ತರಬೇತಿ ಸಮಯದಲ್ಲಿ ಪಡೆಯುವ ಜ್ಞಾನ ಮಹತ್ವದಾಗಿದೆ:ಬೀರಪ್ಪ ಅಂಡಗಿ

birappa_andagi_koppal
ಕೊಪ್ಪಳ: ನೇಮಕಾತಿ ಪೂರ್ವ ತರಬೇತಿ ಸಮಯದಲ್ಲಿ ಪಡೆಯಲಾಗುವ ಜ್ಞಾನ ಬಹಳ ಮಹತ್ವದಾಗಿದೆ ಎಂದು ಸಿ.ಪಿ.ಎಸ್.ಶಾಲೆಯ ಮುಖ್ಯೋಪಾಧ್ಯಾಯರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬಿ.ಎಡ್.ವಿದ್ಯಾರ್ಥಿಗಳ ರೂಢಿ ಬೋಧಾನಾ ಮುಕ್ತಾಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತ,ಪ್ರತಿಯೊಂದು ವೃತ್ತಿಗೆ ಸೇರುವ ಮುನ್ನ ನೀಡಲಾಗುವ ತರಬೇತಿ ಸಮಯದಲ್ಲಿನ ಜ್ಞಾನ ಬಹಳ ಮಹತ್ವದಾಗಿದೆ.ವೃತ್ತಿಗೆ ಸೇರಿದ ನಂತರ ಮಾಡಬೇಕಾದ ಕಾರ್ಯಗಳ ಕುರಿತು ಸಂಪೂರ್ಣವಾದ ವಿಷಯವನ್ನು ಪಡೆಯಬೇಕು.ಶಿಕ್ಷಣ ಕ್ಷೇತ್ರ ಸದಾ ಬದಲಾವಣೆಯನ್ನು ಹೊಂದುವ ಕ್ಷೇತ್ರವಾಗಿದೆ.ಬದಲಾವಣೆಗೆ ತಕ್ಕಂತೆ ಮಕ್ಕಳಿಗೆ ಶಿಕ್ಷಣ ನೀಡಬೇಕಿದೆ.ಶಿಕ್ಷಕರಾದವರು ಸದಾ ಅಧ್ಯಯನಶೀಲ ಪ್ರವೃತ್ತಿಯನ್ನು ಬೆಳಿಸಿಕೊಳ್ಳಬೇಕು.ಶಿಕ್ಷಕರ ವೃತ್ತಿ ಪವಿತ್ರವಾದ ವೃತ್ತಿಯಾಗಿರುವುದರಿಂದ ವೃತ್ತಿ ಗೌರವವವನ್ನು ಕಾಪಾಡಿಕೊಳ್ಳಬೇಕು.ವಿದ್ಯಾರ್ಥಿ ಜೀವನದಲ್ಲಿ ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು.ವಿದ್ಯಾರ್ಥಿಗಳು ಕೂಡಾ ಶಿಕ್ಷಕರು ಮಾಡುವ ಪಾಠಗಳನ್ನು ಸರಿಯಾದ ರೀತಿಯಲ್ಲಿ ಆಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗವಿಸಿದ್ದೇಶ್ವರ ಬಿ.ಎಡ್.ಮಹಾವಿದ್ಯಾಲಯದ ಉಪನ್ಯಾಸಕರಾದ ರೇಣುಕಾನಂದ ಅಂಗಡಿ ಮಾತನಾಡಿ,ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಬ್ಬರಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.ವಿದ್ಯಾರ್ಥಿಗಳು ದೂರದರ್ಶನದಲ್ಲಿ ಪ್ರಸಾರವಾಗುವ ಉಪಯುಕ್ತವಾದ ಮಾಹಿತಿಯನ್ನು ಮಾತ್ರ ವಿಕ್ಷಣೆ ಮಾಡಬೇಕು.ಅನುಪಯುಕ್ತವಾದ ಕಾರ್ಯಕ್ರಮಗಳ ವಿಕ್ಷಣೆಯನ್ನು ಕಡಿಮೆ ಮಾಡಬೇಕು.ಪ್ರಯತ್ನದಿಂದ ಮಾತ್ರ ಯಶಸ್ವಿಯಾಗಲು ಸಾಧ್ಯ.ಪ್ರಯತ್ನವೇ ಗೆಲುವಿಗೆ ದಾರಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಬಿ.ಎಡ್.ಪ್ರಶಿಕ್ಷಣಾರ್ಥಿ ನಂದಿನಿ ನಿರೂಪಿಸಿದರು.ವಿದ್ಯಾರ್ಥಿಗಳಾದ ಭೂಮಿಕಾ ಹಾಗೂ ಪವಿತ್ರಾ ಪ್ರಾರ್ಥನೆ ನೇರವೇರಿಸಿದರು.ಬಿ.ಎಡ್.ಪ್ರಶಿಕ್ಷಣಾರ್ಥಿ ಬಸವನಗೌಡ ಸ್ವಾಗತಿಸಿ,ಸಿದ್ದರಾಮಯ್ಯಾ ವಂದಿಸಿದರು.

Please follow and like us:
error