ತಂದೆ-ತಾಯಿ ಶವದ ಮುಂದೇ ಮಗುವಿನ ಆಟ

koppal-death

ಜೀವ ಕಳೆದುಕೊಂಡ ದಂಪತಿಗಳ ದೇಹ, ತಂದೆ ತಾಯಿ ಮೃತ ದೇಹಗಳ ಮುಂದೇ ಏನು ಅರಿಯದೇ ಓಡಾಡಿಕೊಂಡಿರುವ ಮಗು, ಇದನ್ನು ನೋಡಿ ಆಯ್ಯೋ ಎಂದು ಕನಿಕರ ಪಡುತ್ತಿರುವ ಸ್ಥಳೀಯರು. ಈ ಹೃದಯವಿದ್ರಾವಕ ದೃಶ್ಯಗಳು ಕಂಡು ಬಂದಿದ್ದು ಕೊಪ್ಪಳ ತಾಲೂಕಿನ ಸುಕ್ಷೇತ್ರ ಹುಲಗಿ ಗ್ರಾಮದ ಮುನಿರಾಬಾದ್ ರೈಲ್ವೇ ನಿಲ್ದಾಣದಲ್ಲಿ. ಹೌದು. ಇಂದು ಬೆಳಿಗ್ಗೆ ರೈಲ್ವೇ ನಿಲ್ದಾಣದಲ್ಲಿ ಎರಡು ಮೃತ ದೇಹದ ಮುಂದೇ ಅಳುತ್ತ ಕುಳಿತಿದ್ದ ಮಗುವನ್ನ ಕಂಡು ಸ್ಥಳೀಯರು ಬಂದು ವಿಚಾರಿಸಿದಾಗ ಇಬ್ಬರ ದಂಪತಿಗಳು ಸಾವನ್ನಪ್ಪಿದ್ದು ಬೆಳಕಿಗೆ ಬಂದಿದೆ. ಆಗ ಸ್ಥಳೀಯರೆ ಮಗುವನ್ನು ಎತ್ತಿಕೊಂಡು ಸಮಾದಾನ ಪಡಿಸಿದ್ದಾರೆ. ತಿನ್ನಲು ತಿಂಡಿ ಕೊಟ್ಟು ವಿಚಾರಣೆ ನಡೆಸಿದಾಗ, ಕೇವಲ ಅಣ್ಣಿಗೇರಿ ಎಂದು ಹೇಳುತ್ತಿದೆ ಹೊರತು ಬೇರೆ ಏನು ಹೇಳಲಿಲ್ಲ, ಈ ಅಪರಿಚಿತ ಶವಗಳನ್ನು ಕಂಡ ಸ್ಥಳೀಯರು ಕೂಡಲೆ ಮುನಿರಾಬಾದ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಮುನಿರಾಬಾದ್ ಪೊಲೀಸರು ಸ್ಥಳಕ್ಕೇ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದಾಗ ಮೃತನ ಜೇಬಿನಲ್ಲಿ ಮೊಬೈಲ್ ಪತ್ತೆಯಾಗಿದೆ. ಆಗ ಧಾರ ವಾಡ ಜಿಲ್ಲೆಯ ಅಣ್ಣಿಗೆರಿ ನಿವಾಸಿ ಈರಣ್ಣ ತಳವಾರ್ ಎಂದು ತಿಳಿದು ಬಂದಿದೆ. ರೈಲು ನಿಲ್ದಾಣದಲ್ಲಿ ಘಟನೆ ನಡೆದಿರುವುದರಿಂದ ಇದು ಗದಗ ರೈಲ್ವೇ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತೆ. ಹೀಗಾಗಿ ಮೃತ ದೇಹಳನ್ನು   ರೈಲ್ವೇ ಪೊಲೀಸರಿಗೆ ಒಪ್ಪಿಸಲಾಗಿದ್ದು ಗದಗನಲ್ಲಿ ಪೋಸ್ಟ್ ಮಾರ್ಟಂ ನಡೆಯಲಿದೆ. ಮೃತ ದೇಹದ ಬಳಿ ಹ್ಯಾಂಡೀಕ್ಯಾಪ್ ನವರು ಬಳಸುವ ಸ್ಟ್ಯಾಂಡ್ ಇದ್ದು, ಮಗುವನ್ನ ಹೊರತುಪಡಿಸಿ ದಂಪತಿಗಳಷ್ಟೇ ಸಾವೀಗಿಡಾಗಿರುವುದು ಆತ್ಮಹತ್ಯೆಯ ಶಂಕೆ ಮೂಡಿಸಿದೆ. ಮೃತ ದೇಹಗಳ ಬಾಯಿಯಿಂದ ನೊರೆ ಬರುತ್ತಿರುವುದರಿಂದ ವಿಷ ಸೇವನೆ ಮಾಡಿರಬಹುದು ಎಂದು ಶಂಕಿಸಲಾಗುತ್ತಿದೆ.  ತಮ್ಮ ಊರಿನಿಂದ ಬಂದು ಮುನಿರಾಬಾದ್ ನಲ್ಲಿ  ವಿಷ ಸೇವನೆ ಮಾಡಿದರೆ ಹೇಗೆ ? ಯಾವ ಕಾರಣಕ್ಕಾಗಿ ದಂಪತಿಗಳು ಸಾವಿಗೀಡಾಗಿದ್ದು ಎಂದು ರೈಲ್ವೇ ಪೊಲೀಸರು ತನಿಖೆ ಮೂಲಕ ತಿಳಿಯ ಬರಬೇಕಿದೆ. ಆದ್ರೆ ತಂದೇ ತಾಯಿ ಶವದ ಮುಂದೇ ಮಗುವಿನ ಆಟ ಸ್ಥಳೀಯರನ್ನು ಮನಕುಲುವಂತೆ ಮಾಡಿತ್ತು, ಏನು ಅರಿಯದ ಕಂಡ ಅನಾಥವಾಗಿದ್ದು ದುರದೃಷ್ಠವೇ ಸರಿ. ಗದಗ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

koppal-munirabad-station (1) koppal-munirabad-station (2)

 

Please follow and like us:

Leave a Reply