You are here
Home > Koppal News-1 > ತುಂಗಭದ್ರಾ ಜಲಾಶಯವನ್ನು ಖಾಸಗೀಕರಣ ಮಾಡುವ ಹುನ್ನಾರ : ಭಾರಧ್ವಾಜ್

ತುಂಗಭದ್ರಾ ಜಲಾಶಯವನ್ನು ಖಾಸಗೀಕರಣ ಮಾಡುವ ಹುನ್ನಾರ : ಭಾರಧ್ವಾಜ್

ಹೂಳು ತೆಗೆಯುವುದು ಅಸಾಧ್ಯ : ಸರಕಾರದ ಅಧಿಕೃತ ಘೋಷಣೆ
tb-dam

ತುಂಗಭದ್ರಾ ಜಲಾಶಯ ರೈತರ ಆಸ್ತಿಯಾಗಿದ್ದು, ಸರಕಾರ ರೈತರನ್ನು ಕಡೆಗಾಣಿಸಿ ಜಲಾಶಯದಲ್ಲಿ ಹೂಳೆತ್ತುವುದು ಅಸಾಧ್ಯವೆಂದು ಘೋಷಣೆ ಮಾಡಿರುವುದು ಕರ್ನಾಟಕದ ಮೂರು ಜಿಲ್ಲೆಗಳ ಮತ್ತು ಆಂದ್ರದ ಎರಡು ಜಿಲ್ಲೆಗಳಿಗೆ ಮಾಡಿದ ದ್ರೋಹ ಮತ್ತು ಪ್ರವಾಹ ಹರಿವು ಕಾಲುವೆ ನೆಪದಲ್ಲಿ ಜಲಾಶಯವನ್ನು ಖಾಸಗೀಕರಣ ಮಾಡುವ ಹುನ್ನಾರ ಅಡಗಿದೆ ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರಕಾರ ಕೂಡಲೇ ಕರ್ನಾಟಕದ ಮೂರು ಜಿಲ್ಲೆಗಳ ರೈತ ಮುಖಂಡರ ಸಭೆ ಕರೆದು ಹೂಳೆತ್ತುವ ಬಗ್ಗೆ ಚರ್ಚಿಸಬೇಕು, ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ರೈತರನ್ನೊಳಗೊಂಡ ಸಮಿತಿಯಿಂದ ಹೊಳೆತ್ತುವ ಕಾರ್ಯ ನಡೆಸಬೇಕು.

ಆಂದ್ರ ಸರಕಾರ ಮತ್ತು ಕರ್ನಾಟಕ ಸರ್ಕಾರಗಳು ಕಳೆದ ೫೬ ವರ್ಷಗಳಿಂದ ರೈತರಿಂದ ಸಾವಿರಾರು ಕೋಟಿ ನೀರಿನ ತೆರಿಗೆ ಸಂಗ್ರಹಿಸಿ ತಮ್ಮ ಬಜೆಟ್‌ನಲ್ಲಿ ಬಳಸಿಕೊಂಡಿದ್ದು, ತಿರುಗಿ ಜಲಾಶಯಕ್ಕೆ ಖರ್ಚು ಮಾಡಲು ಯಾವುದೇ ಸರಕಾರ ಮುಂದೆ ಬರುತ್ತಿಲ್ಲ.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೂಡಲೇ ಬಚಾವತ್ ಟ್ರಿಬ್ಯೂನಲ್ ಆದೇಶದಂತೆ ಎರಡು ರಾಜ್ಯಗಳಿಗೆ ನೀರು ಹಂಚಿಕೆ ಮಾಡಿ ಹೂಳೆತ್ತುವ ಕಾರ್ಯ ರೈತರಿಗೆ ಒಪ್ಪಿಸಬೇಕು. ರೈತರಿಂದ ಸಂಗ್ರಹಿಸಿದ ನೀರಿನ ತೆರಿಗೆಯಲ್ಲಿ ಭಾಗಶಃ ೨೫% ರಷ್ಟು ರೈತರಿಗೆ ಕೊಟ್ಟರೂ ರೈತರು ಲಕ್ಷಾಂತರ ಟ್ರ್ಯಾಕ್ಟರ್‌ಗಳು ವಾಹನಗಳಿಂದ ಹೂಳನ್ನು ನಾಲ್ಕೇ ವರ್ಷಗಳಲ್ಲಿ ತೆಗೆಯುತ್ತಾರೆ.

ಕಾರ್ಪೋರೇಟ್ ವಿದೇಶಿ ಬಂಡವಾಳಗಾರರಿಗೆ ಒತ್ತಿ ಬಿದ್ದ ಸರಕಾರ ಜಲಾಶಯವನ್ನು ಖಾಸಗಿಕರಣ ಮಾಡುವ ಪ್ರಯತ್ನ ಮಾಡಿದರೆ ಹೈದ್ರಾಬಾದ್ ಕರ್ನಾಟಕದ ಪ್ರದೇಶದ ರೈತರು ದಂಗೆ ಏಳುತ್ತಾರೆಂದು ತುಂಗಭದ್ರಾ ಜಲಾಶಯ ಉಳಿಸಿ ಆಂದೋಲನ ಸಮಿತಿ ಸರಕಾರವನ್ನು ಎಚ್ಚರಿಸಿವೆ.

Leave a Reply

Top