ದಲಿತ ಸಂಘರ್ಷ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

dss_koppal

ಕೊಪ್ಪಳ : ನಗರದ ಪ್ರವಾಸಿ ಮಂದಿರದಲ್ಲಿ ನಡೆದ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಸಭೆಯಲ್ಲಿ ಗುಲಬುರ್ಗಾ ವಿಭಾಗೀಯ ಸಂಯೋಜಕರಾದ ದೇವಪ್ಪ ದೇವರಮನಿ ಮತ್ತು ರಾಜ್ಯ ಸಮಿತಿಯ ಸಂಯೋಕರಾದ ವಿ ನಾಗರಾಜ ಇವರ ಅಧ್ಯಕ್ಷತೆಯಲ್ಲಿ ದಲಿತ ಸಂಘರ್ಷ ಸಮಿತಿಯ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ನೂತನ ಪದಾಧಿಕಾರಿಗಳಾಗಿ ಜಿಲ್ಲಾ ಸಂಯೋಜಕರಾಗಿ ಕೆ.ಎಸ್ ಮೈಲಾರಪ್ಪ, ಜಿಲ್ಲಾ ಸಂಘಟನಾ ಸಂಯೋಜಕರಾಗಿ ಕಂಠೆಪ್ಪ ಹಣವಾಳ, ಮೂಕಪ್ಪ ಎನ್. ಮೇಸ್ತ್ರೀ, ಖಜಾಂಚಿಯಾಗಿ ಈರಪ್ಪ ಪೂಜಾರ, ಮಹಿಳಾ ಒಕ್ಕೂಟದ ಜಿಲ್ಲಾ ಸಂಯೋಜಕರಾಗಿ ರಮಾದೇವಿ, ಕಾರ್ಮಿಕ ಒಕ್ಕೂಟದ ಸಂಯೋಜಕರಾಗಿ ರವಿ ದುರಗಪ್ಪ ಬಿಸರಳ್ಳಿ, ರಮೇಶ ಎಚ್ ಯಲ್ಲನ್ನವರ, ಜಿಲ್ಲಾ ಸದಸ್ಯರುಗಳಾಗಿ ವಿರುಪಣ್ಣ ಸಿಂಗಾಪೂರ, ಹನುಮಗೌಡ ಪೋಲಿಸಪಾಟೀಲ್, ಸಂಜೀವಪ್ಪ ಎಸ್ ಕಡೇಮನಿ ಇವರುಗಳನ್ನು ಆಯ್ಕೆ ಮಾಡಲಾಯಿತು ಎಂದು ವಿಬಾಗೀಯ ಸಂಯೋಜಕರಾದ ದೇವಪ್ಪ ದೇವರಮನಿತಿಳಿಸಿದ್ದಾರೆ.

Leave a Reply