಲ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Please follow and like us:
error