ತನ್ವೀರ್ ಸೇಠ್ ಪ್ರಕರಣದ ವಿಚಾರಣೆ ಸಿಐಡಿಗೆ: ಮುಖ್ಯಮಂತ್ರಿ

ಬೆಂಗಳೂರು, ನ.14: ಶಿಕ್ಷಣ ಸಚಿವ ತನ್ವೀರ್ ಸೇಠ್ ಪ್ರಕರಣ ಕುರಿತು ಸಿಐಡಿಯ ಸೈಬರ್ ಕ್ರೈಂ ವಿಭಾಗ ವಿಚಾರಣೆ ನಡೆಸಲಿದೆ. ಸಚಿವರು ಘಟನೆ ಕುರಿತು ತಮಗೆ ಸಂಪೂರ್ಣ ವಿವರಣೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ಸಿಐಡಿಗೆ ಸೂಚಿಸಲಾಗಿದೆ ಎಂದು Siddaramaiah-cmಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಿಜೆಪಿ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಬಿಜೆಪಿಯವರು ಹೇಳಿದಂತೆ ಮಾಡಲಿಕ್ಕೆ ಆಗದು. ಸಚಿವರು ತಪ್ಪುಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಅನಿಸುವುದಿಲ್ಲ. ಟಿಪ್ಪುಜಯಂತಿಯಲ್ಲಿ ಭಾಗವಹಿಸಿದ್ದಾಗ ಮೈಸೂರು, ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಘಟನಾವಳಿಗಳ ಬಗ್ಗೆ ಬಂದಿದ್ದ ಸಂದೇಶಗಳನ್ನು ಓದುತ್ತಿದ್ದುದಾಗಿ ಸಚಿವರು ಹೇಳಿದ್ದಾರೆ ಎಂದು ತಿಳಿಸಿದರು. ಘಟನೆ ಕುರಿತು ಹೈಕಮಾಂಡ್ ಜೊತೆ ತಾವು ಮಾತನಾಡಿಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಪಕ್ಷದ ದಿಲ್ಲಿ ನಾಯಕರು ಮಾತನಾಡಿದ್ದಾರೆ ಎಂದು ಸಿದ್ದರಾಮಯ್ಯ ವಿವರಿಸಿದರು.

Leave a Reply