ನನ್ನನ್ನು ದೇಶದ್ರೋಹಿ ಎನ್ನುವ ಇವರೇನು ದೇಶಭಕ್ತಿಯನ್ನು ಗುತ್ತಿಗೆ ಹಿಡಿದಿದ್ದಾರಾ? – ಡಾ.ವಿ.ಬಿ.ರಡ್ಡೇರ್

ದೇಶಭಕ್ತಿಯನ್ನು ಪ್ರಶ್ನೆ ಮಾಡಲು ಇವರ‍್ಯಾರು ? ಇವರೇನು ದೇಶಭಕ್ತಿಯನ್ನು ಗುತ್ತಿಗೆ ಹಿಡಿದಿದ್ದಾರಾ? ಎಬಿವಿಪಿ ಕಾರ್ಯಕರ್ತರಿಗೆ ಪ್ರಶ್ನೆ.
ನಾನು ಕಲ್ಬುರ್ಗಿಯ ಶಿಷ್ಯ. ನಾವೆಲ್ಲಾ ಕಲಿಸುವುದು ದೇಶವನ್ನು ಪ್ರೀತಿಸಿ ಎನ್ನುವುದು. ದೇಶ ಕಾಯಲಿಕ್ಕೆ. ಇವರಿಗೆ ಗುತ್ತಿಗೆ ಕೊಟ್ಟಿಲ್ಲ . ನನ್ನ ದೇಶಭಕ್ತಿಯನ್ನು ಪ್ರಶ್ನೆ ಮಾಡಲು ಇವನ್ಯಾರು ಇದು ಬರಹಗಾರ ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ವಿ.ಬಿ.ರಡ್ಡೇರ್ ರವರ ಆಕ್ರೋಶಭರಿತ ಪ್ರಶ್ನೆ.

ದೇಶಭಕ್ತಿಯನ್ನು ಪ್ರಶ್ನೆ ಮಾಡಲು ಇವರ‍್ಯಾರು ? ಇವರೇನು ದೇಶಭಕ್ತಿಯನ್ನು ಗುತ್ತಿಗೆ ಹಿಡಿದಿದ್ದಾರಾ?
ನಾನು ಕಲ್ಬುರ್ಗಿಯ ಶಿಷ್ಯ. ನಾವೆಲ್ಲಾ ಕಲಿಸುವುದು ದೇಶವನ್ನು ಪ್ರೀತಿಸಿ ಎನ್ನುವುದು. ದೇಶ ಕಾಯಲಿಕ್ಕೆ. ಇವರಿಗೆ ಗುತ್ತಿಗೆ ಕೊಟ್ಟಿಲ್ಲ . ನನ್ನ ದೇಶಭಕ್ತಿಯನ್ನು ಪ್ರಶ್ನೆ ಮಾಡಲು ಇವನ್ಯಾರು ಇದು ಎಬಿವಿಪಿ ಕಾರ್ಯಕರ್ತರಿಗೆ ಪ್ರಶ್ನೆ ಬರಹಗಾರ ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ವಿ.ಬಿ.ರಡ್ಡೇರ್ ರವರ ಆಕ್ರೋಶಭರಿತ ಪ್ರಶ್ನೆ.

dr-vb-radder ಇತ್ತೀಚಿಗೆ ಕೊಪ್ಪಳದ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಎಬಿವಿಪಿ ಪ್ರತಿಭಟನೆಯ ಸಂದರ್ಭದಲ್ಲಿ ಇವರನ್ನು ಎಬಿವಿಪಿ ಕಾರ್ಯಕರ್ತರು ದೇಶದ್ರೋಹಿ ಎಂದು ಕೂಗಿದ್ದರು. ವಿದ್ಯಾರ್ಥಿನಿಯರನ್ನು ಕಾಲೇಜು ಸಮವಸ್ತ್ರದ ಮೇಲೆಯೇ, ಕಾಲೇಜಿನ ಸಮಯದಲ್ಲಿ ವಿವಿಧ ಸಂಘಟನೆಯವರು ಪ್ರತಿಭಟನೆಗಳಿಗೆ ಕರೆದೊಯ್ಯುತ್ತಿರುವುದರಿಂದ ಏನಾದರೂ ಹೆಚ್ಚು ಕಡಿಮೆಯಾದರೆ ಕಾಲೇಜಿನವರೇ ಜವಾಬ್ದಾರಾಗುತ್ತಾರೆ ಹೀಗಾಗಿ ಈ ರೀತಿ ಭಾಗವಹಿಸಬಾರದು ಪ್ರಾಂಶುಪಾಲರು ಎಂದು ಆದೇಶ ನೀಡಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಡಾ.ವಿ.ಬಿ.ರಡ್ಡೇರ್ ರನ್ನು ದೇಶದ್ರೋಹಿ, ದೇಶವಿರೋಧಿ ನೀನು ಎಂದು ಘೋಷಣೆ ಕೂಗಿದ್ದರು. ಈ ಪ್ರತಿಭಟನೆಯಲ್ಲಿ ಅದೇ ಕಾಲೇಜಿನ ಉಪನ್ಯಾಸಕರೊಬ್ಬರ ಕೈವಾಡವೂ ಇತ್ತು ಎಂದು ಕೇಳಿಬಂದಿತ್ತು. ಅಲ್ಲದೇ ಆ ಉಪನ್ಯಾಸಕನ ಮಗನೇ ಈ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಎನ್ನಲಾಗಿದೆ. ತಮ್ಮ ಮಾತು ಕೇಳಿಲ್ಲ,ಒಪ್ಪಿಲ್ಲ ಎನ್ನುವ ಕಾರಣಕ್ಕೆ ಯಾರನ್ನು ಬೇಕಾದರೂ ದೇಶದ್ರೋಹಿ ಎಂದು ಹೇಳುತ್ತಿರುವ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.

Please follow and like us:
error