ತುಂಗಭದ್ರಾ ಕಾಲುವೆಗಳಿಗೆ ಆನ್ ಅಂಡ್ ಆಫ್ ವ್ಯವಸ್ಥೆ ಮೂಲಕ ನೀರು ಬಿಡುಗಡೆ

tb-dam ತುಂಗಭದ್ರಾ ಜಲಾಶಯದಿಂದ ವಿವಿಧ ಕಾಲುವೆಗಳಿಗೆ ಪ್ರಸಕ್ತ ಮುಂಗಾರು ಹಂಗಾಮಿಗಾಗಿ, ನೀರು ಹರಿಸುವಿಕೆ ಹಾಗೂ ನೀರು ನಿಲುಗಡೆ (ಆನ್ ಅಂಡ್ ಆಫ್ ವ್ಯವಸ್ಥೆ) ವ್ಯವಸ್ಥೆಯಡಿ ನೀರು ಹರಿಸಲು ನಿರ್ಧರಿಸಲಾಗಿದ್ದು, ರೈತ ಬಾಂಧವರು ಜಲಸಂಪನ್ಮೂಲ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಭೋಜಾನಾಯ್ಕ ಕಟ್ಟಿಮನಿ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ತುಂಗಭದ್ರಾ ನೀರಾವರಿ ಸಲಹಾ ಸಮಿತಿಯ ತುರ್ತು ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು. ಇದರನ್ವಯ ವಿವಿಧ ಕಾಲುವೆಗಳಿಗೆ ನೀರು ಒದಗಿಸುವ ಮತ್ತು ಸ್ಥಗಿತಗೊಳಿಸುವ ಕಾಲಾವಧಿ ವಿವರ ಇಂತಿದೆ.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ : ಈ ಕಾಲುವೆಗೆ ಸೆ. ೨೬ ರವರೆಗೆ ನೀರು ನಿಲುಗಡೆ ಮಾಡಲಾಗುವುದು. ಸೆ. ೨೭ ರಿಂದ ಅ. ೧೬ ರವರೆಗೆ ಸರಾಸರಿ ೩೩೦೦ ಕ್ಯೂಸೆಕ್‌ನಂತೆ ಕಾಲುವೆಗೆ ನೀರು ಹರಿಸಲಾಗುವುದು. ಅ. ೧೭ ರಿಂದ ೨೬ ರವರೆಗೆ ನೀರು ನಿಲುಗಡೆ ಮಾಡಲಾಗುವುದು. ಅ. ೨೭ ರಿಂದ ನ. ೨೦ ರವರೆಗೆ ಸರಾಸರಿ ೩೩೦೦ ಕ್ಯೂಸೆಕ್‌ನಂತೆ ಕಾಲುವೆಗೆ ನೀರು ಹರಿಸಲಾಗುವುದು.
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ : ಈ ಕಾಲುವೆಗೆ ಸೆ. ೨೬ ರವರೆಗೆ ನೀರು ನಿಲುಗಡೆ ಮಾಡಲಾಗುವುದು. ಸೆ. ೨೭ ರಿಂದ ಅ. ೧೧ ರವರೆಗೆ ಸರಾಸರಿ ೬೦೦ ಕ್ಯೂಸೆಕ್ ನಂತೆ ಕಾಲುವೆಗೆ ನೀರು ಹರಿಸಲಾಗುವುದು. ಅ. ೧೨ ರಿಂದ ಅ. ೨೧ ರವರೆಗೆ ನೀರು ನಿಲುಗಡೆ ಮಾಡಲಾಗುವುದು. ಅ. ೨೨ ರಿಂದ ನ. ೦೫ ರವರೆಗೆ ೬೦೦ ಕ್ಯೂಸೆಕ್‌ನಂತೆ ಕಾಲುವೆಗೆ ನೀರು ಹರಿಸಲಾಗುವುದು. ನ. ೦೬ ರಿಂದ ನ. ೧೫ ರವರೆಗೆ ಕಾಲುವೆಗೆ ನೀರು ನಿಲುಗಡೆ. ನ. ೧೬ ರಿಂದ ನ. ೨೦ ರವರೆಗೆ ಸರಾಸರಿ ೬೦೦ ಕ್ಯೂಸೆಕ್‌ನಂತೆ ನೀರು ಹರಿಸಲಾಗುವುದು.
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ : ಈ ಕಾಲುವೆಗೆ ಸೆ. ೨೬ ರವರೆಗೆ ನೀರು ನಿಲುಗಡೆ ಮಾಡಲಾಗುವುದು. ಸೆ. ೨೭ ರಿಂದ ಅ. ೧೧ ರವರೆಗೆ ಸರಾಸರಿ ೧೧೦೦ ಕ್ಯೂಸೆಕ್ ನಂತೆ ಕಾಲುವೆಗೆ ನೀರು ಹರಿಸಲಾಗುವುದು. ಅ. ೧೨ ರಿಂದ ಅ. ೨೧ ರವರೆಗೆ ನೀರು ನಿಲುಗಡೆ ಮಾಡಲಾಗುವುದು. ಅ. ೨೨ ರಿಂದ ನ. ೦೫ ರವರೆಗೆ ೧೧೦೦ ಕ್ಯೂಸೆಕ್‌ನಂತೆ ಕಾಲುವೆಗೆ ನೀರು ಹರಿಸಲಾಗುವುದು. ನ. ೦೬ ರಿಂದ ನ. ೧೫ ರವರೆಗೆ ಕಾಲುವೆಗೆ ನೀರು ನಿಲುಗಡೆ. ನ. ೧೬ ರಿಂದ ನ. ೨೦ ರವರೆಗೆ ಸರಾಸರಿ ೧೧೦೦ ಕ್ಯೂಸೆಕ್‌ನಂತೆ ನೀರು ಹರಿಸಲಾಗುವುದು.
ರಾಯ ಬಸವಣ್ಣ ಕಾಲುವೆಗೆ ಸೆ. ೧೭ ರಿಂದ ಡಿಸೆಂಬರ್ ೧೦ ರವರೆಗೆ ೧೬೦ ಕ್ಯೂಸೆಕ್‌ನಂತೆ ನೀರು ಹರಿಸಲಾಗುವುದು. ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹಣೆ ಕಡಿಮೆ ಇದ್ದು, ಲಭ್ಯವಾಗುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ರೈತರು ಮುಂಗಾರು ಹಂಗಾಮಿಗೆ ಲೋಕಲೈಜ್ ಆದ ಅಚ್ಚುಕಟ್ಟಿನಲ್ಲಿ ನಿಗದಿತ ಬೆಳೆಗಳನ್ನು ಮಾತ್ರ ಬೆಳೆಯಬೇಕು. ಎಲ್ಲಾ ಕಾಲುವೆಯಡಿ ಈಗ ತಿಳಿಸಿರುವಂತೆ ಅಥವಾ ಕಾಲುವೆಗಳಡಿ ನೀರು ಲಭ್ಯತೆಯ ಅನುಸಾರ ಹರಿಸಲಾಗುವುದು. ಇದರಲ್ಲಿ ಯಾವುದು ಮೊದಲೋ ಅದು ಅನ್ವಯಿಸುತ್ತದೆ ಎಂದು ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಭೋಜಾನಾಯ್ಕ ಕಟ್ಟಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error