ದಲಿತರು ಬಡವರು ಶಿಕ್ಷಣದಿಂದ ವಂಚಿತರಾಗಬಾರದು – ಕಣ್ವಮಠದ ಹುಣಸಿಹೋಳಿ ವಿದ್ಯಾವಾಧಿತೀರ್ಥ.

ಕೊಪ್ಪಳ, ೨೧- ದಲಿತರು ಹಾಗೂ ಬಡವರು ಶಿಕ್ಷಣದಿಂದ ವಂಚಿತರಾಗಬಾರದು, ಶಿಕ್ಷಣ ದಿಂದ ಮಾತ್ರ ಸಮಾನತೆ ಹಾಗೂ ಅಭಿವೃದ್ಧಿ ಸಾಧ್ಯ ಎಂದು ಕಣ್ವಮಠದ ಹುಣಸಿಹೋಳಿ ಶ್ರೀ ವಿದ್ಯಾವಾಧಿತೀರ್ಥ ಶ್ರೀಪಾದಂಗಳು ಹೇಳಿದರು. ಅವರು ಗುರುವಾರ ದಂದು ನಗರದ ವಡ್ಡರ ಓಣಿತಲ್ಲಿ ಬಡಮಕ್ಕಳಿಗೆ ಉಚಿತ ನೋಟ ಬುಕ್ಕ್ ವಿತರಿಸಿ ಮಾತನಾಡುತ್ತಿದ್ದರು. ಮನುಷ್ಯರೇಲ್ಲರು ಸಮಾನರು ನಮ್ಮ ಕೆಲಸಗಳಷ್ಟೆ ಬೆರೆ-ಬೆರೆ ಮೇಲು ಕಿಳು ಎಂಬ ಬೇದ ಮರೆತು ಹಿಂದುಗಳೆಲ್ಲ ಒಂದಾಗಬೇಕು. ಪ್ರತಿಯೊಂದು ಮಗು ಉತ್ತಮ ಶಿಕ್ಷಣ2 ಪಡೆದಾಗ ಮಾತ್ರ ಜಾತಿ-ಧರ್ಮ ಬೇದ ಅಳೆಯಲು ಸಾಧ್ಯ ಎಂದರು. ಸಮಾಜದ ಶ್ರೀಮಂತರು ಬಡ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕು ಅಂದಾಗ ಮಾತ್ರ ಬಡವ ಶ್ರೀಮಂತ -ಮೇಲು ಕೀಳು ಎಂಬ ಭಾವನೆ ಕಡಿಮೆ ಯಾಗುತ್ತದೆ ಎಂದು ಹೇಳಿದರು.
ಕೊಪ್ಪಳದ ವಡ್ಡರ ಓಣಿ ಸೇರಿದಂತೆ ಇತರಡೆ ೫೦೦ ಮಕ್ಕಳಿಗೆ ಉಚಿತ ನೋಟಬುಕ್ಕಗಳನ್ನು ಶ್ರೀಗಳು ವಿತರಿಸಿದರು. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಭೀಮಸೇನ ಗುಡಿ, ವಡ್ಡರ ಓಣಿ ಮುಖಂಡ ರಾಮಣ್ಣ ಕಟ್ಟಿಮನಿ, ಸಂಜೀವ ಮೂರ್ತಿ ದೇಶಪಾಂಡೆ, ಬಸವರಾಜ ಶಿರಗುಂಪ್ಪಿಶೆಟ್ರ, ಪರಶುರಾಮ ಮ್ಯಾಳಿ ಹುಲಗಪ್ಪ ಕಟ್ಟಿಮನಿ,ಸಂತೋಷ ದೇಶಪಾಂಡೆ ಇತರರು ಇದ್ದರು.

Please follow and like us:
error