You are here
Home > Koppal News-1 > ತಾಲೂಕು ಕ್ರೀಡಾಂಗಣ ರಕ್ಷಣೆಗೆ ಮನವಿ

ತಾಲೂಕು ಕ್ರೀಡಾಂಗಣ ರಕ್ಷಣೆಗೆ ಮನವಿ

koppal_dc

ಯುವ ಕ್ರಿಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ಬೆಳಕಿಗೆ ತರಲು ಸರಿಯಾದ ಮೈದಾನವಿಲ್ಲದೆ ಪ್ರತಿಭಾನ್ವಿತ ಯುವಕರು ತಮ್ಮ ಪ್ರತಿಭೆಯನ್ನು ರಾಜ್ಯಮಟ್ಟದಲ್ಲಿ, ರಾಷ್ಟ್ರೀಯ ಮಟ್ಟದಲ್ಲಿ ತೊರಿಸಲು ಸಾದ್ಯವಾಗುತ್ತಿಲ್ಲ ಆದರಿಂದ ಜಿಲ್ಲಾ ಕೇಂದ್ರವಾಗಿ ಸುಮರು ೧೭ ವರ್ಷ ಕಳೆದರೂ ಒಮದು ಸುಸಜ್ಜಿತ ತಲುಕು ಕ್ರಿಡಾಂಗಣ ಇಲ್ಲದಿರುವುದು ದುರಂತವೆ ಸರಿ. ಆದ್ದರಿಂದ ಇರುವ ಮೈದಾನವನ್ನೆ ಕೇವಲ ಕ್ರೀಡೆಗೆ ಮೀಸಲಿಟ್ಟು ಕ್ರೀಡಾ ಪಟುಗಳು ರಾಜ್ಯಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಮಿಂಚಿ ಕೊಪ್ಪಲದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ರಾರಾಜಿಸುವ ಹಾಗೇ ಈ ತಾಲುಕು ಕ್ರೀಡಾಂಗಣ ಮೊದಲ ಹೆಜ್ಜೆಯಾಗಿ ಪ್ರಾರಂಭವಾಗಬೇಕು.
ಕೆಲವು ದಿನಗಲ ಹಿಂದೆ ಅಧಿಕಾರಿ ವರ್ಗದವರು ಮೈದಾನದಲ್ಲಿ ಡಿಗ್ರಿ ಕಾಲೇಜಿನ ಆಡಿಯೋಟರಂ ಹಾಗು ಪ್ರಥಮ ದರ್ಜೆ ಮಹಿಳಾ ಕಾಲೇಜನ್ನು ಸ್ಥಾಪಿಸಲು ರುಪರೇಷ ತಯಾರಿಸಿದ್ದು ಇದನ್ನು ರದ್ದುಪಡಿಸಿ ಕೇವಲ ತಾಲೂಕು ಕ್ರೀಡಾಂಗಣಕ್ಕೆ ಮೀಸಲಿಡಬೇಕೆಂದು ಸಾರ್ವಜನಿಕ ತಾಲೂಕು ಕ್ರೀಡಾಂಗಣ ರಕ್ಷಣೆ ಹಾಗೂ ಹೋರಾಟ ಸಮಿತಿ ಕೊಪ್ಪಳ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಪಾಶಾ ಮಾನ್ವಿ, ಅಧ್ಯಕ್ಷರಾದ ಆದಿಲ್ ಪಟೇಲ್, ಉಪಾಧ್ಯಕ್ಷರಾದ ಮಹಾಂತೇಶ ಹಾನಗಲ್, ಕ್ರೀಡಾ ಪಟುಗಳಾದ ಯುಸುಫ್ ಮಾಳೆಕೊಪ್ಪ, ಮೋಹಿದ್ದಿನ್ ವರ್ದಿ, ಸೈಯದ್ ಅಖ್ತರ್ ಹುಸೇನಿ ಬುಡ್ಡು, ಅಮ್ಮದ್ ಪಾಶಾ, ಶಿವುಕುಮಾರ ಟಾಂಗದ್, ಬಾಬು ಅಳಳ್ಳಿ, ಮಲ್ಲಿಕಾರ್ಜುನ ಬೆಲ್ಲದ, ಇಸ್ಮಾಯಿಲ್ ಅರಗಂಜಿ, ಮಂಜುನಾಥ ಕರ್ಕಿಹಳ್ಳಿ, ರವಿಕುಮಾರ ಹಡಪದ, ನಿಂಗಪ್ಪ ಮೂಗಿನ್, ನಾಗಪ್ಪ ಕಲ್ಲನವರ ಹಾಗೂ ಜೆ.ಡಿ.ಎಸ್ ಯುವ ನಗರ ಘಟಕದ ಅಧ್ಯಕ್ಷರಾದ ಮಹೆಬುಬ್ ಹುಸೇನಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply

Top