ತುಂತುರು ಹನಿಗವನ ಸಂಕಲನ ಬಿಡುಗಡೆ

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ೨೦೧೬ ರಿಂದ ೨೦೧೯ರವರೆಗಿನ ಕಾರ್ಯಚಟುವಟಿಕೆಗಳ ಉದ್ಘಾಟನೆ ಹಾಗೂ ೧೦೧ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಮತ್ತು ಪದಾಧಿಕಾರಿಗಳ ಪದಗ್ರಹಣ ಹಾಗೂ ಯುವಕವಿ ಮಹಿಬೂಬ ಮುಲ್ಲಾರವರ ತುಂತುರು ಹನಿಗವನ ಸಂಕಲನ ಬಿಡುಗಡೆ ಸಮಾರಂಭವು ಕುಷ್ಟಗಿಯ ಶ್ರೀ mk-mulla-kustagiಜಗದ್ಗುರು ರೇಣುಕಾಚಾರ್ಯ ಮಂಗಲ ಭವನದಲ್ಲಿ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಹಿರಿಯ ಸಾಹಿತಿಗಳಾದ ಡಾ.ವಿ.ಬಿ.ರಡ್ಡೇರ ಅವರು ಮಾತನಾಡುತ್ತ ಕನ್ನಡ ಸಾಹಿತ್ಯವು ಪ್ರಾಚೀನ ಕಾಲದಿಂದ ವಿಶ್ವ ಸಾಹಿತ್ಯಕ್ಕೆ ಮಹತ್ವದ ಮೇರು ಕೃತಿಗಳನ್ನು ನೀಡಿದ ಭಾಷೆಯಾಗಿದ್ದು, ಕನ್ನಡ ಮಾಧ್ಯಮ ಶಿಕ್ಷಣವನ್ನು ಪ್ರೋತ್ಸಾಹಿಸಬೇಕಾದ ಅವಶ್ಯಕತೆ ಬಹಳವಿದ್ದು ಭಾಷೆಯ ಉಳಿವಿಗೆ ಶ್ರಮಿಸೋಣ ಎಂದು ಶುಭ ಕೋರಿದರು.
ದತ್ತಿ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಹಾಗೂ ಯುವಕವಿ ಮಹಿಬೂಬ ಮುಲ್ಲಾರವರ ’ತುಂತುರು’ ಮೊದಲ ಹನಿಗವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದ ಮಾಜಿ ಸಚಿವರಾದ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು ನಾಡು ನುಡಿಯ ಏಳಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ ಅಪಾರವಾಗಿದ್ದು, ಸಾಹಿತಿಗಳು ಸಂಘಟಕರು ನಿರಂತರವಾಗಿ ಕನ್ನಡ ಪರ ಕಾರ್ಯಕ್ರಮಗಳನ್ನು ಏರ್ಪಡಿಸಿ ಯುವ ಸಾಹಿತಿಗಳಿಗೆ ಪ್ರೋತ್ಸಾಹಿಸಿ ಅವರಿಂದ ಉತ್ತಮ ಕೃತಿಗಳು ಪ್ರಕಟವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ, ಪುರಸಭೆ ಅಧ್ಯಕ್ಷರಾದ ಕಲ್ಲೇಶ ತಾಳದ, ಅಹ್ಮದ ಹುಸೇನ, ಹ.ಯ.ಈಟಿಯವರ, ಮುಖೇಶ ನಿಲೋಗಲ್ಲ, ರವೀಂದ್ರ ಬಾಕಳೆ, ಬಸವರಡ್ಡಿ ಆಡೂರ, ಶರಣಪ್ಪ ವಡಿಗೇರಿ, ಹನುಮೇಶ ಗುಮಗೇರಿ, ಶ್ರೀನಿವಾಸ ಜಹಗೀರದಾರ, ಶ್ರೀಮತಿ ಮಾಲತಿ ನಾಯಕ, ಬಸವರಾಜೇಶ್ವರಿ, ಪರಸಪ್ಪ ಪಂಚಮ, ಬಾಳಪ್ಪ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷರಾದ ರಾಜಶೇಖರ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾರಂಭದಲ್ಲಿ ಪ್ರಕಾಶ ಬೆದವಟ್ಟಿ ಸ್ವಾಗತಿಸಿದರು, ತಾಲೂಕ ಕಸಾಪ ಅಧ್ಯಕ್ಷರಾದ ನಟರಾಜ ಸೋನಾರ ಅವರು ಆಶಯ ನುಡಿಗಳನ್ನಾಡಿದರು, ರವೀಂದ್ರ ಬಾಕಳೆ ಪ್ರಸ್ತಾವಿಕವಾಗಿ ಮಾತನಾಡಿದರು ಕುಮಾರಸ್ವಾಮಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರೆ ಕೊನೆಯಲ್ಲಿ ಶರಣಪ್ಪ ಲೈನದ ವಂದಿಸಿದರು.

Please follow and like us:
error

Related posts

Leave a Comment