ದುಷ್ಟಚಟಗಳಿಂದ ದೂರವಿದ್ದು ಆರೋಗ್ಯವಂತ ಯುವಕರಾಗಲು ಕರೆ – ಚಿದಾನಂದ ಸ್ವಾಮಿಜಿ

 ಕೊಪ್ಪಳ : ಯುವಕರು ದುಷ್ಟಚಟಗಳಿಂದ ದೂರವಿದ್ದು ಒಳ್ಳೆ ಆರೋಗ್ಯವಂತ ಯುವಕರಾಗಿ ಕಲೆ, ಸಂಸ್ಕೃತಿ, ಕ್ರಿಡೆ ನಮ್ಮ ಪರಂಪರೆ ಉಳಿಸಿ ಬೆಳಸಿ ಯುವಕ ಸಂಘದ ನಾಡನ್ನು ಕಟ್ಟಲು ಮುಂದಾಗುವಂತೆ ಹಿರೇಸಿಂದೋಗಿ ಕಪ್ಪತ ಮಟ್ಟದ ಶ್ರೀ.ಮ.ನಿ.ಪ್ರ.ಸ್ವ.ಜ. ಚಿದಾನಂದ ಮಹಾಸ್ವಾಮಿಜಿ ಕರೆ ನಿಡಿದರು. ಅವರು ಕೊಪ್ಪಳ ತಾಲೂಕಿನ ಗುಡ್ಲಾನೂರಿನಲ್ಲಿ ಶ್ರೀ ಗೊಣಿಬಸವೇಶ್ವರ ಯುವಕ ಸಂಘ ಉದ್ಘಾಟಿಸಿ ಮಾತನಾಡಿದರು. ನಂತರ ನಿವೃತ್ತ ಶಿಕ್ಷಕ ಚಂದ್ರಾಮಪ್ಪ ಕಣಕಾಲ್ ಮಾತನಾಡಿ ಆರೋಗ್ಯದಿಂದ ಇರಲು ಯೋಗ, ಧ್ಯಾನ ಅವಶ್ಯ ಎಂದರು. ಜಿಲ್ಲಾ ಪಂಚಾಯತಿ ಸದಸ್ಯ ಗವಿಸಿದ್ದಪ್ಪ ಸಂಗಣ್ಣ ಕರಡಿ ಜ್ಯೋತಿ ಬೆಳಗಿಸಿದರು. ಮುಖ್ಯ ಅತಿಥಿಗಳಾಗಿ ಕೆ.ಎಮ್.ಎಪ್ ನಿರ್ದೆಶಕ ವೆಂಕನಗೌಡ ಹಿರೇಗೌಡ್ರ, ವಿರುಪಾಕ್ಷಗೌಡ ಪೊಲೀಸಪಾಟೀಲ, ತಾ.ಪಂ ಮಾಜಿ ಸದಸ್ಯ ಮಹಾಂತೇಶ ಪಾಟೀಲ, ಮಾತನಾಡಿದರು. maha ಗ್ರಾ.ಪಂ ಉಪಾಧ್ಯಕ್ಷ, ಬಸವರಾಜ ಅಂಗಡಿ, ದೊಡ್ಡಬಸಪ್ಪ ಉಳ್ಳಾಗಡ್ಡಿ, ಗ್ರಾ.ಪಂ ಸದಸ್ಯರಾದ ಕೊಟ್ರಯ್ಯ ಹಿರೇಮಠ, ಭರಮಪ್ಪ ಹುರಿಜೋಳ, ಲಕ್ಷ್ಮಪ್ಪ ಕೂಚಿ, ಗ್ರಾಮದ ಹಿರಿಯರಾದ ಮಲ್ಲಣ್ಣ ಗುಗ್ರಿ, ಶಿವಪ್ಪ ಉಳ್ಳಾಗಡ್ಡಿ, ಮಲ್ಲಪ್ಪ ಮಹಾಂತಪ್ಪನವರು, ಸಂಘದ ಅಧ್ಯಕ್ಷ ಪ್ರಕಾಶ ಉಳ್ಳಗಡ್ಡಿ, ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಜಗದಯ್ಯ ಸಾಲಿಮಠ, ರಾಕೇಶ ಕಂಬ್ಳೆಕರ, ಜಿಲ್ಲಾ ಯುವ ಪ್ರಶಸ್ತಿ ವಿಜೇತೆ ಲಲಿತಮ್ಮ ಹಿರೇಮಠ ಸೇರಿದಂತೆ ಜಾನಪದ ಕಲಾವಿದರಿಗೆ ಸನ್ಮಾನಿಸಲಾಯಿತು. ಜಾನಪದ ಗೀಗಿ ಪದ, ಲಾವಣಿಪದ, ಕಾರ್ಯಕ್ರಮಗಳು ನಡೆದವು.

Please follow and like us:
error