You are here
Home > Koppal News-1 > ತುಂಗಭದ್ರಾ ಯೋಜನಾ ಕ್ಷೇತ್ರದಲ್ಲಿ ಹಿಂಗಾರು ಹಂಗಾಮಿಗೆ ಬಿತ್ತನೆ ಬೇಡ

ತುಂಗಭದ್ರಾ ಯೋಜನಾ ಕ್ಷೇತ್ರದಲ್ಲಿ ಹಿಂಗಾರು ಹಂಗಾಮಿಗೆ ಬಿತ್ತನೆ ಬೇಡ

: ತುಂಗಭದ್ರಾ ಯೋಜನಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಿಂಗಾರು ಹಂಗಾಮಿಗೆ ರೈತರು ಬಿತ್ತನೆ ಮಾಡಬಾರದು ಎಂದು ಕೊಪ್ಪಳ ಕೃಷಿ ಇಲಾಖೆ ಮನವಿ ಮಾಡಿದೆ.
ತುಂಗಭದ್ರಾ ಜಲಾಶಯದಲ್ಲಿ ಪ್ರಸಕ್ತ ನೀರು ಸಂಗ್ರಹಣೆ ಕಡಿಮೆ ಇದ್ದು, ಸದ್ಯ ಸಂಗ್ರಹವಿರುವ ನೀರನ್ನು ಕುಡಿಯುವ ನೀರಿಗಾಗಿ ಮಾತ್ರ ಕಾಯ್ದಿರಿಸಲಾಗಿದೆ. ಮುಖ್ಯ ಕಾಲುವೆಗೆ ಪ್ರಸಕ್ತ ಹಿಂಗಾರು ಹಂಗಾಮಿಗಾಗಿ ಯಾವುದೇ ಕಾರಣಕ್ಕೂ ನೀರು ಒದಗಿಸಲಾಗುವುದಿಲ್ಲ ಎಂಬುದಾಗಿ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಈಗಾಗಲೆ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತುಂಗಭದ್ರಾ ಯೋಜನಾ ಕ್ಷೇತ್ರದಲ್ಲಿ ರೈತರು ಹಿಂಗಾರು ಹಂಗಾಮಿಗೆ ಬಿತ್ತನೆ ಮಾಡಬಾರದು ಎಂದು ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.

Leave a Reply

Top